ಕರೋನ ಸೋಂಕಿನ ಮಹಿಳೆಗೆ ಆರೋಗ್ಯವಂತ ಮಗು ಜನನ.!!

ನಾಗ್ಪುರ, ಏಪ್ರಿಲ್ 30, ಇದು  ವೈದ್ಯಕೀಯ ಲೋಕದ ಅಚ್ಚರಿ. ಕರೊನ ಲೋಕದ ಅಚ್ಚರಿ ಎಂದರೂ ಸರಿಯೇ.!! . ಇಲ್ಲಿನ  28 ವರ್ಷದ ಕರೋನ ಸೋಂಕಿನ ಮಹಿಳೆಯೊಬ್ಬರು  ಹೆಣ್ಣು ಮಗುವಿಗೆ  ಜನ್ಮ ನೀಡಿದ್ದು ಮಗು  ಆರೋಗ್ಯವಾಗಿದೆ ಯಾವುದೇ  ಕರೋನ ಲಕ್ಷಣ ಕಾಣಿಸಿಲ್ಲ ಎಂದು  ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಮಹಿಳೆಯನ್ನು ಹೆರಿಗೆಗಾಗಿ ಐಜಿಜಿಎಂಸಿಎಚ್ (ಇಂದಿರಾ ಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ) ಗೆ ದಾಖಲಿಸಲಾಗಿತ್ತು ಆದರೆ ಆಕೆ ಕಂಟೈನ್‌ಮೆಂಟ್ ವಲಯದ ನಿವಾಸಿಯಾಗಿರುವುದರಿಂದ ವೈದ್ಯರು ವೈರಸ್ ಪರೀಕ್ಷೆಗೆ ಆಕೆಯ ಸ್ವ್ಯಾಬ್ ಮಾದರಿಗಳನ್ನು ತೆಗೆದುಕೊಂಡಿದ್ದು, ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ.ಬುಧವಾರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ .ಈಗ ಆಕೆಯ ಮಗುವನ್ನು ಮೂರು ದಿನಗಳ ನಂತರ ಸೋಂಕಿನ ಪರೀಕ್ಷೆ ಒಳಪಡಿಸಲಾಗುವುದು ಎಂದು  ಅಧಿಕಾರಿ ತಿಳಿಸಿದ್ದಾರೆ.