ಲೋಕದರ್ಶನ ವರದಿ
ನಮ್ಮ ನೀರು ನಮ್ಮ ಹಕ್ಕು ಹೋರಾಟ ಪ್ರಾರಂಭಿಸುತ್ತೇವೆ: ಸಚಿವ ಡಿ.ಕೆ.ಶಿವಕುಮಾರ
ಲೋಕದರ್ಶನ ವರದಿ
ಜಮಖಂಡಿ 02: ನಮ್ಮ ನೀರು ನಮ್ಮ ಹಕ್ಕು ಹೋರಾಟ ಪ್ರಾರಂಭಿಸುತ್ತೆವೆ, 524ಕ್ಕೆ ಎತ್ತರಿಸಲು ಸಿದ್ದತೆ ಮಾಡಿಕೊಳ್ಳುತಿದ್ದೆವೆ, ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರನ್ನು ಕೇಂದ್ರ ತಪ್ಪಿಸಬೇಕು ಎಂದು ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದಲ್ಲಿ ದಿ. ಜಮಖಂಡಿ ಅರ್ಬನ ಕೋ-ಆಪರೇಟಿವ್ಹ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಸೇರಿ ಪಕ್ಷಾತೀತವಾಗಿ ಕೆರಳ ನ್ಯಾಯವಾದಿಗಳ ಜೊತೆ ಮಾತನಾಡಿ ಅತಿ ಹೆಚ್ಚು ಹಣವನ್ನು ಕೊಡಲು ಮಾತನಾಡಿದ್ದೆವೆ ಅದು ಮಾಡಲಿಕ್ಕೆ ಸಾಧ್ಯವಿಲ್ಲ. ಆದರೂ ನಾವು ಆದಷ್ಟು ಬೇಗ 524ಮೀ ಕ್ಕೆ ಎತ್ತರಿಸಿ ಎಲ್ಲ ರೈತರ ಬದುಕನ್ನು ಹಸನು ಮಾಡಲಿಕ್ಕೆ ಸರ್ಕಾರ ಬದ್ದವಾಗಿದೆ, ಗೆಜೆಟ್ ನೋಟಿಪಿಕೇಶನ್ ಆಗಬೇಕಿದೆ ಅದಕ್ಕೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ, ಇದಕ್ಕೆ ಒತ್ತಡ ಹೇರುತಿದ್ದೆವೆ, ರೈತರ ಬದುಕನ್ನು ಹೆಚ್ಚಿಸಬೇಕು, ಆರ್ಥಿಕವಾಗಿ, ನೀರಾವರಿ ಕ್ಷೇತ್ರವನ್ನು ಹೆಚ್ಚಿಸಬೇಕು ಎಂದು ನಮ್ಮ ಸರ್ಕಾರ ನೀರಾವರಿಗೆ 22 ಸಾವಿರ ಕೋಟಿ ರೂ ಬಿಡುಗಡೆ ಮಾಡಿದೆ ಎಂದರು.
ನಾವು ಪರಿಶುದ್ದ ರಾಜಕಾರಣ ಮಾಡುತಿದ್ದೆವೆ 2028ಕ್ಕೆ ಮತ್ತೆ ನಿಮ್ಮ ಆಶಿರ್ವಾದದಿಂದ ಅಧಿಕಾರಕ್ಕೆ ಬರುತ್ತೆವೆ ಅದಕ್ಕೆ ತಾವೆಲ್ಲರು ಆಶಿರ್ವಾದ ಮಾಡಬೇಕು.ಸಿದ್ದನಗೌಡ ಪಾಟೀಲರು ಸಹಕಾರ ಬೀಜ ರಾಜ್ಯದಲ್ಲಿ ಬಿತ್ತಿದರಿಂದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಈ ಭಾಗದಲ್ಲಿ ಸಹಕಾರಿಗಳು ಇಂದು ಹೆಮ್ಮರವಾಗಿ ಬೆಳೆದಿವೆ. ನಾನು ಸಹಕಾರ ಖಾತೆಯಲ್ಲಿದ್ದಾಗ ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ನಾವು ಒಗ್ಗಟ್ಟು ಸೇರಿ ಕೆಲಸ ಮಾಡುತ್ತೆವೆಯೋ ಯಶಸ್ಸು ಕಾಣಲು ಸಾಧ್ಯ, ನಾನು ಎನ್ನುವುದು ಬಿಟ್ಟು ನಾವು ಎಂದರೆ ಯಶಸ್ಸು ಕಾಣಲು ಸಾಧ್ಯ. ಸಿದ್ದು ನ್ಯಾಮಗ.ೌಡ, ಆರ್.ಎಂ.ಕಲೂತಿ ಎರಡು ಕಣ್ಣುಗಳಿದ್ದಂತೆ ಈ ಭಾಗದಲ್ಲಿ ಅಪಾರ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ರಾಜ್ಯಕ್ಕೆ ಶ್ರೀಮಂತ ನಾಡು ಜಮಖಂಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆ ಶ್ರೀಮಂತ ನಾಡು ಇದಾಗಿವೆ, ನಾನು ಸಹಕಾರಿ ಸಚಿವನಾಗಿದ್ದಾಗ ಈ ರೈತರಿಗೂ ಸಕ್ಕರೆ ಕಾರ್ಖಾನೆಗಳಿಗೆ ಅವಿನಾಭಾವ ಸಂಬಂಧ ಇದೆ. ನಾನು ರಾಜಕಾರಣ ಕೂಡ ನಾನೊಬ್ಬ 1983ರಲ್ಲಿ ಟಿಎಪಿಸಿಎಂಎಸ್‌ನಿಂದ 22 ವಯಸ್ಸಿನಲ್ಲೆ ಕನಕಪೂರ ಸೊಸಾಯಿಟಿಯಿಂದ ಸ್ಪರ್ಧೆ ಮಾಡಿ ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರೆಗೂ ಕೂಡ ಒಬ್ಬ ಸಹಕಾರಿ ಮಂತ್ರಿಯಾಗಿ ಎಸ್.ಎಂ.ಕೃಷ್ಣಾ ಅವರ ಅವಧಿಯಲ್ಲಿ ಕಾರ್ಯ ಮಾಡಿದ್ದೆನೆ. ರೈತನಿಗೆ ಸಾಲ ಇಲ್ಲ, ಪೆನ್ಸನ್ ಇಲ್ಲ, ಪ್ರಮೋಶನ ಇಲ್ಲ, ರಿಟೈಯರ್ ಮೆಂಟ್ ಇಲ್ಲ, ಲಂಚ ಇಲ್ಲ ರೈತರಿಗೂ ಸಕ್ಕರೆ ಕಾರ್ಖಾನೆಗಳಿಗೆ ಅವಿನಾಭಾವ ಸಂಬಂಧ ಇರುವದರಿಂದ ಕಾರ್ಖಾನೆಗಳಿಗೆ ಆದ್ಯತೆ ಕೊಡಲಾಯಿತು. ಅವತ್ತಿನ ಕಾಲದಲ್ಲಿ ಸಹಕಾರಿ ಕಾರ್ಖಾನೆಗಳಿಗೆ ಸಾಲ ಕೊಡುವ ಕಾರ್ಯ ಮಾಡಲಾಯಿತು. ಜನರ ಸಂಕಷ್ಟಗಳಿಗೆ ಸ್ವಾವಲಂಬಿಯಾಗಲು 5 ಗ್ಯಾರಂಟಿ ಯೋಜನೆಗಳು ಬಹಳಷ್ಟು ಉಪಯೋಗ ಆಗುತ್ತಿವೆ ಇದರಿಂದ ಜನರು ಆರ್ಥಿಕ ಪ್ರಗತಿ ಸಾಧಿಸುತಿದ್ದಾರೆ ಎಂದರು.
ಅರ್ಬನ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಪ್ರಾಸ್ಥಾವಿಕವಾಗಿ ಮಾತನಾಡಿ, ನಗರದಲ್ಲಿರುವ ಅರ್ಬನ್ ಬ್ಯಾಂಕ್‌ಗೆ 85 ವರ್ಷಗಳ ಇತಿಹಾಸವಿದೆ. ಪಟವರ್ಧನ ಮಹರಾಜರ ಕಾಲದಲ್ಲಿ ಹಣದುಬ್ಬರ ತೊಂದರೆ ಉಂಟಾದಾಗ ಅಪ್ಪಾರಾವ ಶಿಂಧೆಯವರು ಬ್ಯಾಂಕ್ ಸ್ಥಾಪನೆ ಮಾಡಿದರು ಕೇವಲ ವರ್ಷಗಳನ್ನು ಪೂರೈಸುವುದಲ್ಲ. ಬದಲಾಗಿ ಪೂರೈಸಿದ ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂಬುದು ಮುಖ್ಯ.ಹಿಂದಿನ ಕಾಲದಲ್ಲಿ ಬಡತನ ಹಣದುಬ್ಬರ ನಿರುದ್ಯೋಗದಿಂದ ಜನರು ನರಳುತ್ತಿದ್ದರು ಅದಕ್ಕೆ ಪರಿಹಾರವಾಗಿ ಈ ಬ್ಯಾಂಕನ್ನು ಪ್ರಾರಂಭಿಸಲಾಯಿತು.ಡಿ,ಕೆ,ಶಿವಕುಮಾರ ಅವರು ತಾತನವರಾದ ಮಾಜಿ ಶಾಸಕ ದಿ. ರಾಮಣ್ಣ ಕಲೂತಿ ಅವರ ಕಾಲದಲ್ಲಿ ನಗರಕ್ಕೆ ಬಂದಿದ್ದರು ಎಂದು ನೆನಪಿಸಿಕೊಂಡ ಅವರು, ಬ್ಯಾಂಕ್‌ನ ಉದ್ಘಾಟನೆಗೆ ತಮ್ಮ ಸ್ವಂತ ಕರ್ಚಿನಲ್ಲಿ ಆಗಮಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕ್ 6 ಹೊಸ ಶಾಖೆಗಳನ್ನು ಪ್ರಾರಂಭಿಸಲಿದೆ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನ ಈ ಭಾಗಕ್ಕೆ ಅವಶ್ಯವಾಗಿದೆ. ಮಳೆಗಾಲದಲ್ಲಿ ಪ್ರವಾಹ ಬಂದು. ಮುಳುಗಡೆಯಾಗುತ್ತದೆ. ಬೇಸಿಗೆಯಲ್ಲಿ ಬರಗಾಲದ ಬಾಧೆ ಉಂಟಾಗುತ್ತಿದೆ. ಸರಿಯಾಗಿ ನೀರಾವರಿ ಸೌಲಭ್ಯಗಳಿಲ್ಲ.ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಹೆಸರಿನಲ್ಲಿ ಕಟ್ಟಂತಹ ಆಲಮಟ್ಟಿ ಜಲಾಶಯದಲ್ಲಿ ಪೂರ್ಣವಾಗಿ ಅಂದರೆ 524 ಮೀ.ನೀರು ಸಂಗ್ರಹಿಸಲಾಗುತ್ತಿಲ್ಲ. ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಮೂಲ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು, ರಾಜ್ಯದ ಬಹು ಬೇಡಿಕೆಯ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಜಾರಿಗೆ ತರಲು ಸಹಕಾರ ಆರ್ಥಿಕ ಸಹಾಯ ನೀಡಬೇಕು. ಉತ್ತರಕರ್ನಾಟಕದ ಶಾಸಕರು, ಸಚಿವರು, ಜನಪ್ರತಿನಿಧಿಗಳು ಪ್ರಧಾನ ಮಂತ್ರಿ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕೆಂದು ಹೇಳಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರಿ ಸಂಘಗಳು ತಗೆದುಕೊಂಡ ನಿರ್ಧಾರದಿಂದ ಉತ್ತರ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ನಿರ್ಮಾಣಗೊಂಡಿವೆ. ಸಹಕಾರಿ ಬ್ಯಾಂಕಗಳು ಸಾಲ ನೀಡಿದ್ದರಿಂದ ಕಾರ್ಖಾನೆಗಳ ಕ್ರಾಂತಿ ಉಂಟಾಗಿದೆ. ಅರ್ಬನ್ ಬ್ಯಾಂಕಿನ ಪಾತ್ರವು ತುಂಬಾ ಇದೆ. ಬ್ಯಾಂಕಿನ ಹಿರಿಯ ನಿರ್ದೇಶಕರು ಸೇರಿಕೊಂಡು ಒಬ್ಬ ಯುವಕನಿಗೆ ಅಧಿಕಾರದ ಚುಕ್ಕಾಣೆ, ಬ್ಯಾಂಕಿನ ಜವಾಬ್ದಾರಿ ನಿರ್ವಹಣೆ ನೀಡಿರುವುದು ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಿ 524 ಮೀ ನೀರು ಸಂಗ್ರಹಿಸುವ ಕೆಲಸವಾಗಬೇಕು ಎಂದು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ ಕೃಷ್ಣಾಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು. ಸಹಕಾರ ಸಂಘಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸಮಾಡಬೇಕಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಹುಟ್ಟಿರುವ ಸಹಕಾರ ಚಳುವಳಿ ಮಹರಾಷ್ಟ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯದಲ್ಲಿ ಸಹಕಾರ ಸಂಘಗಳನ್ನು ಬೆಳೆಸಿ ಶಕ್ತಿ ತುಂಬಬೇಕಿದೆ ಎಂದರು.
ವೇದಿಕೆಯಲ್ಲಿ ಶಾಸಕರು, ಮಾಜಿ ಶಾಸಕರು, ಸಚಿವರು ಹಾಗೂ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಇದ್ದರು.