ಮಹಾ ಚುನಾವಣೆ, ಐವರು ಬಿಜೆಪಿ ಅಗ್ರ ನಾಯಕರಿಗೆ ಟಿಕೆಟ್ ನಿರಾಕರಣೆ.!!

 ಮುಂಬೈ , ಅ 5:  ಇದೆ 21 ರಂದು ನಡೆಯಲಿರುವ  ಮಹಾರಾಷ್ಟ್ರ ವಿಧಾನಸಭಾ  ಚುನಾವಣೆಯಲ್ಲಿ ಬಿಜೆಪಿಯ ಐವರು  ಅಗ್ರ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೇ ನಿರಾಕರಿಸಲಾಗಿದೆ. 

ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಏಕನಾಥ್ ಖಡ್ಸೆ (67), ಪ್ರಕಾಶ್ ಮೆಹ್ತಾ (60), ರಾಜ್ ಪುರೋಹಿತ್ (59), ವಿನೋದ್ ತಾವ್ಡೆ (56) ಮತ್ತು ಚಂದ್ರಶೇಖರ್ ಬವಾಂಕುಲೆ (50)  ಮುಂತಾದವರು ವಿಫಲರಾಗಿದ್ದಾರೆ. 

ಮೆಹ್ತಾ ಮತ್ತು ಪುರೋಹಿತ್ ಕ್ರಮವಾಗಿ ಮುಂಬೈ ಬಿಜೆಪಿಯ ಗುಜರಾತಿ ಮತ್ತು ಮಾರ್ವಾಡಿ ಮುಖಗಳಾಗಿದ್ದು, ಇದು ಬಹಳ  ದೊಡ್ಡ ಹೊಡೆತವಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

ಆದಾಗ್ಯೂ, ಖಡ್ಸೆ ಮತ್ತು ಬವಾಂಕುಲೆ ಅವರಿಗೆ ಪರೋಕ್ಷ ರೀತಿಯಲ್ಲಿ ಅವಕಾಶ  ಮಾಡಲಾಗಿದೆ. ಅವರ ಪುತ್ರಿ ರೋಹಿಣಿಗೆ  ಜಲ್ಗಾಂವ್ನ ಮುಖೈನಗರದಿಂದ ಟಿಕೆಟ್ ನೀಡಲಾಗಿದೆ. ಬವಾಂಕುಲೆ  ಪತ್ನಿ ಜ್ಯೋತಿ ಅವರಿಗೆ ನಾಗಪುರದ  ಕ್ಯಾಂಪ್ಟಿಯಿಂದ ಟಿಕೆಟ್ ಕೊಡಲಾಗಿದೆ. ಖಡ್ಸೆ ಅವರು ರಾಜ್ಯದ ಹಿರಿಯ ಬಿಜೆಪಿ ನಾಯಕರಾಗಿದ್ದು, ದಿವಂಗತ ಗೋಪಿನಾಥ್ ಮುಂಡೆಗೆ ಬಹಳ ಹತ್ತಿರವಾಗಿದ್ದರು. ಮೇಲಾಗಿ ಅವರು ಹಿಂದಿನ ಸೇನಾ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು ಮತ್ತು ನಂತರ ಐದು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. 

ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರನ್ನು ಸಚಿವರನ್ನಾಗಿ ಮಾಡಿ ಹಣಕಾಸು  ಮತ್ತು ಕೃಷಿ ಸೇರಿದಂತೆ ಅನೇಕ ಮಹತ್ವದ ಖಾತೆ ನೀಡಲಾಗಿತ್ತು.  ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ  ಉಂಟಾಗಿತ್ತು .