ಹೆಣ್ಣುಮಕ್ಕಳು ಶಿಕ್ಷಣ ಪಡೆದರೇ ಕುಟುಂಬವೇ ಶಿಕ್ಷಣ ಪಡೆದಂತೆ : ಡಾ.ಲಕ್ಷ್ಮಣ

If the girls are educated, then the family is also educated : Dr. Lakshmana

ಹೆಣ್ಣುಮಕ್ಕಳು ಶಿಕ್ಷಣ ಪಡೆದರೇ ಕುಟುಂಬವೇ ಶಿಕ್ಷಣ ಪಡೆದಂತೆ : ಡಾ.ಲಕ್ಷ್ಮಣ  

ಶಿಗ್ಗಾವಿ 24 : ಹೆಣ್ಣುಮಕ್ಕಳು ಶಿಕ್ಷಣ ಪಡೆದರೇ ಅವರ ಇಡಿ ಕುಟುಂಬವೇ ಶಿಕ್ಷಣ ಪಡೆದಂತೆ ಎಂದು ಪ್ರಭಾರ ಆಡಳಿತಾಧಿಕಾರಿ ಡಾ.ಲಕ್ಷ್ಮಣ ನಾಯ್ಕ ಹೇಳಿದರು. 

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ವಿಶೇಷವಾಗಿ ಬಲೂನಗಳಿಂದ ಶೃಂಗರಿಸಿ ತಾಯಂದಿರಿಗೆ ಗೌರವಿಸಿ ಮಾತನಾಡಿದ ಅವರು ತೊಟ್ಟಿಲು ತೂಗುವ ಕೈ ಜಗತ್ತೇ ತೂಗಬಲ್ಲದು ಆ ಶಕ್ತಿಯನ್ನು ಭಗವಂತ ಮಹಿಳೆಯರಿಗೆ ನೀಡಿದ್ದಾನೆ ಆದ್ದರಿಂದ ಸ್ತ್ರೀಯರು ಹೆಚ್ಚು ಹೆಚ್ಚು ಶಿಕ್ಷಣ ಕಲಿತು ಮುಖ್ಯವಾಹಿನಿಗೆ ಬರಬೇಕು ಎಂದರು. 

ತಜ್ಞ ವೈದ್ಯೆ ಡಾ.ತಬಸುಮ ಮಾತನಾಡಿ ಭಾರತ ದೇಶದಲ್ಲಿ ಪುರುಷರಿಗೆ ಸಿಗುವ ಗೌರವ ಸ್ತ್ರೀಯರಿಗಿಲ್ಲ ಕಾರಣ ಅನಕ್ಷರತೆ ಆದ್ದರಿಂದ ಸ್ತ್ರೀಯರು ಶಿಕ್ಷಣವನ್ನು ಕಲಿಯಬೇಕು ಎಂದರು. 

       ತಜ್ಞ ವೈದ್ಯೆ ಡಾ.ರಾಜೇಶ್ವರಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳ ಮೇಲೆ ಲೈಂಗಿಕವಾಗಿ ಅತ್ಯಾಚಾರವೆಸಗುತ್ತಿರುವುದು ಅತಿ ಖೇದಕರ ಸಂಗತಿ ಹಾಗೂ ಮಹಿಳೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಳಂಕ ಮತ್ತು ತಾರತಮ್ಯ ತಪ್ಪಿಲ್ಲ ಎಂದರು. 

     ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ.ಗುರುರಾಜ, ಡಾ.ಸುಭಾಸ ಲೋಖ್ರೆ, ಡಾ.ವಿವೇಕ ಜೈನಕೇರಿ, ಡಾ.ಮಹೇಶ ಜಗದವರ, ಡಾ.ಪಾಟೀಲ, ಡಾ.ವಿದ್ಯಾವತಿ ಬ್ಯಾಟಪ್ಪನವರ, ಶುಶ್ರೂಷಾ ಅದೀಕ್ಷಕಿ ಶುಶೀಲಾ ದೇವಸೂರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.