ಅಥಣಿ 04: ಅಥಣಿ ತಾಲೂಕಿನ ಕುಸನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮೋಳವಾಡ ಗ್ರಾಮವು ಹಿಪ್ಪರಗಿ ಆಣೆಕಟ್ಟು ಯೋಜನೆ ಅಡಿಯಲ್ಲಿ ಮುಳಗಡೆಯಾಗಿದ್ದು ಮುಳಗಡೆಯಾದ ಕಾರಣ ನೀಡಿರುವ ಪುನರ್ವಸತಿ ಸ್ಥಳವನ್ನು ಬೇರೆ ಸ್ಥಳಕ್ಕೆ ವಗರ್ಾಯಿಸಬೇಕೆಂದು ಒತ್ತಾಯಿಸಿದರು.
ಅಥಣಿ ತಾಲೂಕಿನಲ್ಲಿರುವ ಮುಳವಾಡ ಗ್ರಾಮವು ಹಿಪ್ಪರಗಿ ಆಣೆಕಟ್ಟು ಯೋಜನೆ ಅಡಿಯಲ್ಲಿ ಮುಳಗಡೆಯಾಗಿದ್ದು ಮುಳಗಡೆಯಾದ ಕಾರಣ ಸದರಿ ಗ್ರಾಮದ ಪುನರ್ವಸತಿ ಕೇಂದ್ರ 11ರಲ್ಲಿ ಬರುವ ಉಗಾರ ಬದ್ರುಕ ಗ್ರಾಮದ ಜಮೀನಿನಲ್ಲಿ ಸ್ಥಳಾಂತರಿಸಿದ್ದು ಈ ಜಮೀನಿನಲ್ಲಿ ವಾಸಿಸಲು ಯೋಗ್ಯವಿಲ್ಲದ ಕಾರಣ ಆ ಸ್ಥಳವನ್ನ ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿ ನೀರಾವರಿಯ ಇಲಾಖೆಯ ಉಪ ಶಿರಸ್ತೆದಾರರಾದ ಕೆ.ಎಸ್.ದಯಾನಂದ ಇವರಿಗೆ ಶುಕ್ರವಾರ ಬೆಳಿಗ್ಗೆ ಮನವಿ ಸಲ್ಲಿಸಿದರು. ಅಲ್ಲಿರುವ ಅಧಿಕಾರಿಗಳು ಮೊಳವಾಡ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ವಾಸಿಸಲು ಯೊಗ್ಯವಿಲ್ಲದ ಸ್ಥಳವನ್ನ ಕೊಟ್ಟಿರುತ್ತಾರೆ ಅದ ಕಾರಣ ಜನರ ಅನುಕೂಲಕ್ಕಾಗಿ ಹಾಗೂ ಹಿತದೃಷ್ಟಿಯಿಂದ ಹೊಸ ಸ್ಥಳವನ್ನಾಗಿ ಉಗಾರ ಬಿ.ಕೆ ಹತ್ತಿರ ಲೋಕುರ ರಸ್ತೆಯ ಸ್ಥಳದಲ್ಲಿ ಪುನರ್ವಸತಿ ಕೇಂದ್ರವನ್ನು ಮಂಜೂರು ಮಾಡಬೇಕೆಂದು ಮೋಳವಾಡ ಗ್ರಾಮದ ವಿವಿಧ ಸಮಾಜದ ಹಿರಿಯ ಹಾಗೂ ಮುಖಂಡರು ಆಗ್ರಹಿಸಿದರು.
ಬಿಎಸ್ಪಿ ಕಾಗವಾಡ ಬ್ಲಾಕ ಅಧ್ಯಕ್ಷ ವಿದ್ಯಾಧರ ಮೌರ್ಯ, ಗ್ರಾ.ಪಂ ಸದಸ್ಯರ ರವೀಂದ್ರ ಜಾಧವ, ರಾಮಕೃಷ್ಣ ಕೊಟನೀಸ್, ಅಶೋಕ ಮಾಂಗ , ದಯಾನಂದ ಕೆರೂರ, ಹಣಮಂತ ಕಾಂಬಳೆ, ರಾವಸಾಬ ಬಂಡಾರೆ, ಸಾವಂತ ಮಾಂಗ, ದಿಲಿಪ ಮಾಂಗ, ಗೌತಮ್ ಕಾಂಬಳೆ, ಬಾವುಸಾಬ ಕಾಂಬಳೆ, ರಾಜು ಕಾಂಬಳೆ, ಗಣಪತಿ ಕಾಂಬಳೆ, ಮಾರುತಿ ಕಾಂಬಳೆ, ಭಾಸ್ಕರ ಹಲ್ಯಾಳ, ಭರಮು ಕಾಂಬಳೆ, ರಮೇಶ ಬಿರಡಿ, ಧನಪಾಲ ಬಿರಡಿ, ಕುಮಾರ ಕಾಂಬಳೆ, ಶಂಕರ ಕಾಂಬಳೆ, ಶಿವಾಜಿ ಕಾಂಬಳೆ, ಅಣ್ಣಾಸಾಬ ಕಾಂಬಳೆ, ನಿತೀನ ಕಾಂಬಳೆ, ರಾಮು ಕಾಂಬಳೆ, ಮೋಹನ ಕಾಂಬಳೆ ಹಾಗೂ ಜೈ ಭೀಮ ಸಂಘದ ಮುಖಂಡರು ಭಾಗಿಯಾಗಿದ್ದರು.