ಹುಕ್ಕೇರಿ ಮಹಾಲಕ್ಷ್ಮಿ ದ್ಯಾಮವ್ವದೇವಿ ಜಾತ್ರಾ ಸಂಪನ್ನ

ಹುಕ್ಕೇರಿ ಮಹಾಲಕ್ಷ್ಮಿ ದ್ಯಾಮವ್ವದೇವಿ ಜಾತ್ರಾ ಸಂಪನ್ನ  Hukkeri Mahalakshmi Dyamvvadevi Jatra Sampanna

ಹುಕ್ಕೇರಿ 16 :  ನಗರದ ಮಹಾಲಕ್ಷ್ಮೀ ದೇವಿ ಜಾತ್ರೆಯ ಮೊದಲ ದಿನ ವಿದ್ಯುತ್ ಅಲಂಕಾರದಲ್ಲಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ತುರಬಂದಿಯಲ್ಲಿ ರಥದಲ್ಲಿ ಆಸಿನಳಾದಳು. ಎರಡನೆಯ ದಿನ ಶ್ರೀರಥದಲ್ಲಿ ವಿರಾಜಮಾನರಾಗಿ ತವರು ಮನೆ ಕಡೆಗೆ ಬಸ್ತವಾಡ ಗಲ್ಲಿಯಲ್ಲಿ ಬಂದು ವಸತಿಯಾಗುತ್ತಾಳೆ ಮೂರನೆಯ ದಿನದಂದು ಬಸ್ತವಾಡೆ ಗಲ್ಲಿ ಯಿಂದ ತುರಮಂದಿ ಕಡೆಗೆ ಹೋಗುತ್ತಿರುವಾಗ 1994/95 ನೇ ಸಾಲಿನ ಗೆಳೆಯರ ಬಳಗ ವತಿಯಿಂದ ಆನಂದ್ ತುಬಚಿ ಇವರ ಅಂಗಡಿ ಹತ್ತಿರ ಶ್ರೀರಥಕ್ಕೆ ಹಾಗೂ ದ್ಯಾಮವ್ವ ದೇವಿಗೆ ಆಕರ್ಷಕ ಹೂವಿನ ಹಾರ ದೊಂದಿಗೆ ಬರಮಾಡಿಕೊಂಡರು ನಾಲ್ಕನೆಯ ದಿನದಂದು ತುರಮಂದಿ ಇಂದಾ ಕಣಗಲಿಕರ್ ಮನೆವರೆಗೆ ಶ್ರೀರಥದಲ್ಲಿ ಆಗಮನ ಹಾಗೂ ಕೊನೆಯ ದಿನವಾದ ಐದನೆಯ ದಿನದಂದು ಕಣಗಲಿಕರ್ ಮನೆಯಿಂದ ಮಹಾಲಕ್ಷ್ಮಿ ಗುಡಿಗೆ ಆಗಮನ ಶ್ರೀರಥದಿಂದ ಮಹಾಲಕ್ಷ್ಮಿ ಗುಡಿ ಸುತ್ತಿ ಪಕ್ಕದಲ್ಲಿರುವ ಕಟ್ಟೆಯ ಮೇಲೆ ವಿರಾಜಮಾನಗಳಾಗುತ್ತಾಳೆ ಮಹಾಲಕ್ಷ್ಮಿ ದ್ಯಾಮವ್ವ ದೇವಿಗೆ ಉಡಿ ತುಂಬಿ  ಗುಡಿ ಮುಂದೆ ದವಸ ಧಾನ್ಯ ಗಳು ಹಾಗೂ ಬಣ್ಣಗಳಿಂದ ರಂಗವನ್ನು ರಚಿಸುತ್ತಾರೆ ರಂಗದಲ್ಲಿ ಕನಕ ಹಿಟ್ಟು ದಿಂದಾ ಮಾಡಿದಾ ಕೋನವೆಂದು ಬಲಿಕೊಡುತ್ತಾರೆ ಗ್ರಾಮ ದೇವತೆ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಆಗಮಿಸಿ ದೇವಿಯ ಹೊನ್ನಾಟದಲ್ಲಿ ಭಾಗಿಯಾಗಿ ಭಂಡಾರದ ಹೋಳೆ ಹರಿಸಿದರು, ಯುವಕರು ಇಂಗ ಳೋಬಾನನ್ನು ಹೊತ್ತಿಕೊಂಡು ಓಡುವ ದೃಶ್ಯ ರೋಚಕವಾಗಿತ್ತು.  

ಮಹಾಲಕ್ಷ್ಮಿ ದೇವಿ ಸಂಚರಿಸುವ ಮಾರ್ಗವನ್ನು ಸ್ಥಳಿಯ ಪುರಸಭೆಅಧಿಕಾರಿಗಳು ಸ್ವಚ್ಚತೆ ಮತ್ತು ಮೂಲ ಭೂತ ಸೌಲಭ್ಯಗಳನ್ನು ಪೊರೈಸಿ ಯಾವದೇ ರೀತಿ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಕೊಂಡಿದ್ದರು. ಹಕ್ಕುದಾರರಾದ ರಾಜೇಶ ಕುಲಕರ್ಣಿ, ವಿನೋದ ಮುತಾಲಿಕ, ರಾಜು ಕೋಟಬಾಗಿ, ರುದ್ರಗೌಡಾ ಪಾಟೀಲ, ಕಲ್ಲೊಪಂತ ಕುಲಕರ್ಣಿ, ಗೀರಿಶ ಕುಲಕರ್ಣಿ, ಬಸಗೌಡಾ ಪಾಟೀಲ, ಶಿವಾನಂದ ಮುದಕನ್ನವರ, ಭೀಮಾನಂದ ಮುದಕನ್ನವರ ಚಿದಾನಂದ ಬಸ್ತವಾಡೆ ಮನೆತನದವರೆಲ್ಲರೂ ಒಟ್ಟಿಗೆ ಸೇರಿ ಮಹಾಲಕ್ಷ್ಮಿ ದ್ಯಾಮವ್ವ ದೇವಿಗೆ  ಬಾಗಿನ ಅರ​‍್ಿಸಿ ದೇವಿ ಆಶಿರ್ವಾದ ಪಡೆದುಕೊಂಡರು.  ಜಾತ್ರೆ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕ್ರೀಡೆ ಮತ್ತು ಮನೋರಂಜನೆ ಮತ್ತು ನಾಟಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು ಯಾವುದೇ ಅಹಿಂತಕರ  ಘಟನೆಯಾಗದಂತೆ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಬಸಾಪುರ ಹಾಗೂ ಸಂಕೇಶ್ವರ್ ಯಮಕನ್ ಮರಡಿ ಇವರ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಜಾತ್ರೆ ಸಂಪನ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಮಠಾಧೀಶರು ರಾಜಕೀಯ ಗಣ್ಯ ಮಾನ್ಯರು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು  ಸ್ಥಳೀಯ ಜನರು ಮಹಿಳೆಯರು ಮಕ್ಕಳು ಯುವಕರು ಶ್ರೀದೇವಿಯ ದರ್ಶನ ಪಡೆದು ಪುನೀತರಾದರು ಐದು ದಿನಗಳ ಜಾತ್ರೆ ಸಾಂಗೋಪ ಸಾಂಗವಾಗಿ ಮುಕ್ತಾಯಗೊಂಡಿತು.