ಸ್ಥಗಿತಗೊಂಡ ರೈಲ್ವೇ ಮೇಲ್ವೇತುವೆ ಕಾಮಗಾರಿ
ಗದಗ 27: ಗದಗ ನಗರದ ಗಂಗಾಪುರ ಪೇಟೆಯಲ್ಲಿರುವ ಮಾನವ ಚಾಲಿತ ರೈಲ್ವೆ ಗೇಟ್ ಸಂಖ್ಯೆ 32.ಗೆ ಸುಮಾರು 8 ಎಂಟು ವರ್ಷಗಳಿಂದ ಪೂರ್ಣಗೊಳ್ಳದ ರೈಲ್ವೆ ಮೇಲ್ಲೇತುವೆಯ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು ಪುನರಾರಂಭಿಸಿ ಕೂಡಲೆ ಪೂರ್ಣಗೊಳಿಸಬೇಕು ಮತ್ತು ಅದೆ ರೈಲ್ವೇ ಮೇಲ್ಲೇತುವೆಗೆ ಪರಮಪೂಜ್ಯ ಶ್ರೀ ಲಿಂ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ ಹೇಸರು ಹಾಗೂ ಸವಿತಾ ಮಹರ್ಷಿ ವೃತ್ತದಿಂದ ನರಗುಂದ ಮಾರ್ಗದಲ್ಲಿ ನಿರ್ಮಿಸಿರುವ ಬೃಹತ್ ರೈಲ್ವೇ ಮೇಲ್ಲೇತುವೆಗೆ ದಿ?ಬಿ.ಜಿ.ಅಣ್ಣಿಗೇರಿ ಗುರುಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದಿಂದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಸನ್ಮಾನ್ಯ ಶ್ರೀ ಬಸವರಾಜ ಭೋಮ್ಮಾಯಿ ಅವರಿಗೆ 2 ನೇ ಬಾರಿ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿ ಒತ್ತಾಯಿಸಿದ್ದಾರೆ
ಈ ಭಾಗದಲ್ಲಿ ಶಾಲೆ, ಸ್ಮಶಾನ ಮತ್ತು ಜಮೀನುಗಳು ಇರುವುದರಿಂದ ಗಂಗಾಪೂರ ಪೇಟ ಮಾರ್ಗವಾಗಿ ಎಸ್.ಎಂ.ಕೃಷ್ಣ ನಗರ, ಬಳಗಾನೂರ ಮತ್ತು ಹೊಂಬಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಈ ಮಾರ್ಗದಿಂದ ಬಹಳಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ರೈತರು ಓಡಾಡುತ್ತಾರೆ. ಈ ರಸ್ತೆ ಕಾಮಗಾರಿಯು ಅಪೂರ್ಣ ಗೊಂಡಿರುವುದರಿಂದ ಗಂಗಾಪೂರ ಪೇಟೆ ಸೇರಿದಂತೆ ಎರಡು ಕಡೆ ವ್ಯಾಪಾರ-ವಹಿವಾಟು ಸಂಪೂರ್ಣ ತಟಸ್ಥಗೊಂಡಿರುತ್ತದೆ ಮತ್ತು ಪೂಜ್ಯನೀಯ ಲಿಂ? ಶಿವಕುಮಾರ ಸ್ವಾಮೀಜಿ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಕೊಡುಗೆ ಅಪಾರ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಹಲವಾರು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ, ಆ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ ಅದರಂತೆ ಗದಗ ನಗರದ ಶಿಕ್ಷಕ ಯೋಗಿ ಬಿ.ಜಿ.ಅಣ್ಣಿಗೇರಿ ಗುರುಗಳು ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು. ಶಿಕ್ಷಕರ ದಿನಾಚರಣೆಯಂತೆ ಇಹಲೋಕ ತ್ಯಜಿಸಿರುವುದು ಅತ್ಯಂತ ನೋವಿನ ಸಂಗತಿ. ಅವರು ಬಡವ-ಬಲ್ಲಿದ, ಜಾತಿ ಭೇದವಿಲ್ಲದೇ ಎಲ್ಲರಿಗೂ ಉಚಿತ ಊಟ, ವಸತಿಯೊಂದಿಗೆ ಜ್ಞಾನ ದೀವಿಗೆ ಬೆಳಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮವಾಗಿ ಗಂಗಾಪುರ ಪೇಟೆಯ ಹೊಂಬಳ ನಾಕಾ ರೈಲ್ವೇ ಮೇಲ್ಲೇತುವೆಗೆ ಪರಮಪೂಜ್ಯ ಶ್ರೀ ಲಿಂ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಹಾಗೂ ಸವಿತಾ ಮಹರ್ಷಿ ವೃತ್ತದಿಂದ ನರಗುಂದ ಮಾರ್ಗದಲ್ಲಿ ನಿರ್ಮಿಸಿರುವ ಬೃಹತ್ ರೈಲ್ವೇ ಮೇಲ್ಲೇತುವೆಗೆ ದಿ?ಬಿ.ಜಿ.ಅಣ್ಣಿಗೇರಿ ಗುರುಗಳ ಹೆಸರನ್ನು ನಾಮಕರಣ ಮಾಡಬೆಕೇಂದು ಮನವಿಯಲ್ಲಿ ತಿಳಿಸಲಾಗಿದೆ
ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಸನ್ಮಾನ್ಯ ಬಸವರಾಜ ಭೋಮ್ಮಾಯಿ ಅವರು ಹೊಂಬಳನಾಕಾ ಸಂಘದ ಮನವಿ ಸ್ವಿಕರಿಸಿ ಮಾತನಾಡಿ ಸರ್ವರಿಗೆ ಅನಕುಲವಾಗಲಿರುವ ರೈಲ್ವೆ ಮೆಲ್ಸೇತುವೆ ಕಾಮಗಾರಿ ಕೆಲವೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಅದಕ್ಕೆ ಅಗತ್ಯ ಸೂಚನೆ ನಿಡಲಾಗಿದೆ ಹಾಗೂ ಪೂಜ್ಯನೀಯ ಲಿಂ? ಶಿವಕುಮಾರ ಸ್ವಾಮೀಜಿಗಳ ಹೇಸರು ಮತ್ತು ನಮ್ಮ ತಂದೆ ಅವರ ಸ್ನೇಹಿತರಾದ ಬಿ.ಜಿ.ಅಣ್ಣಿಗೇರಿ ಗುರುಗಳ ಹೆಸರನ್ನು ಮನವಿಮಾಡಿದ ತಮ್ಮಗಳನ್ನು ಕರೆಸಿಕೊಂಡು ನಾಮಕರಣ ಆದೇಶ ಮಾಡಿಸಿಕೊಡುತ್ತೆನೆ ಎಂದು ಬರವರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಿರಿಯರಾದ ಎಸ್ ವಿ ಸಂಕನೂರ. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸಿದ್ದು ಪಲ್ಲೇದ. ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ರವಿ ದಂಡಿನ. ಹೊಂಬಳನಾಕಾ ಸಂಘದ ಕಾರ್ಯಾಧ್ಶಕ್ಷರಾದ ಪರಶುರಾಮ ಅಣ್ಣಿಗೇರಿ. ಪ್ರಮುಖ ಪದಾಧಿಕಾರಿಗಳಾದ ಉಮೇಶ ಬೆಳಧಡಿ. ಮಂಜುನಾಥ ಕಕ್ಕೇರಿ. ಹಾಗೂ ಓಣಿಯ ಗುರು ಹಿರಿಯರು ಯುವ ಬಾಂಧವರು ಹಾಜರಿದ್ದರುಬಾಕ್ಷ ್ಡ್ಫ್ಛ್ತ್ಪೂಶ್ರಿಶ್ರಿಶ್ರಿಶ್ರಿಶ್ರಿಶ್ರಿ ಎಳೆಂಟು ವರ್ಷದಿಂದ ರೈಲ್ವೆ ಬ್ರಿಜ್ ಕಾಮಗಾರಿಯಿಂದ ಗಂಗಾಪುರ ಪೇಟೆ- ಎಸ್.ಎಂ.ಕೃಷ್ಣನಗರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ. ವ್ಯಾಪಾರ ಇಲ್ಲದಂತಾಗಿದೆ. ಲಿಂಗದಾಳ, ಹೊಂಬಳ ಗ್ರಾಮಸ್ಥರು ನಗರಕ್ಕೆ ಬಂದು ಹೋಗುವ ಮುಖ್ಯ ರಸ್ತೆ ಇದಾಗಿದ್ದರಿಂದ ವ್ಯಾಪಾರ ಚೆನ್ನಾಗಿತ್ತು ಈಗ ಎಲ್ಲ ಸಂಪರ್ಕ ಕಡಿತಗೊಂಡಿದ್ದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಈ ಬಗ್ಗೆ ಬಡವರ ಪರವಾಗಿರುವ ನೂತನ ಸಂಸದರಾದ ಬಸವರಾಜ ಭೊಮ್ಮಾಯಿ ಅವರು ಸುಗಮ ಸಂಚಾರಕ್ಕಾಗಿ ಎಲ್ಲಾ ವ್ಶಾಪಾರಸ್ಥರಿಗಾಗಿ ಮತ್ತು ಸಮಸ್ಥ ಜನಸಾಮಾನ್ಶರ ಅನಕೂಲಕ್ಕಾಗಿ ಈ ಕೂಡಲೆ ಕಾಮಗಾರಿ ಪೂರ್ಣಗೊಳಿಸಲು ಸಂಬಂದ ಪಟ್ಟವರಿಗೆ ಕಡಕ್ ಆದೇಶ ನೀಡುವ ಜತೆಗೆ ಸೂಕ್ತ ಕ್ರಮಕ್ಕೆ ಮುಂದಾಗಬೆಕೇಂದು ಸಂಸದರಿಗೆ ಆಗ್ರಹಿಸಿದ್ದಾರೆ ಕೃಷ್ಣಾ ಎಚ್ ಹಡಪದ ಅಧ್ಯಕ್ಷರು-ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘ ಗದಗ9845650612