ಪುರಸಭೆ ಆರ್ಥಿಕ ಮುನ್ನೋಟದ ಆಯವ್ಯಯದ ಅಂದಾಜು ಮುಖ್ಯಾಂಶಗಳು
ಶಿಗ್ಗಾವಿ 27: ಪಟ್ಟಣದ ಪುರಸಭೆ 2023-24 ಸಾಲಿನ ವಾಸ್ತವಿಕ ಆಯ-ವ್ಯಯ ಲೆಕ್ಕ ಹಾಗೂ 2024-25 ನೇ ಸಾಲಿನ ಪರಿಷ್ಕೃತ ಆಯವ್ಯಯದೊಂದಿಗೆ, 2025-26 ನೇ ಸಾಲಿನ ಆರ್ಥಿಕ ಮುನ್ನೋಟದ ಆಯ-ವ್ಯಯ ಅಂದಾಜು ಪತ್ರಿಕೆಯ ಮುಖ್ಯಾಂಶಗಳು.
ಸನ್ 2025-26 ನೇ ಸಾಲಿನಲ್ಲಿ, ರಾಜಸ್ವ ಖಾತೆಯಲ್ಲಿ ರೂ 1053.35 ಲಕ್ಷ, ಬಂಡವಾಳ ಖಾತೆಯಲ್ಲಿ ರೂ.1302.00 ಹಾಗೂ ಅಸಾಧಾರಣ ಖಾತೆಯಲ್ಲಿ ರೂ.321.90 ಲಕ್ಷ ಒಟ್ಟು ರೂ. 2677.25 ಲಕ್ಷಗಳ ಸ್ವೀಕೃತಿಯನ್ನು ನೀರೀಕ್ಷಿಸಲಾಗಿದೆ. ಅದೇ ರೀತಿ ರಾಜಸ್ವ ಖಾತೆಯಲ್ಲಿ ರೂ 924.65 ಲಕ್ಷಗಳ ರಾಜಸ್ವ ವೆಚ್ಚವನ್ನು ನೀರೀಕ್ಷಿಸಿ, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ರೂ.1408.20 ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಹಾಗೂ ಅದೇ ರೀತಿಯಾಗಿ ಅಸಾಧಾರಣ ಖಾತೆಯಲ್ಲಿ ರೂ 321.90 ಲಕ್ಷಗಳ ಅಸಾದಾರಣ ವೆಚ್ಚವನ್ನು ನೀರೀಕ್ಷಿಸಿ. ಒಟ್ಟಾರೆಯಾಗಿ ರೂ 2677.25 ಲಕ್ಷಗಳ ಸ್ವೀಕೃತಿಯನ್ನು ನೀರೀಕ್ಷಿಸಿ. ರೂ 2654.75ಲಕ್ಷಗಳ ವೆಚ್ಚವನ್ನು ಅಂದಾಜಿಸಿ, 22.50 ಲಕ್ಷಗಳ ಉಳಿತಾಯ ಅಂದಾಜನ್ನು ಮಂಡಿಸಿದೆ.
ರಾಜಸ್ವ ಆದಾಯ ಮತ್ತು ಬಂಡವಾಳ ಆದಾಯಗಳಲ್ಲಿ ಮುಖ್ಯವಾಗಿ ಸರಕಾರದಿಂದ ಮುಕ್ತನಿಧಿ ಅನುದಾನ. ರೂ.100. ಲಕ್ಷ, 15 ನೇ ಹಣಕಾಸು ಯೋಜನೆಯಲ್ಲಿ 250. ಲಕ್ಷ ಅನುದಾನ, ವಿಷೇಶ ಅನುದಾನ 1000.ಲಕ್ಷ : ವೇತನ ಅನುದಾನ ರೂ.310 ಲಕ್ಷ ; ವಿದ್ಯುಚ್ಚಕ್ತಿ ಅನುದಾನದಿಂದ ರೂ 250 ಲಕ್ಷ ಹಾಗೂ ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೂ 10. ಲಕ್ಷಗಳನ್ನು ನೀರಿಕ್ಷಿಸಿದೆ. ಅದೇರೀತಿಯಾಗಿ ಆಸ್ತಿ ತೆರಿಗೆ ಆದಾಯದಿಂದ ರೂ.125 ಲಕ್ಷ : ಅಭಿವೃದ್ಧಿ ಶುಲ್ಕದಿಂದ ಮತ್ತು ಕಟ್ಟಡ ಅನುಮ ಶುಲ್ಕದಿಂದ ರೂ.45. ಲಕ್ಷಗಳನ್ನು ನೀರೀಕ್ಷಿಸಿದೆ. ಅದೇ ರೀತಿ ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ರೂ.18 ಲಕ್ಷ : ಅಂಗಡಿಗಳ ಲೈಸೆನ್ನದಿಂದ ರೂ.8 ಲಕ್ಷ : ಮಾರುಕಟ್ಟೆ ಶುಲ್ಕದಿಂದ ರೂ.15 ಲಕ್ಷ : ಘನತಾಜ್ಯ ನಿರ್ವಹನೆ ಶುಲ್ಕದಿಂದ ರೂ.12. ಲಕ್ಷ ಹಾಗೂ ನೀರು ಸರಬರಾಜು ನಳದ ಫೀ ರೂ. 70 ಲಕ್ಷಗಳ ಉತಾರ, ಖಾತಾಬದಲಾವಣೆ. ಭೋಜಾ ಫ್ರೀ ಇತ್ಯಾಧಿಗಳಿಂದ ರೂ 25.50 ಲಕ್ಷಗಳ ಆದಾಯವನ್ನು ನೀರೀಕ್ಷಿಸಿ ಇದರೊಂದಿಗೆ ಇನ್ನೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳಿಂದ ಸಂಪನ್ಮೂಲ ಕ್ರೋಡೀಕರಣಗೊಳಿಸುವುದು.
ಪುರಸಭೆ ಎಲ್ಲ ಅಧಿಕಾರಿಗಳ,ಸಿಬ್ಬಂದಿ ವರ್ಗ 2025-26ನೇ ಸಾಲಿನಲ್ಲಿ ಸಿಬ್ಬಂದಿ ವರ್ಗದ ವೇತನ ಹಾಗೂ ಕಲ್ಯಾಣ ವೆಚ್ಚಕ್ಕಾಗಿ ರೂ.310 ಲಕ್ಷಗಳನ್ನು ಹಾಗೂ ಪೌರ ಕಾರ್ಮಿಕರ ಬೆಳಗಿನ ಉಪಹಾರದ ವ್ಯವಸ್ಥೆ 7.10 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಪ್ರಿಂಟಿಂಗ ಮತ್ತು ಸ್ಟೇಶನರಿಗಾಗಿ ರೂ 18. ಲಕ್ಷಗಳನ್ನು : ಆಡಳಿತ ಮಂಡಳಿಯ ಗೌರವಧನ ಇತ್ಯಾದಿಗಳಿಗಾಗಿ ರೂ 5.50 ಲಕ್ಷ ಸದಸ್ಯರು ಹಾಗೂ ಸಿಬ್ಬಂದಿಗಳ ಅಧ್ಯಾಯನ ಪ್ರವಾಸಕ್ಕಾಗಿ ಪ್ರಯಾಣ ವೆಚ್ಚಕ್ಕಾಗಿ ರೂ.15 ಲಕ್ಷ : ವಾಹನಗಳ ದುರಸ್ಥಿಗಾಗಿ ರೂ.12.55 ಲಕ್ಷಗಳನ್ನು : ವಾಹನಗಳ ಇಂದನಕ್ಕಾಗಿ ರೂ 20 ಲಕ್ಷ : ಕಾನೂನು ವೆಚ್ಚಕ್ಕಾಗಿ ರೂ.2.85. ಲಕ್ಷ : ಸಮಾಲೋಚನ ವೆಚ್ಚಕ್ಕಾಗಿ ರೂ.5. ಲಕ್ಷ : ಜಾಹೀರಾತು ಹಾಗೂ ಪ್ರಚಾರಕ್ಕಾಗಿ ರೂ.10 ಲಕ್ಷ : ಸಂಪರ್ಕ ವೆಚ್ಚಕ್ಕಾಗಿ ರೂ.5.50 ಲಕ್ಷ ಹೊರ ಗುತ್ತಿಗೆ ಕಾರ್ಮಿಕರ ವೇತನ ರೂ 65 ಲಕ್ಷಗಳು ಇತ್ಯಾದಿ ಹೀಗೆ ಸಾಮಾನ್ಯ ಆಡಳಿತಕ್ಕಾಗಿ ಸನ್ 2025-26 ರಲ್ಲಿ ಮೀಸಲಿಸಿ ಕಾಯ್ದಿರಿಸಿದೆ.
ಪಟ್ಟಣದ ರಸ್ತೆಗಳು ಜನರ ಜೀವನಾಡಿ ಇದ್ದಂತೆ ಆದ್ದರಿಂದ ಪಟ್ಟಣದ ರಸ್ತೆಗಳನ್ನು ನಿರ್ವಹಣೆ ಮಾಡಿ ಸರಾಗ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಹಾಗೂ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ ರೂ.100 ಲಕ್ಷ. ಹೊಸ ರಸ್ತೆ ನಿರ್ಮಾಣಕ್ಕಾಗಿ ರೂ 250 ಲಕ್ಷ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ 240 ಲಕ್ಷಗಳನ್ನು ಹಾಗೂ ಹೊಸ ಚರಂಡಿ ನಿರ್ಮಾಣ ಮಾಡುವ ಕಾರ್ಯಕ್ರಮಕ್ಕಾಗಿ ರೂ.180 ಲಕ್ಷಗಳ ಗುರಿ ಹೊಂದಲಾಗಿದೆ. ಇದೇ ಸಂದರ್ಭದಲ್ಲಿ 4ನೇ ಹಂತ ನಗರೋತ್ಥಾನ ಯೋಜನೆಯಡಿ ರೂ.1000 ಲಕ್ಷಗಳ ರಸ್ತೆ ಹಾಗೂ ಚರಂಡಿ ನಿರ್ಮಾಣದ ಅಭಿವೃಧಿ ಕಾರ್ಯಕ್ರಮ.ಪಟ್ಟಣದ ಬೀದೀದೀಪದ ನಿರ್ವಹಣೆ ಸಲುವಾಗಿ ಹಾಗೂ ಹೊಸ ಬಡಾವನೆಗಳಿಗೆ ಬೀದೀದೀಪದ ವ್ಯವಸ್ಥೆಯನ್ನು ವಿಸ್ತರಿಸುವ ಹಾಗೂ ವಿವಿಧ ಸ್ಥಳಗಳಲ್ಲಿ ಹೈ ಮಾಸ್ಕ ಎಲ್.ಇ.ಡಿ ವಿದ್ಯುತ್ತ ದೀಪಗಳಿಗಾಗಿ ಈ ವರ್ಷ 1.50 ಲಕ್ಷ ಮೀಸಲಿರಿಸಿದೆ.2025-26 ನೇ ಸಾಲಿನಲ್ಲಿ ಸ್ವಚ್ಛ ಭಾರತ ಮೀಶನ್ 2.0 ಯೋಜನೆಯಡಿ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಸಲುವಾಗಿ ಸಾಕಷ್ಟು ಕಾರ್ಯಕ್ರಮ ಹಾಕಿಕೊಳ್ಳಲಾಗಿ ಯೋಜನೆಯಡಿ ಹಣ ಬಿಡುಗಡೆಯಾಗಿದ್ದು, ಶೌಚಾಲಯ ನಿರ್ಮಾಣ ಕಾರ್ಯಕ್ರಮಕ್ಕೆ ವ್ಯಯಿಸಲಾಗುತ್ತಿದ್ದು, ಸುಂದರ ನೈರ್ಮಲ್ಯ ನಗರವಾಗುವುದರಲ್ಲಿ ಸಮೂದಾಯ ಶೌಚಾಲಯ ಕಾಮಗಾರಿಗಳು ಒಳಗೊಂಡಿದೆ.
ಸನ್ 2025-26 ಸಾಲಿನಲ್ಲಿ ಡೇನ ಯೋಜನೆಯಡಿ ಸ್ವಯಂ ಉದ್ಯೋಗ ಮಾಡಲು, ತರಬೇತಿ ಇತ್ಯಾದಿಗಳನ್ನು ಮಾಡಲು ರೂ 20 ಲಕ್ಷಗಳನ್ನು ಕಾಯ್ದಿರಿಸಿದೆ. ಉಪಯೋಗವನ್ನು ಪುರಸಭೆ ವ್ಯಾಪ್ತಿಯ ಸಾರ್ವಜನಿಕರ ಪಡೆಯಬಹುದು.
ನೀರು ನೈರ್ಮಲ್ಯ, ರಸ್ತೆ, ಇದ್ದರಷ್ಟೇ ಸಾಲದು ಉತ್ತಮ ಪರಿಸರದ ಅವಶ್ಯಕತೆ ಇದೆ. ಪಟ್ಟಣದ ಸೌಂದರ್ಯ ಹಾಗೂ ಹಸಿರನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಮುಂದುವರೆಸಿದೆ. ಈ ಕಾರ್ಯಕ್ರಮಕ್ಕಾಗಿ ರೂ.6.55 ಲಕ್ಷಗಳನ್ನು ನಿರ್ವಹಣೆಗಾಗಿ ವ್ಯಯಿಸುವ ಹಾಗೂ ಹೊಸ ಉದ್ಯಾನವನ ನಿರ್ಮಿಸುವದಕ್ಕಾಗಿ ಹಾಗೂ ಕೆರೆಗಳ ಅಭಿವೃದ್ದಿಗಾಗಿ ರೂ 140 ಲಕ್ಷಗಳ ಗುರಿ ಹೊಂದಲಾಗಿದೆ.ಸಮಾಜದಲ್ಲಿ ದೀನ-ದಲಿತರು; ಆರ್ಥಿಕವಾಗಿ ಹಿಂದುಳಿದವರು ಹಾಗೂ ವಿಶೇಷ ಅರ್ಹತೆವುಳ್ಳವರು ಸಮಾನವಾಗಿ ಬದುಕಲು ಮುಕ್ತ ವಾತಾವರಣ ಖಅ/ಖಖಿ ಜನಾಂಗದ, ಆರ್ಥಿಕವಾಗಿ ಹಿಂದುಳಿದವರ ಹಾಗೂ ವಿಶೇಷ ಚೇತನವುಳ್ಳವರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ಧಿಗಾಗಿ ಶೇ.34.35ಅ ರಷ್ಟು ಸ್ವೀಕೃತಿಯಲ್ಲಿ ಮೀಸಲಿಡಲಾಗಿದೆ ಅವುಗಳಲ್ಲಿ 24.10ಅ ಯೋಜನೆ ರೂ. 35.51 ಲಕ್ಷಗಳನ್ನು 7.25ಅ ಯೋಜನೆಯಲ್ಲಿ ರೂ.8.87 ಲಕ್ಷಗಳನ್ನು ಹಾಗೂ 5ಅ ಯೋಜನೆಯಲ್ಲಿ ರೂ 6.12 ಲಕ್ಷಗಳನ್ನು ವ್ಯಯಿಸುವ ಗುರಿ ಹೊಂದಲಾಗಿದೆ. ಅದೇ ರೀತಿ ಪ.ಜಾ/ಪ.ಪಂಗಡದ ಜನಾಂಗದವರು ವಾಸಿಸುವ ಪ್ರದೇಶದ ಅಭಿವೃದ್ದಿಗಾಗಿ ಮೀಸಲಿರಿಸಿದೆ.ಪಟ್ಟಣದ ನೈರ್ಮಲ್ಯ ಹಾಗೂ ಆರೋಗ್ಯ ಕಾಯ್ದಿಕೊಂಡು, ಶುದ್ದ ಕುಡಿಯುವ ನೀರು ಒದಗಿಸಿ ನಗರವಾಸಿಗಳ ಆರೋಗ್ಯ ಸ್ಥಿತಿ ಸುಧಾರಿಸುವ ಕಾರ್ಯಕ್ರಮಕ್ಕಾಗಿ ಈ ಪ್ರಸಕ್ತ ವರ್ಷದಲ್ಲಿ ವಿಸ್ತ್ರತವಾದ (ಡಿ.ಪಿ.ಆರ್) ತಯಾರಿಸಿದ್ದು, ಘಣತಾಜ್ಯ ನಿರ್ವಹಣೆಗೆ ರೂ.100 ಲಕ್ಷಗಳನ್ನು ಮೀಸಲಿಡಲಾಗಿದ್ದು, ಹಾಗೂ ಬಂಡವಾಳ ಹೂಡಿ ಹೊಸ ತಂತ್ರಜ್ಞಾನದ ಮಶೀನರಿಗಳನ್ನು ಹಾಗೂ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಘನತಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕಾಗಿ ಮೀಸಲಿಡಲಾಗಿದೆ. ಇದರಿಂದ ನಗರದ ಜನರ ಆರೋಗ್ಯ ಸುದಾರಿಸಿ, ಪರಿಸರ ಹಾಗೂ ನಗರ ಸೌಂದರ್ಯ ಹೆಚ್ಚಾಗುವ ನಂಬಿಕೆ ನಮಗಿದೆ.ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕಾಗಿ ಈ ವರ್ಷ ವಿದ್ಯುತ ಬಿಲ್ಲ ಹೊರತುಪಡಿಸಿ ಈ ಆಯ-ವ್ಯಯದಲ್ಲಿ ಅವಕಾಶ ಮಾಡಿಕೊಂಡು ನೀರು ಸರಬರಾಜು ವಿತರಣಾ ವ್ಯವಸ್ಥೆಯನ್ನು ಹೊಸ ಬಡಾವಣೆ, ಒತ್ತಡ ಬಾರದ ಪ್ರದೇಶ, ಹಳೇಯ ಪೈಪಲೈನ ಬದಲಿಸುವ/ವಿಸ್ತರಿಸುವ ಹಾಗೂ ಸ್ಥಾವರ ಯಂತ್ರೋಪಕರಣದಂತಹ ಬಂಡವಾಳ ಕಾರ್ಯಕ್ರಮದ ವೆಚ್ಚಕ್ಕಾಗಿ ರೂ.160 ಲಕ್ಷಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ನೀರು ಶುದ್ದೀಕರಣ ಘಟದ ಎರಡು ಸ್ಥಾವರಗಳ ಮತ್ತು ಬೀದಿ ದೀಪಗಳ ವಿದ್ಯುತ್ ಶುಲ್ಕ ರೂ 250 ಲಕ್ಷ ವಿದ್ಯುತ್ತ ಬಿಲ್ಲ ಪಾವತಿಸಲು ಕಾಯ್ದಿರಿಸಿದೆ.