ಖ್ಯಾತ ಪತ್ರಕರ್ತ ಶಿವಪ್ಪನವರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಶ್ರೇಷ್ಠ ಸಾಹಿತಿ ಹಾಲೇಶ ಶಿವಪ್ಪನವರ ಸನ್ಮಾನಿಸಿ ಗೌರವಿಸಿದರು.

ರಾಣೆಬೆನ್ನೂರು30: ಕನರ್ಾಟಕ ರಕ್ಷಣಾ ವೇದಿಕೆ ಹೆಚ್.ಶಿವಾರಾಮೇಗೌಡ ಸಾರಥ್ಯದಲ್ಲಿ ಕುವೆಂಪು ರವರ 114ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ಪ್ರವಾಸಿ ಮಂದಿರದಲ್ಲಿ ಆಚರಣೆ ಮಾಡಲಾಯಿತು. 

 ಇದರ ವತಿಯಿಂದ ಸಾಹಿತಿ ಹಾಗೂ ಖ್ಯಾತ ಪತ್ರಕರ್ತ ಹಾಲೇಶ್ ಶಿವಪ್ಪನವರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ನಾಡಿಗೆ ಹೆಸರಾದವರು. ಅವರು ಬರೆದ ಕೃತಿಗಳು ಇಂದಿನ ವಿದ್ಯಾಥರ್ಿಗಳಿಗೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಮೇರಗು ತಂದವರು. ಇಂತಹ ಕವಿಯು ನಾಡಿಗೆ ಒಂದು ಕೀತರ್ಿ ತಂದವರು. ಇಂತಹ ಮಹಾನ್ ಕವಿಯಂತೆಯೇ ಇಂದಿನ ವಿದ್ಯಾಥರ್ಿಗಳು ಹೆಸರು ಗಳಿಸಬೇಕು ಎಂದರು.

ಪತ್ರಕರ್ತ ವಿಶ್ವನಾಥ ಕುಂಬಳೂರು ಮಾತನಾಡಿ, ನಾ ಕಂಡ ಅಪರೂಪ ವ್ಯಕ್ತಿಗಳಲ್ಲಿ ಶಿವಪ್ಪನವರು ಒಬ್ಬರಾಗಿದ್ದು, ಅವರು ತಮ್ಮ ಲೇಖನದ ಮೂಲಕ ರಾಜ್ಯ ಮೂಲೆ ಮೂಲೆಗೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಸೃಜನಶೀಲತೆಯ ವ್ಯಕ್ತಿತ್ವ, ಶ್ರಮ, ಸಮಯ ಪ್ರಜ್ಞೆಯಿಂದ ಇತರರಿಗೂ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನೂ ಸಾಹಿತ್ಯಾಪ್ರೀಯರು ತಮ್ಮ ಜೀವನದೂದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಗಣೇಶ ಕೆ ಗೋಣಿಬಸಮ್ಮನವರ, ನೇತ್ರಾವತಿ ಚಲವಾದಿ, ನಜೀರ್ಅಹ್ಮದ್ ಖಾನ್ ಸೌದಾಗಾರ, ಸಲ್ಲಾವುದ್ದೀನ್ ಕಿತ್ತೂರು, ಅಜಮತುಲ್ಲಾ ನಜೀರಹ್ಮದ್ ಉಢಗಣಿ, ಸಂಜೀವ್ ದೇಶಪಾಂಡೆ, ವಿಜಯ ಹೆಡಿಯಾಲ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.