ದನಕರು ಸಾಗಾಣಿಕೆಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರು ಪಡೆಯುವಂತವರಾಗಬೇಕು : ಕೋಳಿವಾಡ
ರಾಣೇಬೆನ್ನೂರ 27: ರೈತರು ಹಾಲು ಉತ್ಪಾದನೆಯಲ್ಲಿ ದನಕರುಗಳ ಸಾಗಾಣಿಕೆಯಲ್ಲಿ ಮುಂದೆ ಬರಬೇಕು. ದನಕರು ಸಾಗಾಣಿಕೆಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರು ಪಡೆಯುವಂತವರಾಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ತಾಲೂಕಿನ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ, ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ಮಿಶ್ರ ತಳಿ ಹಸುಗಳು ಹಾಲು ಕರೆಯುವ ಸ್ಪರ್ಧೆ ಮತ್ತು ಹೆಣ್ಣು ಕರುಗಳ ಪ್ರದರ್ಶನ ಹಾಗೂ ಹಸು ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರದಿಂದ ರೈತರಿಗೆ ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ದನಕರುಗಳಿಗೆ ಧನದ ಕೊಟ್ಟಿಗೆ ಕಟ್ಟಿಸಿಕೋಳ್ಳುವ ಸೌಲಭ್ಯ ಇದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಪಡೆಯುವಂತವರಾಗಬೇಕು ಅಲ್ಲದೆ ಇನ್ನೂ ಅನೇಕ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯಲಿವೆ. ರೈತಾಪಿ ವರ್ಗವು ಅವುಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಗ್ರಾಮಸ್ಥರಿಗೆ ತಿಳಿಸಿದರು.ತಾಲೂಕಿನ ಪಶು ವೈದ್ಯಾಧಿಕಾರಿ ನೀಲಕಂಠ ಬಿ.ಅಂಗಡಿ ಮಾತನಾಡಿ, ಹಸುಗಳನ್ನು ನಮ್ಮ ಮನೆಯ ಮಕ್ಕಳಂತೆ ಸಾಕಬೇಕು. ಹಸುಗಳಿಗೆ ಒಳ್ಳೆಯ ಆಹಾರ ಕೊಡಬೇಕು.
ಹಸುಗಳ ಆರೋಗ್ಯದ ಕಡೆ ಗಮನ ಹರಿಸಬೇಕು. ಕರುಗಳಿಗೆ ಕನಿಷ್ಠ ಆರು ತಿಂಗಳ ವರೆಗೂ ಹಾಲುಣಿಸಿ ಅಂದಾಗ ಮಾತ್ರ ಕರುಗಳು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ರೈತರಿಗೆ, ಗ್ರಾಮಸ್ಥರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಿಶ್ರ ತಳಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ ಹಾಗೂ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲಾ ಹಸು ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಸವಿತಾ ಬಜಾರಿ, ಉಪಾಧ್ಯಕ್ಷ ಶ್ರೀಮತಿ ಶಶಿಕಲಾ ಕೋಟೆಗೌಡ್ರು, ಸದಸ್ಯರಾದ ಭೀಮಪ್ಪ ಕುಡಪಲಿ, ಕರಿಯಪ್ಪ ಮಸಲವಾಡ , ಶ್ರೀಮತಿ ಶಿಲ್ಪಾ ಭಟ್ಟಂಗಿ, ಬಸವರಾಜ ಮೆಗಳಗೇರಿ, ಸ್ವಾಕರವೇ ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ, ಕಾಂಗ್ರಸ್ ಮುಖಂಡ ಚಂದ್ರ್ಪ ಬೇಡರ, ವೈದ್ಯಧಿಕಾರಿಗಳಾದ ಡಾ ಎಸ್. ವಿ. ಸಂತಿ, ಉಮೇಶ್ ಕವಲಿ, ಡಾ ರಂಗನಾಥ್ ಗುಡಿಸಾಗರ, ಡಾ. ಯುವರಾಜ ಚವ್ಹಾಣ, ಡಾ. ನಾಗರಾಜ ಜಲ್ಲೆರ, ಡಾ. ಪವನ ಬಿ. ಎಲ್, ಮಹೇಶ್ ಕೆ. ವಿ, ರಾಘವೇಂದ್ರ ಕಿತ್ತೂರು, ಪವನ ಬೆಳಕೇರಿ, ಬಾಲಾಜಿ ಟಿ, ಹಾಗೂ ಹಾಲಿನ ಡೈರಿ ಮಾಲೀಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಊ27-ಖಓಖ06-ಓಇಘಖ. ಂಓಆ. ಕಊಓಖಿಓ.