ಪ್ರತಿಯೊಂದು ಮಗುವಿಗೆ ಅಜ್ಜ-ಅಜ್ಜಿಯರೆಂದರೆ ಪ್ರೀತಿ: ಡಾ.ಶಿವಾನಂದ

ಲೋಕದರ್ಶನ ವರದಿ

ಯಮಕನಮರಡಿ 18:   ಸ್ಥಳೀಯ ಯಮಕನಮರಡಿ ವಿದ್ಯಾವರ್ಧಕ ಸಂಘದ ಬಿ.ಬಿ. ಹಂಜಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ  ದಿ. 15ರಂದು ಅದ್ದೂರಿಯಾಗಿ ಅಜ್ಜ - ಅಜ್ಜಿ ದಿನಾಚರಣೆಯನ್ನು ಆಚರಿಸುವದರೊಂದಿಗೆ ಯು.ಕೆ.ಜಿ ವಿದ್ಯಾಥರ್ಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಅಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜ ಬೆಳಗಾವಿಯ ನಿವೃತ್ತ ಪ್ರಾಚಾಯರ್ಾ ಡಾ.ಶಿವಾನಂದ ಮಸಳಿಯವರು ಮಾತನಾಡುತ್ತಾ ಪ್ರತಿಯೊಂದು ಮಗುವಿಗೆ ಅಜ್ಜ-ಅಜ್ಜಿಯರೆಂದರೆ ಪ್ರೀತಿಯಿರುತ್ತದೆ. ಅವರು ತಮ್ಮ ಮೊಮ್ಮಕ್ಕಳಿಗೆ ನಾಯಕರಾಗಿ, ಮಾರ್ಗದರ್ಶಕರಾಗಿ ಶಿಕ್ಷಕರಾಗಿ ಉತ್ತಮ ಸಂಸ್ಕಾರವನ್ನು ಬೆಳೆಸುವದರೊಂದಿಗೆ ಅವರನ್ನು ಒಳ್ಳೆಯವರನ್ನಾಗಿ ಮಾಡುತ್ತಾರೆ. ಕಾರಣ ಅವರನ್ನು ಪ್ರೀತಿಸಿ ಗೌರವಿಸಬೇಕೆಂದು ಸಲಹೆ ನೀಡಿದರು. ಪೂರ್ವ ಪ್ರಾಥಮಿಕ ಹಂತದ ವ್ಯಾಸಂಗವನ್ನು ಮುಗಿಸಿ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ವಗರ್ಾವಣೆ ಮಾಡುತ್ತಿರುವ ಯು.ಕೆ.ಜಿ ವಿದ್ಯಾಥರ್ಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.

ಈ ಸುಂದರ ಕಾರ್ಯಕ್ರಮದಲ್ಲಿ ಯ.ವಿ.ಸಂಘದ ಚೇರಮನ್ನರಾದ ಬಿ.ಬಿ ಹಂಜಿ, ವೈಸ್ ಚೇರಮನ್ನರಾದ ಆರ್.ಎಲ್.ಮಲಾಜಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ವಾಮನ ಕುಲಕಣರ್ಿ, ಪಿ.ಕೆ.ಮಗದುಮ್ಮ, ರವಿ ಹಂಜಿ, ವ್ಹಿ.ಎಸ್.ಜಿನರಾಳಿ, ಕೆ.ಕೆ.ಪಾಟೀಲ, ಕುಶಾಲಸಿಂಗ್ ರಜಪೂತ, ಕಾರ್ಯದಶರ್ಿಗಳಾದ ಜೆ.ಎನ್.ಅವಾಡೆ, ಪ್ರಾಚಾಯರ್ೆ ಅನಿತಾ ಸುರಂಗೆ, ಅಕ್ಯಾಡಮಿಕ್ ಡೈರೆಕ್ಟರ್ರಾದ ಸಮೀರ್ ಕೋತವಾಲ, ಬಿ.ಬಿ.ಹಂಜಿ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕರಾದ ಡಾ. ವಿಜಯ ಹಂಜಿ ಡಾ. ರಶ್ಮಿ ವಿ. ಹಂಜಿ ಹಾಗೂ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.