ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ

It is necessary to teach children the poetry of Basavadi Sharan: Sahajanandashree

ಲೋಕದರ್ಶನ ವರದಿ 

ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ 

ಮಹಾಲಿಂಗಪುರ 02: ಬಸವಾದಿ ಶರಣರ ವಚನ ಸಾಹಿತ್ಯ ಸಾರವನ್ನು ಇಂದಿನ ಮಕ್ಕಳಿಗೆ ತಿಳಿಸುವುದು ಅಗತ್ಯವಾಗಿದೆ ಎಂದು ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಹೇಳಿದರು. 

ಬುಧವಾರ ಸ್ಥಳೀಯ ಬನಶಂಕರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಹಟಗಾರ ದೇವಾಂಗ ಸಮಾಜದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಬಸವಾದಿ ಶರಣರ ವಚನ ಸಾಹಿತ್ಯ ಮನುಷ್ಯನ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಅವುಗಳ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಸಹ ನಮ್ಮಿಂದಲೆ ಆಗಬೇಕಿದೆ ಎಂದು ವಚನಗಳ ಮಹತ್ವವನ್ನು ತಿಳಿಸಿದರು. 

ಇವತ್ತಿನ ಯುವಕರು ವಿವಿಧ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಸುಂದರ ಬದುಕನ್ನು ಬಲಿಕೊಡುತ್ತಿದ್ದಾರೆ. ಇಂತಹ ಮಾರಕ ಚಟಗಳಿಂದ ದೂರವಿರುವಂತೆ ಬುಧ್ಧಿವಾದ ಹೇಳಿ ಭದ್ರ ಬದುಕು ಕಟ್ಟಿಕೊಳ್ಳಲು ಅವರಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವುದು ಪಾಲಕರ ಕರ್ತವ್ಯವಾಗಿದೆ ಎಂದು ಸಲಹೆ ಕೊಟ್ಟರು.  

 ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಪೂರ್ವಾರ್ಧ ಕಾಲ ಹತ್ತನೇಯ ಶತಮಾನದ ಕನ್ನಡ ಭಾಷೆಯಲ್ಲಿ ಅಂತರಂಗದ ಅನುಭವ ಬಿಚ್ಚಿಟ್ಟು, ಸಮಾಜದಲ್ಲಿಯ ಮೇಲು ಕೀಳು ಎಂಬ ಬೇಧ ಭಾವ ತೊಡೆದು ಹಾಕಿ, ಸಮಾನತೆಯ ಅರಿವು ಮೂಡಿಸಿ, ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ಇಂತಹ ಮಹನೀಯರ ಹೆಸರು ಭವಿಷ್ಯದಲ್ಲಿ ಅಜರಾಮರವಾಗಿರಲು ಮುಂಬರುವ ವರ್ಷದಿಂದ ಸಾಧಕ ಮಹನೀಯರಿಗೆ ಪ್ರಶಸ್ತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮನವಿ ಪತ್ರವನ್ನು ಪುರಸಭೆ ಅಧ್ಯಕ್ಷರಿಗೆ ಸಲ್ಲಿಸಿದರು. 

ಜಯಂತಿ, ವೃತ್ತಕ್ಕೆ ನಾಮಕರಣ : ಪಟ್ಟಣದ ಪುರಭವನದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ, ಪೋಲೀಸ್ ಠಾಣೆ ಪಕ್ಕದ ಶನಿವಾರ ಪೇಟೆ ನೂತನ ವೃತ್ತಕ್ಕೆ ದೇವರ ದಾಸಿಮಯ್ಯ ನಾಮಕರಣ ಮತ್ತು ಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮಗಳಿಗೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ವಚನಕಾರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. 

ಡಾ.ಬಿ ಡಿ. ಸೋರಗಾವಿ, ಶಂಕ್ರ​‍್ಪ ಹಣಗಂಡಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಜಿ ಎಸ್ ಗೊಂಬಿ, ಈಶ್ವರ ಚಮಕೇರಿ, ಬಸವರಾಜ ಚಮಕೇರಿ, ಬಸವರಾಜ ಪೂಜಾರಿ, ಶ್ರೀಶೈಲ ಬಾಡನವರ, ಶ್ರೀಶೈಲ ನುಚ್ಚಿ, ಈಶ್ವರ ವಂದಾಲ, ಅಶೋಕ ಬಾಣಕಾರ, ಚನಬಸು ಕಾಗಿ, ಸುನೀಲ್ ಜಮಖಂಡಿ, ಪ್ರಹ್ಲಾದ್ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ, ಗುರುಪಾದಪ್ಪ ಬಾಡಗಿ ಇದ್ದರು.ಸಮಾಜದ ಮಹಿಳೆಯರು ದೇವರ ದಾಸಿಮಯ್ಯ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.