ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣ ನಿರ್ಬಂಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಮಂಗಳೂರು, ಏ.27,ಮಂಗಳೂರಿನ  ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಕೊರೋ‌‌ನದ ಗಂಭೀರ  ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ  ‌ಮೀನು ವಾಹನಗಳಿಗೆ ತಕ್ಷಣವೇ  ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕೆ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮೀನುಗಳನ್ನು ಪೂರೈಸಲಾಗುತ್ತಿದೆ. ಆದರೆ ಬೇರೆ ಹೊರ ರಾಜ್ಯದಿಂದ ಮೀನುಗಳನ್ನು ತರುವುದಕ್ಕೆ ಸದ್ಯಕ್ಕೆ ನಿಷೇಧ ಹೇರಲಾಗಿದೆ. ಸಾಮಾನ್ಯ ದಿನಗಳಲ್ಲಿ ಮಂಗಳೂರಿಗೆ ಹೆಚ್ಚಾಗಿ ಕೇರಳದಿಂದ ಮೀನುಗಳು ಬರುತ್ತಿದ್ದವು.