ಯಮಕನಮರಡಿ 24: ನರೇಗಾ ಕೋಲಿ ಕಾರ್ಮಿಕರನ್ನು ಕರೆದುಕೊಂಡು ಹೊರಟ್ಟಿದ್ದ ಗೂಡ್ಸವಾಹನ ಸಮೀಪದ ಸಂಗಮ ಸಕ್ಕರೇ ಕಾರ್ಖಾನೆ ಹತ್ತಿರ ಪಲ್ಟಿಯಾಗಿ 33 ಕಾರ್ಮಿಕರು ಗಾಯಗೊಂಡ ಘಟನೆ ವರದಿಯಾಗಿದೆ.
ವಾಹನಕ್ಕೆ ಅಡ್ಡ ಬಂದ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತ ಪಟ್ಟ ಬಗ್ಗೆ ವರದಿಯಾಗಿದೆ. ಗುರುವಾರ ನಡೆದ ಈ ದುರ್ಘಟನೆಯಲ್ಲಿ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಮಾಜಿ ಯೋಧ ಅಡಿವೆಪ್ಪಾ ಬಸವಣ್ಣಿ ಅಂಕಲಿ 42 ಮೃತಪಟ್ಟ ವ್ಯಕ್ತಿ. ಯಮಕನಮರಡಿ ಗ್ರಾಮ ಪಂಚಾಯತಿಯ ನರೇಗಾ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಗೂಡ್ಸ ವಾಹನದಲ್ಲಿ ತೆರಳುತ್ತಿದ್ದಾಗ ಹಿಡಕಲ್ ಡ್ಯಾಂ ಸಮೀಪದ ಸಂಗಮ ಸಕ್ಕರೇ ಕಾರ್ಖಾನೆ ಹೂಸುರ ಕ್ರಾಸ ಹತ್ತಿರ ಬುಲೆಟ್ ವಾಹನ ಅಡ್ಡ ಬಂದದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಾರ್ಮಿಕರಿದ್ದ ವಾಹನ ಉರುಳಿ ಬಿದ್ದು ಮಾತ್ರವಲ್ಲ ಬುಲೆಟ್ ವಾಹನಕ್ಕೂ ಡಿಕ್ಕಿ ಹೊಡೆದು, ಗೂಡ್ಸ ವಾಹನದಲ್ಲಿ ಸುಮಾರು 33 ಜನ ಕಾರ್ಮಿಕರು ಗಾಯಗೊಂಡಿದ್ದು ಜೊತೆಗೆ ಬೈಕ ಸವಾರನು ಕೂಡ ತೀವ್ರವಾಗಿ ಗಾಯಗೊಂಡಿರುವುದರಿಂದ ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಅದರಲ್ಲಿ ಐದು ಜನ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬುಲೆಟ್ ಸವಾರನನ್ನು ಸಮೀಪದ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಆತನಿಗೆ ಚಿಕಿತ್ಸೆ ಫಲಿಸದೆ ಸವಾರ ಅಡಿವೆಪ್ಪ ಮೃತಪಟ್ಟಿದ್ದು ಇರುತ್ತದೆ. ಸ್ಥಳಕ್ಕೆ ಯಮಕನಮರಡಿ ಪಿ ಎಸ್ ಐ ಮಣ್ಣಿಕೇರಿ ಬೆಟ್ಟಿ ನೀಡಿ ಪರೀಶೀಲಿಸಿ ಸದರಿ ಪ್ರಕರಣವನ್ನು ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.