ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ ಅವರ ಬಗ್ಗೆ ಒಂದಿಷ್ಟು ವಿಷಯ

A few things about former Prime Minister Dr. Manmohan Singh

ಡಾ.ಮನಮೋಹನ್ ಸಿಂಗ್‌ ಅವರು ಪಶ್ಚಿಮ್‌ ಪಂಜಾಬ್‌ನಲ್ಲಿ ಸೆಪ್ಟೆಂಬರ್ 26, 1932ರಂದು ಜನಿಸಿದರು. ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿ ಮನಮೋಹನ್ ಸಿಂಗ್‌ 2004ರಿಂದ 2014ರ ವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಏಕೈಕ ಅಲ್ಪಸಂಖ್ಯಾತರೊಬ್ಬರು ಅಂದ್ರೆ ಸಿಖ್‌ ಸಮುದಾಯದವರು ಪ್ರಧಾನಮಂತ್ರಿಯಾಗಿರೋ ಕೀರ್ತಿ ಮನಮೋಹನ್‌ ಸಿಂಗ್‌ ಅವರಿಗೆ ಸಲ್ಲುತ್ತದೆ.

ಮನಮೋಹನ್‌ ಸಿಂಗ್ ಅವರು ಚಂಡೀಗಢದ ವಿಶ್ವವಿದ್ಯಾಲಯ ಮತ್ತು ಗ್ರೇಟ್‌ ಬ್ರಿಟನ್‌ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ವ್ಯಾಂಸಗ ಮಾಡಿದ್ರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. 1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಹುದ್ದೆಗಳ ಸರಣಿಗೆ ಹೆಸರುವಾಸಿಯಾಗಿದ್ದರು. ಮನಮೋಹನ್‌ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ (1976–80) ಹಾಗೂ ಆರ್‌‌ಬಿಐ ಗವರ್ನರ್ (1982–85) ಸೇವೆ ಸಲ್ಲಿಸಿದ್ದಾರೆ.

ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಹಾಗೂ ದಾಳಿಂಬೆ…ಇದು ಡಾ.ಸಿಂಗ್‌ ಅವರು ಹೆಚ್ಚು ಇಷ್ಟಪಡುತ್ತಿದ್ದ ಉತ್ತರ ಭಾರತ ಶೈಲಿಯ ಊಟದ ಮೆನು! ಸಿಂಗ್‌ ಅವರ ಅಚ್ಚುಮೆಚ್ಚಿನ ಖಾದ್ಯವೆಂದರೆ ಕಧಿ ಚಾವಲ್ (kadhi Chaval). ಇದನ್ನು ಮೊಸರು ಕಸರಿ, ಅನ್ನ ಹಾಗೂ ಕಡಲೆ ಹಿಟ್ಟು ಸೇರಿದಂತೆ ವಿವಿಧ ಮಸಾಲೆ ಬೆರೆಸಿ ತಯಾರಿಸಲಾಗುತ್ತದೆ. ಇದು ಉತ್ತರ ಭಾರತ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಜನಪ್ರಿಯವಾಗಿದೆ.

ಸಸ್ಯಹಾರಿ ಆಗಿದ್ದರೂ ಕೂಡಾ ಒಮ್ಮೆ ಹಿಲ್ಸಾ ಮೀನಿನ ಖಾದ್ಯ ಸೇವಿಸುವ ಆಸೆ ವ್ಯಕ್ತಪಡಿಸಿದ್ದರು:

ಡಾ.ಮನಮೋಹನ್‌ ಸಿಂಗ್‌ ಅವರು ಕಟ್ಟುನಿಟ್ಟಿನ ಸಸ್ಯಹಾರಿಯಾಗಿದ್ದರೂ ಕೂಡಾ ಒಮ್ಮೆ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ತಮ್ಮ ಸಸ್ಯಹಾರ ಸೇವನೆಗೆ ಬ್ರೇಕ್‌ ನೀಡಿ  ಬೆಂಗಾಲಿಗಳ ಅಚ್ಚುಮೆಚ್ಚಿನ ಹಿಲ್ಸಾ ಮೀನಿನ ಖಾದ್ಯ ಸೇವಿಸುವ ಆಸೆ ವ್ಯಕ್ತಪಡಿಸಿದ್ದರಂತೆ!

“ ಇಂದು ನಾನು ನನ್ನ ವೆಜ್‌ ತಿನ್ನುವ ಪ್ರತಿಜ್ಞೆಯನ್ನು ಮುರಿಯಲು ಬಯಸಿದ್ದೇನೆ. ಯಾಕೆಂದರೆ ಇಲ್ಲಿ ತುಂಬಾ ರುಚಿಕಟ್ಟಾದ ಹಿಲ್ಸಾ ಮೀನಿನ ಖಾದ್ಯದ ಬಗ್ಗೆ ಕೇಳಲ್ಪಟ್ಟಿದ್ದೇನೆ. ಹಾಗಾಗಿ ಡಾ.ಸಿಂಗ್‌ ಅವರು ಸಸ್ಯಹಾರ ಖಾದ್ಯಕ್ಕೆ ವಿನಾಯ್ತಿ ಕೊಟ್ಟು, ಹಿಲ್ಸಾ ಮೀನಿನ ಖಾದ್ಯ ಸವಿದಿದ್ದರಂತೆ”!