ಚಿಕ್ಕೋಡಿ 27: ಕಳೆದ ಸೋಮವಾರ ದಿ.23 ರಂದು ಮಣಿಪುರದ ರಾಜ್ಯದ ಬಂಬಲಾ ಗ್ರಾಮದ ಹತ್ತಿರ ಘಾಟಿನಿಂದ ಕೆಳಗೆ ಬರುವಾಗ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ಚಿಕ್ಕೋಡಿ ತಾಲೂಕಿನ ಕುಪ್ಪಾಣವಾಡಿ ಗ್ರಾಮದ ಸುಬೇಧಾರ ಧರ್ಮರಾಜ ಸುಭಾಷ ಖೋತ ಪಾರ್ಥಿವ ಶರೀರ ಗುರುವಾರ ಆಗಮಿಸಿದ ಹಿನ್ನಲ್ಲೆಯಲ್ಲಿ ಸರ್ಕಾರಿ ಗೌರವದೊಂದಿಗೆ ವೀರಯೋಧನ ಅಂತಿಮ ವಿಧಿವಿಧಾನ ಜರುಗಿತು.
ವೀರಯೋಧ ಧರ್ಮರಾಜ ಖೋತ ಪಾರ್ಥಿವ ಶರೀರ ಮಣಿಪುರದಿಂದ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ಬಂದು ಅಲ್ಲಿಂದ ಬೆಳಗಾವಿ ಮರಾಠ ಲೈಪ್ ಇನ್‌ಫಂಟ್ರಿಗೆ ಆಗಮೀಸಿ ಅಲ್ಲಿಂದ ಸೇನಾ ವಾಹನದಲ್ಲಿ ನೇರವಗಿ ಕುಪ್ಪಾಣವಾಡಿಗೆ ಆಗಮೀಸಿತು. ವೀರಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮೀಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಗಿಲು ಮುಟ್ಟಿತ್ತು. ವೀರಯೋಧನಿಗೆ ತಂದೆ ಸುಭಾಷ, ತಾಯಿ ಶಕುಂತಲಾ, ಪತ್ನಿ ಶ್ರದ್ಧಾ ಮತ್ತು ಇಬ್ಬರು ಗಂಡು ಮಕ್ಕಳು ತಂದೆಯ ಪಾರ್ಥಿವ ಶರೀರ ನೋಡಿ ರೋಧಿಸಿದರು.
ಪಾರ್ಥಿವ ಶರೀರ ಗ್ರಾಮಕ್ಕೆ ಆಗಮೀಸುತ್ತಿದ್ದಂತೆ ಗ್ರಾಮಸ್ಥರು ಮತ್ತು ಮಾಜಿ ಸೈನಿಕರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧರ್ಮರಾಜ ಅಮರಹೇ ಎಂದು ಘೋಷನೆ ಮೊಳಗಿಸಿದರು. ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಮುಂತಾದವರು ವೀರಯೋಧನಿಗೆ ನಮನ ಸಲ್ಲಿಸಿದರು.