ಲೋಕದರ್ಶನ ವರದಿ
ವಿಜಯಪುರ 19: ಭಾರತೀಯ ಸಂಸ್ಕೃತಿ ಉತ್ಸವದ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ಕಗ್ಗೋಡ ಗಾಮದ ರಾಮನಗೌಡ ಬಾಪುಗೌಡ ಪಾಟೀಲ(ಯತ್ನಾಳ) ಗೋರಕ್ಷಾ ಕೇಂದ್ರದ ಆವರಣದಲ್ಲಿ ಇದೇ ದಿ. 30 ಹಾಗೂ 31 ರಂದು ವಿಶ್ವವಿಖ್ಯಾತ ಯೋಗ ಋಷಿ ಸ್ವಾಮಿ ರಾಮದೇವ ಮಹಾರಾಜರ (ಬಾಬಾ ರಾಮದೇವ) ಉಪಸ್ಥಿತಿಯಲ್ಲಿ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 5 ರಿಂದ 7.30 ರವರೆಗೆ ಈ ಯೋಗ ಶಿಬಿರ ನಡೆಯಲಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಈ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಎಂದು ಪರಂಜಲಿ ಯೋಗ ಸಮಿತಿಯ ಕನರ್ಾಟಕ ರಾಜ್ಯದ ಪ್ರಭಾರಿ ಭವರಲಾಲ ಆರ್ಯ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯೋಗ ಗುರು ರಾಮದೇವ ಮಹಾರಾಜರು ಭ ಆರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಇದೇ ದಿ.ಇದೇ ದಿ. 29 ರಂದು ವಿಜಯಪುರಕ್ಕೆ ಆಗಮಿಸಲಿದ್ದು, ಅವರು ಬರುವ ಪೂರ್ವದಲ್ಲಿ 101 ಯೋಗ ಶಿಬಿರಗಳನ್ನು ನಡೆಸಿ ಅವರಿಗೆ ಯೋಗನಮನ ಸಲ್ಲಿಸುವ ಮೂಲಕ ಆದರದ ಸ್ವಾಗತ ಕೋರಲಾಗುವುದು ಎಂದರು.
ಕಗ್ಗೋಡದಲ್ಲಿ ನಡೆಯಲಿರುವ ಎರಡು ದಿನಗಳ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದ ಪೂರ್ವಭಾವಿಯಾಗಿ ಇದೇ ದಿ. 21 ರಿಂದ 23 ರವರೆಗೆ ನಗರದ ಎಸ್.ಎಸ್.ಹೈಸ್ಕೂಲ್ ಮೈದಾನದಲ್ಲಿ ವಿರಾಟ ಯೋಗ ಶಿಬಿರ ಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 5 ರಿಂದ 7 ಗಂಟೆಯವರೆಗೆ ಈ ಶಿಬಿರ ನಡೆಯುವುದು. ವಿಜಯಪುರ ನಗರದ ಸಮಸ್ತ ನಾಗರಿಕರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಅವರು ಕೋರಿದರು.
ಯೋಗಋಷಿ ರಾಮದೇವ ಮಹಾರಾಜರು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿಯೇ ಯೋಗಮಯ ಕನರ್ಾಟಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನ ವಿಜಯಪುರ ಜಿಲ್ಲೆಯಿಂದಲೇ ಪ್ರಾರಂಭವಾಗುವುದು. ರಾಜ್ಯದ ಪ್ರತಿ ಗ್ರಾಮ, ವಾಡರ್್ನಲ್ಲಿ ಉಚಿತವಾಗಿ ನಿರಮತರ ಯೋಗ ಕೇಂದ್ರಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಆರೋಗ್ಯ ಸೇವೆ ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸುಮಾರು 500 ಯೋಗ ಸಾಧಕರಿಗೆ ಪತಂಜಲಿ ಪಠ್ಯಾಧಾರಿತ ಯೋಗ ಶಿಕ್ಷಕರ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಪತಂಜಲಿ ಸಂಸ್ಥೆಯು ಯೋಗ, ಆಯುವರ್ೇದ, ಸ್ವದೇಶಿ, ಆಧ್ಯಾತ್ಮ, ಭಾರತೀಯ ಶಿಕ್ಷಣ ಇತ್ತಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ ದೇಶದ ಮಾನವ ಸಂಪನ್ಮೂಲ ಉನ್ನತೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗೀಮಠ, ಸಂಜಯ ಕುಸ್ತಿಗಾರ, ಕಿರಣಕುಮಾರ, ಬಾಲಚಂದ್ರ ಶಮರ್ಾ, ಶ್ರೀಶೈಲ ಹಳಕಟ್ಟಿ, ಸಂಜಯ ಸ್ವಾಮಿ, ಸುನಮದಾ ಹೊನವಾಡ, ಶಶಿಕಲಾ ಕುಟಗಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.