ಮಕ್ಕಳಿಗೆ ಸಾಕ್ಷ್ಯ ಚಿತ್ರಗಳ ಮೂಲಕ ಪಾಠ ಭೋಧನೆ : ಆನಂದ ನ್ಯಾಮಗೌಡ
Teaching children lessons through documentary films: Ananda Nyamagowda
ಲೋಕದರ್ಶನ ವರದಿ,
ಜಮಖಂಡಿ: 16-2 ಮಕ್ಕಳಿಗೆ ಸಾಕ್ಷ್ಯ ಚಿತ್ರಗಳ ಮೂಲಕ ಪಾಠ ಭೋಧನೆ ಮಾಡಿದರೆ ಹೆಚ್ಚಿನ ಜ್ಞಾನ ಸಂಗ್ರಹವಾಗುವದು ಮತ್ತು ಪಾಠ ಬೋಧನೆ ಸರಳವಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಓಲೇಮಠದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯ್.ಆಯ್.ಎಫ್.ಎಲ್ ಸಮಸ್ತ ಹಣಕಾಸು ಸಂಸ್ಥೆ ಹಾಗೂ ಪ್ರಜ್ಞಾ ಪೌಂಡೇಶನ್ ಸಹಯೋಗದಲ್ಲಿ ಡಿಜಿಟಲ್ ಸ್ಮಾರ್ಟ ತರಗತಿ ಯೋಜನೆಯ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ತಂತ್ರಜ್ಞಾನ ಹೊಸ ಆವಿಷ್ಕಾರಗಳ ಬಗ್ಗೆ ಪಾಠ ಭೋಧನೆ ಅವಶ್ಯವಾಗಿದೆ. ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟಕ್ಲಾಸ್‌ಗಳ ಮೂಲಕ ಪಾಠ ಭೋಧನೆ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಪಠ್ಯ ಪುಸ್ತಕ ಸಮವಸ್ತ್ರ ಬಿಸಿಯೂಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಅದರ ಜೊತೆಗೆ ಸಂಘ ಸಂಸ್ಥೆಗಳು ಇಂತಹ ಮಹತ್ತರ ಯೋಜನೆಗಳನ್ನು ಸರ್ಕಾರಿ ಶಾಲೆಗಳಿಗೆ ನೀಡುತ್ತಿರುವುದರಿಂದ ಅಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಶಾಲೆಗಳು ಅಭಿವೃದ್ದಿ ಹೊಂದುತ್ತಿವೆ ಎಂದರು.
ಪದನಿಮಿತ್ಯ ಉಪನಿರ್ಧೇಶಕರು ಅಭಿವೃದ್ದಿ ಹಾಗೂ ಡಯಟ್ ಇಲಕಲ್ ಕಾಲೇಜಿನ ಪ್ರಾಂಶುಪಾಲ ಸಲೀಂ ಪಾಷಾ ಮಾತನಾಡಿ. ಮಠ ಮಂದಿರ ಮಸೀದಿ ಕಟ್ಟಲಿಕೆ ಹಣಕೊಡುವವರಿದ್ದಾರೆ. ಆದರೆ ಶಾಲೆಗಳ ಅಭಿವೃದ್ದಿಗೆ ಹಣಕೊಡುವವರು ವಿರಳ ಆದರೆ ಪ್ರಜ್ಞಾ ಸಂಸ್ಥೆ ಹಾಗೂ ಆಯ್.ಆಯ್.ಎಫ್.ಎಲ್ ಹಣಕಾಸು ಸಂಸ್ಥೆ ಜಂಟಿಯಾಗಿ ಲಕ್ಷಾಂತರ ಬೆಲೆಬಾಳುವ ಸ್ಮಾರ್ಟಬೋರ್ಡ ಕೊಟ್ಟಿರುವದು ಸಂತೋಷದ ಸಂಗತಿ. ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಬೇಕಾದರೆ ಸಮುದಾಯ ಶಾಲಾ ಅಭಿವೃದ್ದಿ ಮಂಡಳಿಯ ಆಸಕ್ತಿ ಕಾರಣವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾದಿಕಾರಿ ಎ.ಕೆ ಬಸಣ್ಣವರ, ಬೆಂಗಳೂರಿನ ಆಯ್.ಆಯ್.ಎಪ್.ಎಲ್ ಪ್ರಾದೇಶಿಕ ವ್ಯವಸ್ಥಾಪಕ ರಾಮನಗೌಡ, ಬಸವರಾಜ ಬಾಗೇನವರ, ಓಲೇಮಠದ ಶ್ರೀ ಆನಂದ ದೇವರು ಮಾತನಾಡಿದರು,
ವೇದಿಕೆಯಲ್ಲಿ ಅಶ್ರಪಲಿ ಖಾದ್ರಿ, ಇಕ್ತಿಯಾರ ಅವಟಿ, ಕಾಡೇಶ ಕೋಲೂರ, ಶಿವು ಯಾದವಾಡ, ಮುಖ್ಯಗುರು ಎಮ್.ಎ ಅತ್ತಾರ, ಆಯ್.ಆಯ್.ಎಫ್.ಎಲ್ ಸಂಸ್ಥೆಯ ಶಬ್ಬೀರ ಪಟೇಲ, ದಾವುದ ಕಾಶೀನಾಥ, ಪರಶುರಾಮ ಬಾಲಪ್ಪಾ, ಯಮನೂರ, ಮಹಾದೇವ ಇತರರು ಇದ್ದರು. ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಗೂ ಸ್ವಾಗತ ಗೀತೆ ಹಾಡಿದರು. ಮುಖ್ಯಗುರು ಎನ್.ಆರ್ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಎನ್.ಬಿ ಮಾಲಗಾರ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 