ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆೆಗೆ ವಿನೂತನ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಟಗೇರಿ: ವಿದ್ಯಾಥರ್ಿಗಳಿಂದ ವಾಗ್ದಾನ, ವಿದ್ಯಾಥರ್ಿಗಳ ಗುಂಪು ರಚನೆ, ಪಠ್ಯ ವಿಷಯಗಳ ಕುರಿತು ಚಚರ್ೆ... ಇದೇನು.? ಎಲ್ಲಿ ಅನ್ನುತ್ತೀರಾ.! ಇದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಒಂದು  ತಿಂಗಳಿಂದ ಪ್ರತಿದಿನ ಸಾಯಂಕಾಲ 4 ಗಂಟೆಯಿಂದ 5ಗಂಟೆತನಕ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿಂತಾಂಶ ಸುಧಾರಣೆೆಗೆ ಹಮ್ಮಿಕೊಂಡ ವಿನೂತನ ಕಾರ್ಯಕ್ರಮವಿದು.

     ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳಿಗೆ ಉತ್ಸಾಹ ತುಂಬಲು ವಿದ್ಯಾಥರ್ಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾಥರ್ಿಗಳು ಸ್ವ ಸಾಮಥ್ಯದ ಮೂಲಕ ಶೇ75, ಶೇ80, ಶೇ90, ಶೇ95, ಶೇ100ರಷ್ಟು ಹೀಗೆ ಫಲಿಂತಾಂಶ ಘೋಷಣೆಯ ಬಗ್ಗೆ ತಮ್ಮ ಭಾವಚಿತ್ರ ಶಾಲೆಯ ನೋಟಿಸ್ ಫಲಕ ಮೇಲೆ ಅಂಟಿಸಿದ ಬಳಿಕ ಅಂಕ ಗಳಿಕೆ ಸಾಮಥ್ರ್ಯದ ಮೇಲೆ 20 ವಿದ್ಯಾಥರ್ಿಗಳಂತೆ 7 ಗುಂಪು ರಚನೆ ಮಾಡಿ, ಶಾಲೆಯ ಒಬ್ಬಬ್ಬರೂ ಶಿಕ್ಷಕ ಒಂದೊಂದು ಗುಂಪು ದತ್ತು ತೆಗೆದುಕೊಂಡು ವಿದ್ಯಾಥರ್ಿಗಳಿಗೆ ಉತ್ಸಾಹ, ಪ್ರೋತ್ಸಾಹ, ಪಠ್ಯದ ವಿಶೇಷ ಉಪನ್ಯಾಸ ಸೇರಿದಂತೆ ಪಠ್ಯೇತರ ಚಟುವಟಿಕೆ ಕುರಿತು ಶಿಕ್ಷಕರು ತರಬೇತಿ ನೀಡಲು ಅಣಿಯಾಗಿದ್ದಾರೆ.

ಪ್ರಸಕ್ತ ವರ್ಷ 266 ಜನ ವಿದ್ಯಾಥರ್ಿಗಳು ವಾಷರ್ಿಕ ಪರೀಕ್ಷೆ ಬರೆಯಲಿದ್ದಾರೆ. 100ಕ್ಕೆ 100ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಅರಿವು, ಭಯ ಮುಕ್ತ ವಾತಾವರಣ ನಿಮರ್ಾಣ, ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಹಾಗೂ ಮಕ್ಕಳ ಕಲಿಕೆಗೆ ಬೇಕಾದ ಪಾಠೋಪಕರಣಗಳ ಸಮಸ್ಯೆಗಳನ್ನು ಅರಿತು ಅಂತಹ ವಿದ್ಯಾಥರ್ಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರ ಪೂರೈಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದ್ದಾರೆ.

ಈ ವೇಳೆ ಮಂಜುನಾಥ ಹತ್ತಿ, ಮೋಹನ ತುಪ್ಪದ, ಎ.ಬಿ.ತಾಂವಶಿ, ರಾಕೇಶ ನಡೋಣೆ, ವೀಣಾ ಹತ್ತಿ, ಶುಭಾ ಬಿ., ಮಲ್ಲಿಕಾಜರ್ುನ ಹಿರೇಮಠ, ಮಲ್ಹಾರಿ ಪೋಳ, ಪ್ರಕಾಶ ಮುರಟ್ನಾಳ, ದಯಾನಂದ ಮಾದರ, ಗಣಪತಿ ಭಾಗೋಜಿ, ರೂಪಾ ಖನಗಾವಿ, ಬಾಳಪ್ಪ ಕೂಟೂರ, ಶಿಕ್ಷಕರು, ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳು ಇದ್ದರು.


ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣೆ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿವಿಡಿ ಸಕರ್ಾರಿ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹಮ್ಮಿಕೊಂಡಿರುವ ವಿದ್ಯಾಥರ್ಿಗಳಿಂದ ವಾಗ್ದಾನ, ಗುಂಪು ರಚನೆ ಎಂಬ ವಿನೂತನ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಮಕ್ಕಳಲ್ಲಿ ಉತ್ಸಾಹ ಪ್ರೋತ್ಸಾಹ ತುಂಬುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ವಿನೂತನ ಕಾರ್ಯಕ್ರಮಗಳ ಆಯೋಜನೆ ಮೂಲಕ ಎಸ್ಸೆಸ್ಸೆಲ್ಸಿ ಮಕ್ಕಳು ವಾಷರ್ಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ವಿಶೇಷ ಪ್ರೇರಣೆಯಾಗಿದೆ ಎಂದು ಮೂಡಲಗಿ ಶೈಕ್ಷಣಿಕ ವಲಯ ಬಿಇಒ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.