ಮಹಾಲಿಂಗಪುರ 13: ಇಂದಿನ ಯುವ ಜನಾಂಗವು ನಿರಂತರ ಓದುವಿಕೆಗೆ ನಿತ್ಯ ಕಠಿಣ ಪರಿಶ್ರಮ ಪಡಲು ಮುಂದಾಗಬೇಕು.ಅದರ ಜೊತೆಗೆ ಮುಂದೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಹೇಳಿದರು.
ಸ್ಥಳಿಯ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಸೌಜನ್ಯ ಕೈಮಗ್ಗ ನೇಕಾರರ ಸಹಕಾರಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನೇಕಾರ ಮಕ್ಕಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ “ಯುವಜನಾಂಗಕ್ಕೆ ಇಂದು ಅವಕಾಶಗಳು ಕಡಿಮೆಯಾಗುತ್ತಿವೆ.ಜನಸಂಖ್ಯೆ ಹೆಚ್ಚಳ ಹಾಗೂ ತಂತ್ರಜ್ಞಾನ ಹೆಚ್ಚು ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ ಓದಿಗೆ ಕಠಿಣ ಪರಿಶ್ರಮ ಹಾಕದಿದ್ದರೆ ಭವಿಷ್ಯದಲ್ಲಿ ಬೆಲೆ ಇಲ್ಲ ಎಂದರು.
40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಹಿರಿಯರಾದ ಮಲ್ಲಪ್ಪ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ “ಇತ್ತಿಚಿನ ದಿನಗಳಲ್ಲಿ ನೇಕಾರರ “ಮಕ್ಕಳು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಂತರ ಸಂಘದ ಅಧ್ಯಕ್ಷ ಜಿಎಸ್ ಗೊಂಬಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿದರು.ಪುರಸಭೆ ಉಪಾಧ್ಯಕ್ಷ ಶೀಲಾ ಭಾವಿಕಟ್ಟಿ, ಬಿ ಡಿ ಸೋರಗಾಂವಿ, ಶಿವಾನಂದ ತಿಪ್ಪಾ,ಶಿದಗಿರಿಪ್ಪ ಕಾಗಿ, ಸೇರಿದಂತೆ ಅನೇಕ ಸಮಾಜದ ಹಿರಿಯರು ಉಪಸ್ಥಿತರಿದ್ದರು. ಬಸವರಾಜ ಮೇಟಿ ನಿರೂಪಿಸಿ ವಂದಿಸಿದರು.