ಕೊಪ್ಪಳದಲ್ಲಿ ಸಂಭ್ರಮದ ಈದುಲ್ ಫಿತರ್ ರಮಜಾನ್ ಹಬ್ಬ ಆಚರಣೆ

Festive Eid-ul-Fitr Ramadan celebration in Koppal

ಕೊಪ್ಪಳದಲ್ಲಿ ಸಂಭ್ರಮದ ಈದುಲ್ ಫಿತರ್ ರಮಜಾನ್ ಹಬ್ಬ ಆಚರಣೆ

ಕೊಪ್ಪಳ 31: ಇಸ್ಲಾಂ ಧರ್ಮದ ಪವಿತ್ರ ರಮಜಾನ್ ಮಾಸಾಚರಣೆ ಒಂದು ತಿಂಗಳ ಉಪವಾಸ ವೃತ ಆಚರಿಸಿದ ಬಳಿಕ ಜರಗುವ ಈದುಲ್ ಫಿತರ್ ಹಬ್ಬ ಸಡಗರ ಸಂಭ್ರಮದಿಂದ ಮುಸ್ಲಿಂ ಸಮಾಜ ಬಾಂಧವರು ಕೊಪ್ಪಳದಲ್ಲಿ ಆಚರಿಸಿದರು. 

 ನಗರದ ನಗರ ಸಭೆ ಬಳಿ ಇರುವ ಹಳೆಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು, ಖಾಜಿ ಅಬ್ಬಾಸ್ ಅಲಿ ಯವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ ಪ್ರಾರ್ಥನೆ ಗೈದರು,  

ಸಾಮೂಹಿಕ ಪ್ರಾರ್ಥನೆಯಲ್ಲಿ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಶಿಫ್ ಕರ್ಕಿಹಳ್ಳಿ, ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷ ಎಂಡಿ ಜಿಲಾನ ಕಿ ಲ್ಲೆದಾರ್ (ಮೈಲೈಕ,), ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸೈಯದ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, , ಹಿರಿಯ ನ್ಯಾಯವಾದಿ ಗಳಾದ ಆಸಿಫ್ ಅಲಿ ಪೀರಾ ಹುಸೇನ್ ಹೊಸಳ್ಳಿ ,ಯುವ ನಾಯಕ ಸೈಯದ್ ಮೆಹಮೂದ ಹುಸೇನಿ ಬಲ್ಲೆ, ಅಬ್ದುಲ್ ಅಜೀಜ್ ಮಾನ್ವಿ ಕರ್, ಮಾನ್ವಿ ಪಾಷಾ, ಹುಸೇನ್ ಪಿರಾ ಮುಜಾವರ್, ಸೈಯದ್ ನಾಸಿರ್ ಹುಸೇನಿ, ಅನೇಕರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. 

 ಈದ್ಗಾ ಮೈದಾನಕ್ಕೆ ಆಗಮಿಸಿದ ಸಂಸದ ಕೆ ರಾಜಶೇಖರ್ ಹಿಟ್ನಾಳ ಮಾಜಿ ಸಂಸದ ಸಂಗಣ್ಣ ಕರಡಿ ಕೊಪ್ಪಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜೆಡಿಎಸ್ ಪಕ್ಷದ ರಾಜ್ಯ ನಾಯಕರಾದ ಸಿವಿ ಚಂದ್ರಶೇಖರ್ ,ನಗರ ಸಭೆಯ ಮಾಜಿ ಅಧ್ಯಕ್ಷ ಮಹೇಂದ್ರ ಚೋಪ್ರಾ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಪ್ರಸನ್ನ ಗಡಾದ್ ರಾಜಕೀಯ ನಾಯಕರಾದ ಅಮರೇಶ್ ಕರಡಿ ಶರಣಪ್ಪ ಸಜ್ಜನ್ ವಿರೂಪಾಕ್ಷಪ್ಪ ನವೋದಯ ಅನೇಕರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಪರಸ್ಪರ ಹಬ್ಬದ ಶುಭಾಶಯ ಕೋರಿದರು,  

ಸಾಮೂಹಿಕ ಪ್ರಾರ್ಥನೆಗೆ ಸೂಕ್ತ ವ್ಯವಸ್ಥೆ ಮಾಡಿರುವುದಕ್ಕೆ ನಗರಸಭೆಯ ಅಧಿಕಾರಿ ವರ್ಗಕ್ಕೆ ಮತ್ತು ವಿಶೇಷವಾಗಿ ನಗರ ಪೊಲೀಸ್ ಠಾಣೆಯ  ಅಧಿಕಾರಿಗಳಿಗೆ ಮುಸ್ಲಿಂ ಸಮಾಜ ಬಾಂಧವರು ಶುಭ ಕೋರಿ ಅಭಿನಂದಿಸಿದರು. ನಂತರ ನಗರಸಭೆಯ ಅಧ್ಯಕ್ಷರ ಚೇಂಬರ್ ನಲ್ಲಿ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಗಣ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ರಾಜಕಾರಣಿಗಳಿಗೆ ಸನ್ಮಾನಿಸಿ ಶುಭ ಕೋರಿದರು.