ಹೊಸಪೇಟೆ: ಕನ್ನಡ ತೇರಿಗೆ ಅದ್ದೂರಿ ಸ್ವಾಗತ

ಲೋಕದರ್ಶನ ವರದಿ

ಹೊಸಪೇಟೆ 28: ಫೆ. 1 ಮತ್ತು 2 ರಂದು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ನಡೆಯುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ ಕನ್ನಡದ ತೇರು ಸಾಗುತ್ತಿದ್ದು, ಜ.28ರ ಬೆಳಿಗ್ಗೆ 7  ನಗರಕ್ಕೆ ಆಗಮಿಸಿತು.  ಅಲ್ಲಿಂದ  ಬೆಳಿಗ್ಗೆ 9 ರವರೆಗೆ ನಗರ ಪ್ರಮುಖ ಬೀದಿಗಳಲ್ಲಿ ಸಂಚಾರಿದ ರಥವು ಸರ್ಕಾರಿ ಬಾಲಕಿಯರ ಪದವಿಪೂರ್ವ ಮುಂಭಾಗಕ್ಕೆ ತಲುಪಿತು. 

ತಹಶೀಲ್ದಾರ್ ಹೆಚ್.ವಿಶ್ವನಾಥ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ಕೊಟ್ಟರು. ಮೆರವಣಿಗೆಯಲ್ಲಿ ಪ್ರಾಚಾರ್ಯರಾದ ಸಿದ್ಧರಾಮ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಾಧ್ಯಕ್ಷ  ಎತ್ನಳ್ಳಿ ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ  ಜಂಬುನಾಥ ಹೆಚ್ಎಂ, ಕಮಲಾಪುರ ಹೋಬಳಿ ಘಟಕಾಧ್ಯಕ್ಷ ದಯಾನಂದ ಕಿನ್ನಾಳ್, ವೈದ್ಯ ಮಹಬಲೇಶ್ವರ ರೆಡ್ಡಿ, ಪರಿಷತ್ತಿನ ಪದಾಧಿಕಾರಿ ಸೌಭಾಗ್ಯಲಕ್ಷ್ಮಿ, ಜಿ.ಯರ್ರಿಸ್ವಾಮಿ, ಕೆ.ಬಸವರಾಜ್, ಸೋ.ದ.ವಿರುಪಾಕ್ಷಗೌಡ, ವಿಶ್ವನಾಥ ಕವಿತಾಳ, ಅಂಜಲಿ ಬೆಳಗಲ್, ಎನ್.ನಾಗರಾಜ, ವಿಜಯಕುಮಾರ್ ಹಿರೇಮಠ, ವಿಜಯನಗರ ಕಾಲೇಜು ಆಡಳಿತ ಮಂಡಳಿ  ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.