ಮರುಳಸಿದ್ದೇಶ್ವರ ದೇವರಿಗೆ ಅಡಿಕೆ ಪೂಜೆ: ಭವಿಷ್ಯವಾಣಿ
ಇಂಡಿ 31: ತಾಲೂಕಿನ ತಡವಲಗಾ ಗ್ರಾಮದ ಮರುಳಸಿದ್ದೇಶ್ವರರು 12ನೇ ಶತಮಾನದ ಬಸವಣ್ಣ ನಂತರ ಧರ್ಮದ ಉಳಿವಿಗಾಗಿ ಶಿವನಿಂದ ಅಪ್ಪಣೆ ಪಡೆದು ತಾಯಿಯ ಉದರದಿಂದ ಶಿಲೆಯ ಆಕಾರದಲ್ಲಿ ಜನಿಸಿ, ಭೂಲೋಕ್ಕೆ ಬಂದ ಮರುಳಸಿದ್ದೇಶ್ವರರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿ, ಭಕ್ತರಿಗೆ ಬೇಡಿದ್ದನ್ನು ದಯಪಾಲಿಸುವ ಇಂಡಿ ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಮರುಳಸಿದ್ದೇಶ್ವರರು ಎಂದರೆ ತಪ್ಪಾಗಲಾರದು. ಅದರಂತೆ ಇಂದು ಮರುಳಸಿದ್ದೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಯುಗಾದಿ ಹಬ್ಬದ ಮಾರನೆಯ ದಿನ ವರ್ಷದ ಮಳೆ ಬೆಳೆಗಳ ಬಗ್ಗೆ ಹಾಗೂ ಗ್ರಾಮದ ಆಗುಹೋಗುಗಳ ಬಗ್ಗೆ, ಅಡಿಕೆ ಪೂಜೆ ಕಾರ್ಯಕ್ರಮ ನಡೆಯಿತು.
ಬೆಳಗೆ ಐದು ಗಂಟೆಗೆ ಮರುಳಸಿದ್ದೇಶ್ವರ ದೇವರಿಗೆ ರುದ್ರಾಭಿಷೇಕ ಪೂಜೆ ಸಲ್ಲಿಸಿ ನಂತರ ಗ್ರಾಮದ ಸಾವಿರಾರು ಭಕ್ತರು ಸಮ್ಮುಖದಲ್ಲಿ ಕಂಚಿನ ಅಡಿಕೆ ಪೂಜೆ ಪ್ರಾರಂಭಿಸುತ್ತಾರೆ. ಅಂದರೆ ಕಂಚಿನ ಎರಡು ಅಡಿಕೆಗಳನ್ನು ಮರುಳಸಿದ್ದೇಶ್ವರ ದೇವರ ಲಿಂಗದ ಮೇಲೆ ಇಡುತ್ತಾರೆ. ಅವುಗಳು ಪವಾಡ ರೀತಿಯಲ್ಲಿ ಪುಟಿದು ಬೀಳುತ್ತವೆ. ಅವುಗಳು ಯಾವ ದಿಕ್ಕಿನಲ್ಲಿ ಹೇಗೆ ಬೀಳುತ್ತವೆ ಎಂಬುದು ಆ ದೇವರ ಪೂಜಾರಿ ಮಾತ್ರ ತಿಳಿಯುತ್ತದೆ.ಪ್ರಥಮವಾಗಿ ಮುಂಗಾರಿ ಮಳೆಗಳು, ನಂತರ ಹಿಂಗಾರು ಮಳೆ ಬಗ್ಗೆ, ನಂತರ ಮುಂಗಾರು ಹಂಗಾಮಿನ ಬೆಳೆಗಳು, ನಂತರ ಹಿಂಗಾರು ಹಂಗಾಮಿನ ಬೆಳೆಗಳ ಬಗ್ಗೆ ಪೂಜೆ ಕಟ್ಟುತ್ತಾರೆ, ಯಾವುದು ಬಲಾ, ಯಾವುದು ಎಡಾ, ಎಂಬುದರ ಬಗ್ಗೆ ಫಲಿತಾಂಶವನ್ನು ಧ್ವನಿ ವರ್ಧಕದ ಮೂಲಕ ನೆರೆದ ಭಕ್ತರಿಗೆ ತಿಳಿಸಿರುತ್ತಾರೆ, ಮರುಳಸಿದ್ದೇಶ್ವರ ಅಡಿಕೆ ಪೂಜೆ ಭವಿಷ್ಯವಾಣಿ ಏನು ಆಗುತ್ತದೆ ಎಂದು ಕೇಳಲು ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮರುಳಸಿದ್ದೇಶ್ವರ ದೇವರ ಅಡಿಕೆ ಪೂಜೆ ಭವಿಷ್ಯವಾಣಿ ಎಂದು ಸುಳ್ಳಾಗುವುದಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಇದು ಅನಾದಿಕಾಲದಿಂದ ನಡೆದು ಬಂದ ಪದ್ಧತಿಯಾಗಿದೆ ಎಂದು ಹೇಳುತ್ತಾರೆ ಮರುಳಸಿದ್ದೇಶ್ವರ ದೇವರ ಅರ್ಚಕ ಮುದಕ್ಕಪ್ಪ ಪೂಜಾರಿ. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.