ಎಚ್‌ಎಎಲ್ ಬಿಡಿ ಭಾಗಗಳ ಉಗ್ರಾಣದಲ್ಲಿ ಬೆಂಕಿ: ಅಪಾರ ನಷ್ಟ

ಬೆಂಗಳೂರು, ಏ. 29,  ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ  ಎಚ್  ಎಎಲ್ ವಿಮಾನಗಳ ಬಿಡಿ ಭಾಗಗಳನ್ನು ಶೇಖರಣೆ ಮಾಡುವ ಉಗ್ರಾಣದಲ್ಲಿ  ಬುಧವಾರ ಆಕಸ್ಮಿಕ ಬೆಂಕಿಕಾಣಿಸಿಕೊಂಡು ಸುತ್ತಮುತ್ತಲಿನ ನಿವಾಸಿಗಳಿಗೆ ಭೀತಿ  ಹುಟ್ಟಿಸಿತು.ಬೆಳಿಗ್ಗೆ 9ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಸುಮಾರು ಮೂರು  ಮಹಡಿಗಳಲ್ಲಿ ಬೆಂಕಿ ಹೊತ್ತಿ ಉರಿದಿದೆ. ಎಚ್.ಎ.ಎಲ್ ತುರ್ತು ಸೇವಾ ತಂಡ ಮಣ್ಣು ಇತರೆ  ವಸ್ತುಗಳಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು. ಸ್ಥಳಕ್ಕೆ ಅಗ್ನಿ ಶಾಮಕ ವಾಹನಗಳು  ಬೆಂಕಿ ನಂದಿಸಿವೆ.ಉಗ್ರಾಣದಲ್ಲಿ ಮೆಗ್ನೀಸಿಯಮ್ ರಾಸಾಯನಿಕ ಅಗ್ನಿಶಾಮಕ ಯಂತ್ರಗಳು  ಸೇರಿದಂತೆ ಯಾವುದೇ ಆಸ್ತಿಗೆ ವಸ್ತುಗೆ ಯಾವುದೇ ಹಾನಿಯಾಗಿಲ್ಲ ಮತ್ತು ಬೆಂಕಿಯಿಂದ  ಯಾವುದೇ ಅಪಘಾತ ಸಂಭವಿಸಿಲ್ಲ.  ತನಿಖೆ ನಡೆಯುತ್ತಿದೆ ಎಂದು ಹೆಚ್.ಎ.ಎಲ್ ನ ಮಾಧ್ಯಮ  ಮುಖ್ಯ ಸಂಯೋಜಕ ಗೋಪಾಲ್ ಸುತಾರ್ ಸ್ಪಷ್ಟಪಡಿಸಿದ್ದಾರೆ.