ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕ್ರಮ ಜಾರಿಗೊಳಿಸಲಿ: ಸಿದ್ದರಾಮಯ್ಯ

ಬೆಂಗಳೂರು, ಮೇ 5,  ಮದ್ಯದಂಗಡಿಗಳ ಮುಂದೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು  ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕ್ರಮಗಳನ್ನು ಜಾರಿಗೊಳಿಸಬೇಕು.  ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದರೆ ಅಂಗಡಿಗಳಿಗೆ ದಂಡ ವಿಧಿಸಬೇಕೆಂದು ವಿಪಕ್ಷ ನಾಯಕ  ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಪ್ರತಿದಿನವೂ ಕೊರೊನಾ ಹೊಸ  ಪ್ರಕರಣಗಳು ಏರುತ್ತಿರುವಂತಹ ಸಂದರ್ಭದಲ್ಲಿ ಸಾಮಾಜಿಕ ದೂರವಿಡುವ ಮಾನದಂಡಗಳ  ಉಲ್ಲಂಘನೆಯನ್ನು ಮಾಧ್ಯಮ ವರದಿಗಳು ಸ್ಪಷ್ಟವಾಗಿ ತೋರಿಸುತ್ತವೆ. ಸರ್ಕಾರದ ಈ ಕ್ರಮ ಲಾಕ್‌ಡೌನ್ ಹೊರತಾಗಿಯೂ ಹೊಸ ಪ್ರಕರಣಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.  40  ದಿನಗಳಿಗಿಂತ ಹೆಚ್ಚು ಲಾಕ್‌ಡೌನ್ ಹೊಸ ಪ್ರಕರಣಗಳ ಸಂಖ್ಯೆಯನ್ನು  ಕಡಿಮೆಗೊಳಿಸಬೇಕಾಗಿತ್ತು. ಆದರೆ ಸರ್ಕಾರದ ಅಸಮರ್ಪಕ ಕ್ರಮಗಳಿಂದಾಗಿ  ಅಪಾಯಕಾರಿ  ಮಟ್ಟದಲ್ಲಿ ಕೊರೊನಾ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.