ಪಠಾನೀಯ ಮಸೀದಿಯಲ್ಲಿ ಕೋತ್ವಾಲ್ ನೇತೃತ್ವದಲ್ಲಿ ಇಫ್ತಾರ ಕೂಟ ಆಚರಣೆ
ಕೊಪ್ಪಳ 19: ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ನಗರದ ಹೊರವಲಯ ರೈಲ್ವೆ ಹಳಿ ಹಿರೇಹಳ್ಳಿ ಪಕ್ಕದಲ್ಲಿರುವ ಹಳೆಯ ಪುರಾತನ ಕಾಲದ ಪಠಾನೀಯ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಬಾಬುಸಾಬ್ ಕೊತ್ವಾಲ್ ನೇತೃತ್ವದಲ್ಲಿ ಪ್ರತಿದಿನ ಇಫ್ತಾರ್ ಊಟ ಆಚರಣೆ ನಡೆಯುತ್ತಿದೆ.
ಬಹುತೇಕ ಜನರು ರೋಜಾ ಆಚರಣೆ ಮಾಡುವ ರೋಜದಾರ್ ಬಾಂಧವರಿಗೆ ಇಫ್ತಾರ್ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದಿನೇ ದಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಠಾಣೆಯ ಮಸೀದಿಗೆ ಭೇಟಿ ಮಾಡುತ್ತಿದ್ದಾರೆ. ಅಲ್ಲಿಯೇ ರೋಜಾ ಆಚರಣೆ ಮತ್ತು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಮೌಲಾನ ಆರಿಫ್ ಸಾಹೇಬರು ಕೂಡ ಸರ್ವರ ಶ್ರೇಯಸ್ಸಿಗೆ ಪ್ರತಿದಿನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.