ಹಜರತ್ ಮೌಲಾ ಹುಸೇನ್ ಉರುಸಿನಂದು ಮಕ್ಕಳಿಗೆ ಉಚಿತ ಖತ್ನಾ ಶಿಬಿರ

Free circumcision camp for children on Hazrat Maula Hussain Urs

ಹಜರತ್ ಮೌಲಾ ಹುಸೇನ್ ಉರುಸಿನಂದು ಮಕ್ಕಳಿಗೆ ಉಚಿತ ಖತ್ನಾ ಶಿಬಿರ   

ವರದಿ: ಚನ್ನಯ್ಯ ಹಿರೇಮಠ ಕುಕನೂರು  

ಕುಕುನೂರು 26: ತಾಲೂಕ ತಳಕಲ್ ಗ್ರಾಮದ ಹಜರತ ಮೌಲಾ ಹುಸೇನ್ ದರ್ಗಾದಲ್ಲಿ ಮುಸ್ಲಿಂ ಬಂಧುಗಳಿಂದ ಮಕ್ಕಳಿಗೆ   ಉಚಿತ ಖತ್ನಾ ಶಿಬಿರವನ್ನು ನೆರವೇರಿಸಲಾಯಿತು.  ಗ್ರಾಮದ ಮುಸ್ಲಿಂ ಸಮಾಜದ ಹಿರಿಯರಾದ ಮಹಮ್ಮದ್ ಸಿರಾಜುದ್ದೀನ್ ಮಾತನಾಡಿ ಪ್ರತಿ ವರ್ಷ ಉರುಸು ನೆರವೇರಿತಿದ್ದು ಈ ಹಿಂದೆ ಎರಡು ವರ್ಷಗಳ ಹಿಂದೆ ಖತ್ನಾ ಶಿಬಿರ ನೆರವೇರಿಸಿದ್ದು ಇನ್ನು ಮುಂದೆ ಜಮಾತಿನ ತೀರ್ಮಾನದಿಂದ ಪ್ರತಿ ವರ್ಷ ಹಜರತ್ ಮೌಲಾ ಹುಸೇನ್ ಉರುಸಿನ ಪ್ರಯುಕ್ತ ಪ್ರತಿ ವರ್ಷವೂ ನೆರವೇರಿಸಲು ತೀರ್ಮಾನಿಸಿದ್ದು ಬಡ ಮಕ್ಕಳಿಗೆ ಖತ್ನಾ ಶಿಬಿರ ವರದಾನವಾಗಿದೆ ಎಂದು ಹೇಳಿದರು.  

ಅವರು ಶನಿವಾರದಂದು ತಳಕಲ್ ಗ್ರಾಮದ  ಹಜರತ್ ಮೌಲಾ ಹುಸೇನ್‌ದರ್ಗಾ ಹತ್ತಿರ ಯಾತ್ರಿನಿವಾಸದಲ್ಲಿ ಹಮ್ಮಿಕೊಂಡಿದ್ದ ಉಚಿತ ಖತ್ನಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಡಾಕ್ಟರ್ ಹಸನ್ ಅಲಿ ನಿಂಗಾಪೂರ ಹಿರಿಯ ವೈದ್ಯಕೀಯ ತಜ್ಞರು ಕಾರ್ಯಕ್ರಮದ ಚಾಲನೆ ನೀಡಿ ಮಾತನಾಡಿ ಧಾರ್ಮಿಕ ದೃಷ್ಟಿ ಮತ್ತು ವೈಜ್ಞಾನಿಕದೃಷ್ಟಿಯಿಂದ ಬರುವ ಎಲ್ಲಾ ರೋಗಗಳನ್ನು ಖತ್ನಾ ಮಾಡಿಸಿಕೊಂಡ ಮಕ್ಕಳು ದೂರ ಇಡಬಹುದು ಮತ್ತು ಪ್ರತಿಯೊಬ್ಬ ಮಕ್ಕಳು ಯಾವುದೇ ತೊಂದರೆಗಳಿಲ್ಲದೆ ಆರೋಗ್ಯವಾಗಿ ಸುಭಿಕ್ಷವಾಗಿ ಆರೋಗ್ಯವಾಗಿದ್ದಾರೆ.  

ಪ್ರತಿವರ್ಷ ಸಾವಿರಾರು ಮಕ್ಕಳು ಇದರ ಸೇವೆಯನ್ನು  ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಬೆಳಗಾಂ ಜಿಲ್ಲೆಗಳಲ್ಲಿಯೂ ಕೂಡಾ ಮುಸ್ಲಿಂ ಬಾಂಧವರು ಇದರ ಸದುಪಯೋಗ ಮಾಡಿಕೊಂಡಿದ್ದಾರೆ ಎಂದರು. ರಾಜ ಸಾಬ್ ಸಬರಾದ ಹಜರತ್ ಮೂಲ ಹುಸೇನ್‌ದರ್ಗಾ ಕಮಿತಿಯಅಧ್ಯಕ್ಷರು ಮಾತನಾಡಿ ಪ್ರತಿ ವರ್ಷವೂ ಹಜರತ್ ಮೌಲಾ ಹುಸೇನ್‌ಅವರ ಉರಿಸಿನ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದು. 

ಈ ಹಿಂದೆ ಎರಡು ವರ್ಷಗಳ ಒಮ್ಮೆ ಖತ್ನಾಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದು ಈ ವರ್ಷ ಜಮಾತಿನಲ್ಲಿ ಎಲ್ಲರೂ ಸೇರಿಕೊಂಡು ಚರ್ಚಿಸಿ ಇನ್ನು ಮುಂದೆ ಪ್ರತಿ ವರ್ಷವೂ ಖತ್ನಾ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಿದ್ದು ಇಂದು 40 ಮಕ್ಕಳಿಗೆ ಖತ್ನಾಕಾರ್ಯಕ್ರಮ ನೆರವೇರಿಸಲಾಗಿದೆ. ಪ್ರತಿಒಂದುಕಾರ್ಯಕ್ರಮದಲ್ಲಿಗ್ರಾಮದಎಲ್ಲಾ ಸಮುದಾಯದವರುಜಾತಿ ಮತ ಪಂಥಎನ್ನದೆಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ವ್ಯಾಖ್ಯಾನದಂತೆಎಲ್ಲಾ ಕಾರ್ಯಕ್ರಮಗಳಲ್ಲಿಯೂ ಎಲ್ಲಾಧರ್ಮದವರ ಸಹಕಾರವಿದೆಎಂದು ಮಾತನಾಡಿದರು.   ಈ ಸಂದರ್ಭದಲ್ಲಿ ಮಹಮ್ಮದ್‌ರಫಿ ಕೊಪ್ಪಳ, ಫಕ್ರುದ್ದೀನ್‌ಯಮನೂರು ಸಾಬ್ ನೂರು ಭಾಷಾ, ಮಲಕಸಾಬ್ ನೂರುಬಾಷ ನಿವೃತ್ತ ಶಿಕ್ಷಕರು, ಪೀರಸಾಬ ಈಲಾತ್ಖಾನ್, ಶೇಕಸಾಬ್ ಪಿಡಿಒ, ಅಲ್ಲಾಭಕ್ಷಿ ಮುಲ್ಲಾ, ಮರ್ದನ್ ಸಾಬ್ ವೀರಾಪೂರ, ಮರ್ಧಾನ್ ಸಾಬ್‌ಗುಡಗುಡಿ, ಕರೀಂಸಾಬ್ ನೂರಭಾಷಾ, ರಾಜಸಾಬ, ಮೌಲಹುಸೇನ್ ಬೇಸರಹಳ್ಳಿ, ಮೌಲಾ ಹುಸೇನ್ ಬಾದರಬಂಡಿ, ಹಾಗೂ ಗ್ರಾಮದ ಮುಸ್ಲಿಂ ಸಮಾಜದಗುರು ಹಿರಿಯರುಇತರರುಇದ್ದರು.