ಹಿರಿಯರನ್ನು ಗೌರವಿಸುವದು ಭಾರತೀಯ ಸಂಸ್ಕೃತಿ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ

ಗದಗ : ಹಿರಿಯರನ್ನು ಗೌರವಿಸುವದು ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದ್ದು ಅವರನ್ನು ಗೌರವದಿಂದ ನೋಡಿಕೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ  ಎಂದು ಗಣಿ ಭೂ ವಿಜ್ಞಾನ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ  ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ನುಡಿದರು. 

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ ಭವನದಲ್ಲಿಂದು ಜರುಗಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಪ್ಪಾವಸ್ಥೆಯಲ್ಲಿರುವ ಹಿರಿಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವದು ಯುವ ಜನರ ಜವಾಬ್ದಾರಿಯಾಗಿದೆ. ಹಿರಿಯರ ಮಾರ್ಗದರ್ಶನ ಸಲಹೆ, ನಿರ್ಲಕ್ಷಿಸದೇ ನಾವೆಲ್ಲ ಪಾಲಿಸಬೇಕು. ಹಿರಿಯರ ಶ್ರೇಯೋಭಿವೃದ್ಧಿಗಾಗಿ ಸಕರ್ಾರ ಅನೇಕ ಸೌಲಭ್ಯಗಳನ್ನು ನೀಡಿದೆ. ಅವುಗಳು ಅವರಿಗೆ ದೊರಕಿಸುವ ನಿಟ್ಟಿನಲ್ಲಿ ಇಲಾಖೆಯು ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಅಲ್ಲದೇ ಹಿರಿಯ ನಾಗರಿಕರಿಗೆ  ಯಾವುದೇ ತೊಂದರೆ ಯೋಗ ಕ್ಷೇಮಕ್ಕೆ ದಕ್ಕೆಯಾಗದಂತೆ  ನೋಡಿಕೊಳ್ಳಬೇಕು ಎಂದು ಸಚಿವರು ನುಡಿದರು. 

  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾತನಾಡಿ ತಮ್ಮ ಕಚೇರಿಯಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಈ ಕೇಂದ್ರದಲ್ಲಿ ಹಿರಿಯ ನಾಗರಿಕರು ಕೌಟುಂಬಿಕ, ಆರೋಗ್ಯ ಮತ್ತು ನ್ಯಾಯಾಲಯದ ಸಮಸ್ಯೆಗಳ ಕುರಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದರು. ಹಿರಿಯ ನಾಗರಿಕರ ಭಾವನೆ, ನೋವುಗಳನ್ನು ಕೇಳುವ ವ್ಯವಸ್ಥೆಯಾಗಬೇಕಾಗಿದೆ. ಅವರ ಸಮಸ್ಯೆಗಳಿಗೆ ಸ್ಪಂಧಿಸಲಿದೆ ಪೋಲಿಸ ಇಲಾಖೆ ಇದರ ಸದುಪಯೋಗ ಪಡೆದುಕೊಳ್ಳಲು ಶ್ರೀನಾಥ ಜೋಶಿ ಮನವಿ ಮಾಡಿದರು.

   ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದಶರ್ಿ ಎಸ್.ಜಿ.ಸಲಗರೆ ಮಾತನಾಡಿ ಮನೆಯಲ್ಲಿರುವ ಹಿರಿಯ ನಾಗರಿಕರ ಮಾರ್ಗದರ್ಶನವು ಕಿರಿಯರಿಗೆ ಅವಶ್ಯಕವಾಗಿದ್ದು ಅದೇ ರೀತಿ ಮನೆಯಲ್ಲಿರುವ ಹಿರಿಯರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಗೌರವದೊಂದಿಗೆ ನಡೆದುಕೊಳ್ಳುವದು ಎಲ್ಲರ ಕರ್ತವ್ಯವಾಗಿದೆ ಎಂದರು. 

ಜಿಲ್ಲಾ ಆಯುಷ ವೈದ್ಯಾದಿಕಾರಿ ಡಾ.ಸುಜಾತಾ ಪಾಟೀಲ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಚ್.ಬೇಲೂರ ಹಿರಿಯರ ನಾಗರಿಕರ ಕುರಿತಂತೆ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯತ ಸದಸ್ಯೆ ಲಲಿತಾ ಹುಣಶಿಕಟ್ಟಿ, ಜಿ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಡಾ. ಆನಂದ ಕೆ, ಗದಗ ತಹಶೀಲ್ದಾರ ಶ್ರೀನಿವಾಸಮೂತರ್ಿ ಕುಲಕಣರ್ಿ, ಮನೋ ವೈದ್ಯತಜ್ಞ ಡಾ. ಬಿಚ್ಚಳ, ಬಿ.ಬಿ.ಹೂಗಾರ, ಎಸ್.ಎಸ್. ಹಿರೇಮಠ, ಕೆ,ಬಿ ತಳಗೇರಿ ಸೇರಿದಂತೆ ಹಿರಿಯ ನಾಗರಿಕರ ಸೇವಾನಿರತ ಸಂಘ ಸಂಸ್ಥೆಗಳ ಗಣ್ಯರು, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಆಶು ನದಾಫ ಸ್ವಾಗತಿಸಿದರು. ಪಂ.ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯದ ವಿಧ್ಯಾಥರ್ಿಗಳು ಪ್ರಾಥರ್ಿಸಿದರು. ಎಸ್.ಎಸ್.ಗೌಡರ ಕಾರ್ಯಕ್ರಮ ನಿರೂಪಿಸಿದರು. ಹಿರಿಯರ ಕ್ರೀಡೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.