ಲೋಕದರ್ಶನ ವರದಿ
ಸಿರುಗುಪ್ಪ 04: ಆಥರ್ಿಕವಾಗಿ ಸಬಲರಾದವರು ಆಸಕ್ತರು, ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂದು ಮೌಲಾನಾ ಹಾಜಿ ಎಸ್. ಅಬ್ದುಲ್ ಸಮದ್ ನಿಜಾಮಿ ಹೇಳಿದರು .ಶುಕ್ರವಾರ ಸೌದಾಗರ್ ಮಸೀದಿಯಲ್ಲಿ ನಮಾಜ್ ನಿರ್ವಹಿಸಿ ಇಲ್ಲಿಂದ ಹಜ್ ಯಾತ್ರೆಗೆ ತೆರಳುವ ಹಾಜಿಗಳು ಜಗತ್ತಿಗಾಗಿ, ದೇಶಕ್ಕಾಗಿ ಶಾಂತಿ, ವಿಶ್ವಾಸ, ನೆಮ್ಮದಿ, ನೆಲೆಸಲೆಂದು ಅಲ್ಲಾ ರಸೂಲರಲ್ಲಿ ಪ್ರಾಥರ್ಿಸಿ ದುವಾ ಮಾಡಿರಿ.
ಕಲ್ಮಾ, ನಮಾಜ್, ರೋಜಾ, ಜಕಾತ್, ಹಜ್, ಈ ಐದು ಇಸ್ಲಾಂನ ಬುನಾದಿಯಾಗಿದ್ದು, ಧಾಮರ್ಿಕವಾಗಿ ಆಚಾರ- ವಿಚಾರ, ಶಿಸ್ತು, ಸಂಯಮ, ನಿಯಮ ಪಾಲಿಸಿ ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬ ಮುಸ್ಲಿಂ ಹಜ್ಜ್ ಗೆ ಹೋಗುವ ಮಹಾದಾಸೆ ಇರಲಿ ಎಂದರು.
ಸಿರುಗುಪ್ಪದಿಂದ ಹಜ್ ಯಾತ್ರೆಗೆ ತೆರಳುವ ಹಾಜಿಗಳಾದ ಮುಲ್ಲಾ ಬಾಬು ಜಾಮಿಯ ಮಸ್ಜಿದ್ ಅಧ್ಯಕ್ಷರು, ನಗರಸಭೆಯ ನೂರ್ ಸಾಬ್, ಮತ್ತಿತರರಿಗೆ ಸೌದಾಗರ್ ಮಸ್ಜಿದ್ ಅಧ್ಯಕ್ಷರಾದ ಹಾಜಿ ಹಂಡಿ ಹುಸೇನ್ ಬಾಷಾ ಸಾಬ್ ನೇತೃತ್ವದಲ್ಲಿ ಖತೀಬ್ ಅಬುಲ್ ಹಸನ್ ಬಿನ್ ಜಾಕೀರ್ ಹುಸೇನ್ ಸಾಹೇಬ್, ಕನರ್ಾಟಕ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರಾದ ಹಾಜಿ ಎ. ಅಬ್ದುಲ್ ನಬಿ ನಿಜಾಮಿ, ಹಂಡಿ ಹಾಸಿಂ, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಡಿ. ಆಲಂಬಾಷಾ, ಗಫೂರ್ ಸಾಬ್, ಹಾಜಿ ಎ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಷಾದ್ ಅಲಿ, ಮೊಹಮ್ಮದ್ ನಿಜಾಮುದ್ದೀನ್, ಮೊಹಮ್ಮದ್ ಹಾಜಿ, ಸಮುದಾಯದ ನೂರಾರು ಮುಖಂಡರ ಸಮ್ಮುಖದಲ್ಲಿ ಶಾಲು, ಗುಲ್ ಪೋಷಿ ದೊಂದಿಗೆ ಗೌರವಿಸಿ ಸನ್ಮಾನಿಸಿ ಪರಸ್ಪರ ಹಾಜಿಗಳ ಯಾತ್ರೆ ಪವಿತ್ರಗೊಳ್ಳಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಭಾರತದ ಪ್ರಸಿದ್ಧ ಗುಲ್ಬಗರ್ಾ ಖಾಜಾ ಬಂದೇ ನವಾಜ್ ರವರ ಉರಾಸ್ ಅಂಗವಾಗಿ ಫಾತೆಹಾ ಖಾನಿ ಏರ್ಪಡಿಸಿದ್ದರು. ಎಲ್ಲರಿಗೂ ಸಿಹಿ ಪ್ರಸಾದ ವಿತರಿಸಲಾಯಿತು.