ಲೋಕದರ್ಶನವರದಿ
ರಾಣೇಬೆನ್ನೂರು-ಫೆ.29: ತಾಲೂಕಿನ ಇತಿಹಾಸ ಪ್ರಸಿದ್ಧ, ಸ್ಪಟಿಕ ಲಿಂಗ ಖ್ಯಾತಿಯ ರಂಭಾಪುರಿ ಶಾಖಾ ಹಿರೇಮಠದ ಶ್ರೀ ಷ.ಬ್ರ.ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಆಧ್ಯಾತ್ಮಿಕ ಮತ್ತು ಧರ್ಮ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚನ್ನೈ ಭಾರತೀ ವಿಧ್ಯಾ ಭವನದಲ್ಲಿ ನಡೆದ 2020ನೇ ಸಾಲಿನ ಘಟಿಕೋತ್ಸವ ಸಮಾರಂಭದಲ್ಲಿ ನ್ಯಾಷನಲ್ ವಚರ್ುವಲ್ ಯುನಿವಸರ್ಿಟಿ ಫಾರ್ ಪಿಸ್ ಅಂಡ್ ಎಜುಕೇಶನ್ ಸಂಸ್ಥೆಯು ಈ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ವಿಶ್ವವಿಧ್ಯಾಲಯದ ಮೌಲ್ಯಮಾಪನ ಮುಖ್ಯಸ್ಥ ಸುಂದರ್ ಸಿಂಗ್, ರಜಿಸ್ಟರ್ ದೊರೆರಾಜ್, ಚೇರ್ಮನ್ ಸಂತೋಷ ಸೇರಿದಂತೆ ಮತ್ತಿತರ ಗಣ್ಯರು, ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು. ಗೌರವ ಡಾಕ್ಟರೇಟ್ಗೆ ಭಾಜನಾರದ ಶ್ರೀ ಡಾ|| ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ನಾಡಿನ ಅನೇಕ ಮಠಾಧಿಪತಿಗಳು, ಪೀಠಾದಿಪತಿಗಳು, ಸಂಘ-ಸಂಸ್ಥೆಗಳು ಮುಖಂಡರು, ಗಣ್ಯರು, ಶ್ರೀ ಮಠದ ಭಕ್ತರು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ