ಪ್ರಜಾಸೌಧ ಸ್ಥಳ ಡಿಸಿ ಟಿ.ಭೂಬಾಲನ್ ಪರೀಶೀಲನೆ

Prajasaudha Place DC T. Bhubalan Inspection

ಪ್ರಜಾಸೌಧ ಸ್ಥಳ ಡಿಸಿ ಟಿ.ಭೂಬಾಲನ್ ಪರೀಶೀಲನೆ  

ತಾಳಿಕೋಟಿ 02:ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಬುಧವಾರ ಪಟ್ಟಣಕ್ಕೆ ಭೇಟಿ ನೀಡಿ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ ಕಟ್ಟಡಕ್ಕೆ ಅಗತ್ಯವಿರುವ ಸ್ಥಳದ ಪರೀಶೀಲನೆ ನಡೆಸಿದರು.  

ಪಟ್ಟಣದ ಮೈಲೇಶ್ವರ ಬ್ರಿಲಿಯಂಟ್ ಶಾಲೆ ಹತ್ತಿರವಿರುವ ಸರ್ವೇ ನಂಬರ್ 623 ರ ನಿವೇಶನದ ಪರೀಶೀಲನೆಯನ್ನು ಮಾಡಿ ತಹಸಿಲ್ದಾರ ಕೀರ್ತಿ ಚಾಲಕ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಅವರು ತಹಸಿಲ್ದಾರ್ ಕಾರ್ಯಾಲಯದ ಹತ್ತಿರ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯದ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಕೆಲವು ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.  

ತಹಸಿಲ್ದಾರ್ ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಕಂದಾಯ ನೀರೀಕ್ಷಕ ಸಿಂದಗಿ, ಗ್ರಂಥಪಾಲಕ ಕುಲಕರ್ಣಿ, ಕಂದಾಯ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರಾದ ಸಿದ್ದಾರ್ಥ ಕಟ್ಟಿಮನಿ, ನಾಗೇಶ ದಂಡಿನ್ ಯಮನಪ್ಪ ಚಮಲಾಪೂರ ಮತ್ತಿತರರು ಇದ್ದರು.