ಕೋವಿಡ್ ಸಾವು ನಿಯಂತ್ರಣಕ್ಕೆ ಮಾರ್ಗಸೂಚಿ ಸಿದ್ಧ: ಡಾ.ಕೆ.ಸುಧಾಕರ್

ಬೆಂಗಳೂರು, ಏ.20, ಕೊರೊನಾ ಸೋಂಕಿನಿಂದ ಸಂಭವಿಸಬಹುದಾದ ಸಾವನ್ನು ತಪ್ಪಿಸುವ  ಬಗ್ಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್  ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 359 ಸೋಂಕು ಪ್ರಕರಣಗಳಿದ್ದರೂ 16 ಸಾವು ಸಂಭವಿಸಿದೆ.55-80 ವರ್ಷದ  ಹಿರಿಯ ನಾಗರಿಕರಲ್ಲಿ ಸೊಂಕು ಮತ್ತು ಸಾವು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಕೂಡ ಕೆಲ  ಮಾರ್ಗಸೂಚಿ ನೀಡಿದೆ. ಅಸ್ತಮಾ, ಶ್ವಾಸಕೋಶ, ಕ್ಷಯ ರೋಗ , ಹೃದಯ ಸಂಬಂಧಿ ಖಾಯಿಲೆ ಇರುವವರು  ಹಾಗೂ ಮೂತ್ರಪಿಂಡ, ಲೀವರ್, ಮದ್ಯ ವ್ಯಸನಿಗಳು, ಶುಗರ್, ಬಿಪಿ, ಕ್ಯಾನ್ಸರ್, ಹೆಚ್ಐವಿ  ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.ಐಸಿಎಂಆರ್   ಸೂಚಿಸಿರುವ  ಗಂಟಲು ದ್ರವ‌ ಪರೀಕ್ಷೆ ಪ್ರಯೋಗಾಲಯವನ್ನು ರಾಜ್ಯಾದ್ಯಂತ ನಿರ್ಮಾಣ ಮಾಡುವ  ಜವಾಬ್ದಾರಿ ನಿಮಾನ್ಸ್ ಕೊಡಲಾಗಿದೆ. ಸಾವಾಗುತ್ತಿರುವುದು ಹೇಗೆ? ಹೇಗೆ ತಪ್ಪಿಸಬಹುದೆಂಬ  ಬಗ್ಗೆ ವಿವರವಾದ ಮಾರ್ಗಸೂಚಿ ರೂಪಿಸಲಾಗಿದೆ ಎಂದರು.
ಸೋಂಕು ಹೆಚ್ಚಾಗಿರುವುದು, ಸಾವು ಹೆಚ್ಚಾಗಿರುವುದು ಹಿರಿಯ ವಯಸ್ಸಿನವರಲ್ಲಿ . ಅತಿ ಕಡಿಮೆ ವಯಸ್ಸಿನ ಸಾವು ಎಂದರೆ ಅದು 55 ವರ್ಷ. 55 ವರ್ಷ ಮೇಲ್ಪಟ್ಟ ಜನ ಯಾವ ರೀತಿ ತಮ್ಮನ್ನುತಾವು ಕಾಪಾಡಿಕೊಳ್ಳಬೇಕು. ಸಣ್ಣ ರೋಗದ ಲಕ್ಷಣ ಕಂಡು ಬಂದರೂ ಅವರೆನ್ನೆಲ್ಲರನ್ನು ಪರೀಕ್ಷಿಸಬೇಕು. ಸಣ್ಣ ಆಯಾಸ ಬಂದರೂ ವೈದ್ಯರನ್ನು ಸಂಪರ್ಕ ಮಾಡಬೇಕು‌ ಎಂದರು.