ಹುಬ್ಬಳ್ಳಿ 12: ನಗರದ ನೆಹರು ಮೈದಾನದಲ್ಲಿ ಹುಬ್ಬಳ್ಳಿ ಫೋಟೋ ಹಾಗು ವಿಡಿಯೋಗ್ರಾಫರ್ ಸಂಘ ಹಾಗೂ ವಿ ಎ ಕೆ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಹಾಗೂ ವಿ ಎ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಅಶೋಕ ಕಾಟ್ವೆ ಇವರು ಕ್ರಿಕೆಟ್ ಆಡುವ ಮುಖಾಂತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು.
ಸಂಘದ ಸದಸ್ಯರು ನಿತ್ಯ ತಮ್ಮ ವೃತ್ತಿಯಲ್ಲಿ ತೊಡಗಿರುತ್ತಾರೆ ಸಂಘವು ಇಂತಹ ಕ್ರೀಡೆ ಆಯೋಜಿಸುವ ಮೂಲಕ ಸಂಘದ ಸದಸ್ಯರಿಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿದಂತಾಗುತ್ತದೆ. ಕ್ರೀಡೆಯೇಠ ಮೇಲೆ ಸೋಲು ಗೆಲುವು ಸಹಜ ಸಂಘದ ಎಲ್ಲ ತಂಡಗಳು ಕ್ರೀಡಾಮನೊಭಾವದಿಂದ ಆಡಬೇಕು ಎಂದರು.ವಿ ಎ ಕೆ ಫೌಂಡೇಶನ್ ಅಧ್ಯಕ್ಷರಾದ ವೆಂಕಟೇಶ್ ಕಾಟ್ವೇ ಮಾತನಾಡಿ ಛಾಯಾಗ್ರಹಕದಲ್ಲಿಯೂ ಕ್ರಿಕೆಟ್ ಪ್ರತಿಭೆ ಕಂಡು ಬಹಳ ಸಂತೋಷವಾಯಿತು. ಇಂಥ ಪಂದಾವಳಿಯನ್ನು ಜಿಲ್ಲಾ ಮಟ್ಟದಲ್ಲಿಯೂ ಆಡಿಸಬೇಕು ಅದಕ್ಕೂ ಕೂಡ ನಮ್ಮ ಸಂಸ್ಥೆಯು ಸಹಾಯವನ್ನು ನೀಡಲು ಯಾವಾಗಲೂ ಸಿದ್ದ ಎಂದು ಹೇಳಿದರು.ಸಂಘದ ಅಧ್ಯಕ್ಷರಾದ ಕಿರಣ ಬಾಕಳೆ ಉಪಾಧ್ಯಕ್ಷರಾದ ದಿನೇಶ್ ದಾಬಡೆ ಸಂಘದ ಕಾರ್ಯದರ್ಶಿಯಾದ ರವೀಂದ್ರ ಕಾಟಿಗರ ಅನಿಲ್ ತುರುಮರಿ ಸಂಘದ ಪದಾಧಿಕಾರಿಗಳಾದ ವಿನಾಯಕ ಸಫಾರಿ ರಾಕೇಶ್ ಪವಾರ್ ಅಲ್ಲಾಭಕ್ಷ ಅಧೋನಿ ಆನಂದ ರಾಜೋಳ್ಳಿ ಆನಂದ್ ಮೆಹರವಾದೆ ಕೃಷ್ಣ ಪೂಜಾರಿ ವಿಜಯ ಬಾಕಳೆ ರಶೀದ್ ವೀರೂ ಬಸವಾ ಪವನ ಕಠಾರೆ ವಿಶಾಲ್ ಪೂಜಾರಿ ಕಿಶನ್ ಶಾಲ್ಗರ್ ಇತರರು ಇದ್ದರು.