ಬೆಂಗಳೂರು, ಏಪ್ರಿಲ್ 25,ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಜುಬಿಲೆಂಟ್ ಫಾರ್ಮಾ ಕಂಪನಿಯ ನೌಕರರಿಗೆ ಕೋವಿಡ್-19 ಸೋಂಕು ಉಂಟಾದ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.ಮೈಸೂರು ಕೋವಿಡ್-19 ಹಾಟ್‌ಸ್ಪಾಟ್ ಆಗಲು ನಂಜನಗೂಡು ಜುಬಿಲೆಂಟ್ ಫಾರ್ಮಾ ಕಂಪನಿಯೇ ಮುಖ್ಯ ಕಾರಣ ಎಂದು ಹೇಳಿರುವ ಈ ಆದೇಶವು, ಹಲವು ಜನರು ಕೊರೋನವೈರಸ್ ಸೋಂಕಿಗೆ ಒಳಗಾಗಲು ಕಂಪನಿ ಕಾರಣವಾಗಿದೆ ಎಂದು ಹೇಳಿದೆ.ಆದ್ದರಿಂದ ನಂಜನಗೂಡಿಯಲ್ಲಿ ಮೊದಲು, ಯಾರಿಂದ ಮತ್ತು ಎಲ್ಲಿಂದ ಸೋಂಕು ಹರಡಿತು, ಹರಡಲು ಕಾರಣಗಳು ಯಾವುವು, ಕಂಪನಿಯ ಜವಾಬ್ದಾರಿ ಏನು ಮುಂತಾದವುಗಳ ಬಗ್ಗೆ ತನಿಖೆ ನಡೆಸಲು ಹರ್ಷ ಗುಪ್ತಾ ಅವರನ್ನು ನೇಮಿಸಲಾಗಿದೆ ಎಂದು ಅದು ಹೇಳಿದೆ.