ಜಿ.ಪಂ ಸಿಇಓ ಸಂಕೇಶ್ವರ ಅಂಗನವಾಡಿ ಶಾಲೆಗೆ ಭೆೇಟಿ

ಬೆಳಗಾವಿ: 29 : ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿಮರ್ಾಣವಾಗುತ್ತದೆ ಎಂಬ ಮಾತಿದೆ ಅದರಂತೆ ಅಂಗನವಾಡಿ ಮತ್ತು ಶಾಲೆಗಳು ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಸಕರ್ಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಯೋಜನೆಗಳನ್ನು ಅಂಗನವಾಡಿ ಮೂಲಕ ಅನುಷ್ಠಾನ ಮಾಡುತ್ತಿದೆ.

ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು  .ರಾಮಚಂದ್ರನ್ ಆರ್. ಇವರು ಸಂಕೇಶ್ವರ ನಗರದ ಹರಿಜನ ಗಲ್ಲಿಯ ಅಂಗನವಾಡಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಿಗೆ ಸ್ಥಳದಲ್ಲಿಯೆ ಕನ್ನಡ ಮೂಲಾಕ್ಷರಗಳ ಕುರಿತು ತಿಳುವಳಿಕೆ ನೀಡಿದರು. ಆಹಾರದ ಗುಟ್ಟುಮಟ್ಟ ಮರಿಶೀಲಿಸಿ, ಮೇಲ್ವಿಚಾರಕರಿಗೆ ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳಲು ಸೂಚಿಸಿದರು. ಭನ್ವರಸಿಂಗ್ ಮೀನಾ ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿಗಳು ಜೊತೆಗಿದ್ದರು.