ಲೋಕದರ್ಶನ ವರದಿ
ಹರಪನಹಳ್ಳಿ 09: ಪಟ್ಟಣದ ಜೋಯಿಸರಕೇರಿ ಶಂಕರಮಠದ ಬಳಿಯಿರುವ ನಾಗರಕಟ್ಟೆಗೆ ಹೋಗುವ ರಸ್ತೆ ತೀರ ಹದಗೆಟ್ಟಿದೆ.
ಅಂದಾಜು 100 ಮೀಟರ್ ಇರುವ ರಸ್ತೆಯ ಬಳಿ ನಾಗರದೇವರ ಕಟ್ಟೆ ಇದೆ, ಅಲ್ಲಿನ ನಿವಾಸಿಗಳಿಗೆ ಓಡಾಡಲು ತೀವ್ರ ತೊಂದರೆ ಆಗುತ್ತಿದೆ. ಚರಂಡಿ ನೀರು ಹರಿಯುತ್ತಿರುವ ಜಾಗದಲ್ಲೇ ಮಕ್ಕಳು ಆಟವಾಡುತ್ತಾರೆ, ವೃದ್ಧರೂ ಇದೇ ರಸ್ತೆ ಮೂಲಕ ಹೆಚ್ಚು ಓಡಾಡುತ್ತಾರೆ.
ಇಲ್ಲಿ ಸಿಮೆಂಟ್ ರಸ್ತೆ ಮಾಡುವಂತೆ ಹಲವು ಬಾರಿ ಅಧಿಕಾರಿಗಳನ್ನು ಮನವಿ ಮಾಡಿದ್ದೇವೆ, ಯಾರೊಬ್ಬರು ಇತ್ತ ಕಡೆಗೆ ಗಮನ ಹರಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಮುಂಜೂರಾಗಿದೆ ಎನ್ನುತ್ತಿದ್ದಾರೆ, ಆದರೆ ರಸ್ತೆ ನಿಮರ್ಾಣಕ್ಕೆ ಕೆಲವರೂ ಅಡ್ಡಿಪಡಿಸುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಜೋಯಿಸರಕೇರಿಯ ಮಠದ 5 ಮತ್ತು 4ನೇ ವಾರ್ಡ್ಗಳ ನಡುವಿರುವ ನಾಗದೇವರ ಕಟ್ಟೆಗೆ ಹೋಗುವ ರಸ್ತೆ ಅಭಿವೃದ್ದಿ ಪಡಿಸಬೇಕು ಎಂದು ಅಲ್ಲಿನ ನಿವಾಸಿಗಳಾದ ಭರತ್, ಪಕ್ಕೀರಪ್ಪ, ರಾಜಾಸಾಬ್, ನನ್ಯಸಾಬ್,ಸೋಮವ್ವ, ಚಂದ್ರಶೇಖರ್ ಒತ್ತಾಯಿಸಿದ್ದಾರೆ