ಹರಪನಹಳ್ಳಿ: ಸಿಎಎ ವಿರುದ್ಧ ಮಾನವ ಸರಪಳಿ

ಲೋಕದರ್ಶನ ವರದಿ

ಹರಪನಹಳ್ಳಿ 30: ಸಿಎಎ.ಎನ್.ಆರ್ಸಿ.ಎನ್.ಪಿ.ಆರ್. ಕಾಯ್ದೆಯನ್ನ ರದ್ದು ಪಡಿಸಬೇಕೇಂದು  ಜನ ಏಕತಾ ಜನ ಅಧಿಕಾರ ಆಂದೋಲನ ಸಮಿತಿ ಅಧ್ಯಕ್ಷ  ರಹಮತವುಲ್ಲಾ  ಹೇಳಿದರು 

ಪಟ್ಟಣದ ಐಬಿ  ವೃತ್ತದಲ್ಲಿ ಜನ ಏಕತಾದಿನ ಅಧಿಕಾರ ಆಂದೋಲನ ಸಮಿತಿಯಿಂದ ಸಿಎಎ.ಎನ್ಆರ್ಸಿ.ಎನ್ ಪಿ  ಆರ್ ಮತ್ತು ಖಾಸಗೀಕರಣವನ್ನು ರದ್ದುಪಡಿಸಬೇಕೇಂದು ಮಾನವ ಸರಪಳಿ ಮುಖಂತರ ಪ್ರತಿಭಟನೆ ಮಾಡಿದರು 

ಪ್ರತಿಭಟನೆಯಲ್ಲಿ ಮಾತನಾಡಿದ ರಹಮತವುಲ್ಲಾ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಮತ್ತು ದೇಶಾದ್ಯಂತ ರಾಷ್ಟ್ರೀಯ ನಾಗರಿಕರಿಗೆ ಯೋಜನೆಯನ್ನು ರದ್ದು ಮಾಡಬೇಕು ಮತ್ತು ರಕ್ಷಣೆ ಮತ್ತು ವಿದ್ಯುತ್ ವಲಯವೂ ಸೇರಿದಂತೆ ಸಾರ್ವಜನಿಕ ವಲಯದ ಉದ್ದಿಮೆಗಳು ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳ ಮೇಲೆ ದಾಳಿ ಮಾಡಿರುವ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು 

ನರೇಂದ್ರ ಮೋದಿಯ ಸರ್ಕಾರ ಸಿಎಎ.ಎನ್ಪಿಆರ್ಎನ್ಆರ್ಸಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು ಪ್ರಜಾಪ್ರಭುತ್ವದ ಮೇಲೆ ಅನುವುಮಾಡಿಕೊಡುವ ಜನವಿರೋಧಿ ತಪ್ಪು ಧೋರಣೆಗಳನ್ನು ಕೈಬಿಡುವಂತೆ ಒತ್ತಾಯಿಸಿ ದರು 

ಈ ಸಂದರ್ಭದಲ್ಲಿ ಕುದ್ರಿ ನಾಗರಾಜ್ ಕೆಟಿ ರಾಜ್ಯಪ ಬದ್ಯ ನಾಯಕ್  ಚಂದ್ರಪ್ಪ ರೇಣುಕಮ್ಮ ಅಂಜಿನಮ್ಮ ಹನುಮಕ್ಕ ಶಬ್ಬೀರ್ ದುರ್ಗಪ್ಪ ಕರಿಗೌಡ ಉಪಸ್ಥಿತರಿದ್ದರು