ವಿಜಯಪುರ: ದಿ.13ರಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ

In-charge Minister M.B. Patil to visit the district on the 13th

ವಿಜಯಪುರ 12. ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ದಿ.13 ಮತ್ತು ದಿ.14 ಎರಡು ದಿನಗಳವರೆಗೆ ಕೈಗೊಳ್ಳಲಿದ್ದಾರೆ.    

ದಿ.13 ರವಿವಾರ ಬೆ.10ಗಂ ಸಣ್ಣ ನೀರಾವರಿ ಇಲಾಖೆಯ 250 ಲಕ್ಷ ರೂ. ವೆಚ್ಚದಲ್ಲಿ ತಿಕೋಟಾ ತಾಲ್ಲೂಕಿನ ಮಲಕನದೇವರಹಟ್ಟಿ ಗ್ರಾಮದ ಹತ್ತಿರ ಜಿನುಗು ಕೆರೆ ನಿರ್ಮಾಣ ಸೈಟ್ ನಂ-02 ಕಾಮಗಾರಿ ಭೂಮಿ ಪೂಜೆ ಸಲ್ಲಿಸಲಿದ್ದಾರೆ. ಮ.12ಗಂ ಲೋಕೋಪಯೋಗಿ ಇಲಾಖೆಯ 400 ಲಕ್ಷ? ರೂ. ವೆಚ್ಚದಲ್ಲಿ ಧನ್ನರ್ಗಿ ಗ್ರಾಮದಲ್ಲಿ  ಇಟ್ಟಂಗಿಹಾಳ-ಲೋಹಗಾಂವ-ಧನರ್ಗಿ-ಸೋಮದೇವರಹಟ್ಟಿ-ತಿಕೋಟಾ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.    

ದಿ. 14 ಸೋಮವಾರ ಬೆ.10ಗಂ. ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ನಿಮಿತ್ತ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು ನಂತರ ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆ ಉದ್ಘಾಟಿಸುವುದು, ಅಂಬೇಡ್ಕರ್ ಅವರ ಸಂದೇಶ ಸಾರುವ ಛಾಯಾಚಿತ್ರಗಳ ಅನಾವರಣ ಹಾಗೂ ಅಂಬೇಡ್ಕರ್ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.   

ಬೆಳಿಗ್ಗೆ 11ಗಂಟೆಗೆ ಡಾ. ಬಿ. ಆರ್‌. ಅಂಬೇಡ್ಕರ್ ಜಯಂತಿ ನಿಮಿತ್ತ ನಗರದ ಡಾ.ಬಿ ಆರ್‌. ಅಂಬೇಡ್ಕರ್ ಸರ್ಕಲ್ ನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಅಂಬೇಡ್ಕರ್ ಹಬ್ಬ ನಮ್ಮ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.