ಅದ್ಧೂರಿಯಾಗಿ ಜರುಗಿದ ಬನಶಂಕರಿದೇವಿ ಜಾತ್ರೆ

Banashankar Devi fair held on a grand scale

ಅದ್ಧೂರಿಯಾಗಿ ಜರುಗಿದ ಬನಶಂಕರಿದೇವಿ ಜಾತ್ರೆ  

ಹಾವೇರಿ 24: ಇಲ್ಲಿಯ ಶಿವಲಿಂಗ ನಗರದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ದೇವಿಯ 21ನೇ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.ಬೆಳಿಗ್ಗೆ ಬನಶಂಕರಿ ದೇವಿಗೆ ವಿಶೇಷ ಅಲಂಕಾರ, ಕುಂಕುಮಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಜಾತ್ರಾ ಮಹೋತ್ಸವದ ಧ್ವಜ ಸ್ಥಾಪನೆ ನೆರವೇರಿತು. ಬನಶಂಕರಿ ಹೋಮ ಮತ್ತು ನವಗ್ರಹ ಹೋಮಗಳನ್ನು ಅರ್ಚಕರಾದ ಮುಸಂಗಸ್ವಾಮಿ ದೇವಾಂಗಮಠ, ಗುರುನಾಥಸ್ವಾಮಿ ದೇವಾಂಗಮಠ, ವಿರೇಶಸ್ವಾಮಿ ದೇವಾಂಗಮಠ, ಹಾಗೂ ಭಕ್ತರು ನೆರವೇರಿಸಿದರು. ಜಾತ್ರಾಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.  

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅವರು ದೇಗುಲಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ನಂತರ ಅಲ್ಲಿ ನೆರೆದಿದ್ದ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು.ಮಧ್ಯಾಹ್ನ ದೇವಿಯ ದರ್ಶನ ಪಡೆಯಲು ಆಗಮಿಸಿದ ಭಕ್ತರಿಗೆ ಅನ್ನಸಂತರೆ​‍್ಣಯನ್ನು ಏರಿ​‍್ಡಸಲಾಗಿತ್ತು. ಸಂಜೆ ದೇಗುಲದ ಆವರಣದಲ್ಲಿ ಸರಳವಾಗಿ ಪಲ್ಲಕ್ಕಿ ಉತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು.ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮನಾಥ ಕುದರಿ, ದೇವಾಂಗ ಸಮಾಜದ ಮುಖಂಡರಾದ ಡಿಆರ್ ಕುದರಿ, ಅಶೋಕ ಕುದರಿ, ಮಹೇಶ ಕುದರಿ, ಮಂಜುನಾಥ ಕುದರಿ, ಗೋಪಾಲ ಕುದರಿ, ವಿಶಾಲ ಕೊಪ್ಪಳ, ದೀಪಕ ಹುಲ್ಲೂರ, ಬಸವರಾಜ ಮತ್ತೂರ, ರಾಜಶೇಖರ ಕುದರಿ, ವೆಂಕಟೇಶ್ ಕುದರಿ, ಈಶ್ವರ ಗಂಜಿ, ಶ್ರೀಧರ ಬಳ್ಳಿ, ನಾರಾಯಣ ಕುದರಿ ಇದ್ದರು.ಪೊಟೊ: ಹಾವೇರಿಯ ಶಿವಲಿಂಗ ನಗರದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ದೇವಿಯ 21ನೇ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.