ಮಾನ್ಯ ಜಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆ ಇವರ ಮುಖಾಂತರ ಖಾಸಗಿ ಶಾಲೆಗಳ ಬೇಡಿಕೆಗಳನ್ನು ಜಾರಿಗೋಳಿಸುವ ಕುರಿತು ಮನವಿ
Request to implement the demands of private schools through the Honorable District Magistrate, Kopp
ಕೊಪ್ಪಳ 12: ಕರ್ನಾಟಕ ರಾಜ್ಯದಲ್ಲಿರುವ ಖಾಸಗಿ ಶಾಲೆಗಳು ತಮ್ಮಲ್ಲಿ ಸಾಕಷ್ಟು ಬಾರಿ ಮನವಿ ಸಲ್ಲಿಸುವುದರ ಮುಖಾಂತರ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ.ಕಳೆದ 30ವರ್ಷಗಳಿಂದ 1995 ರಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಭಾಗಗಳಲ್ಲಿ ಕನ್ನಡ ಮಾದ್ಯಮ ಶಾಲೆಗಳನ್ನು ಉಳಿಸುದು ಅನಿವಾರ್ಯವಾಗಿದೆ.
ಕಳೆದ ಬೆಳಗಾಂವ್ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಸಚಿವರು ಮತ್ತು ಮುಖ್ಯ ಮಂತ್ರಿಗಳು ಅನುದಾನ ನೀಡುವ ಭರವಸೆ ನೀಡಿದ್ದಾರೆ.ಈ ವರ್ಷದ 2026-27 ನೇ ಬಜೇಟ್ ಘೋಷಣಿಯಲ್ಲಿಯೂ ಯಾವುದೇ ಅನುದಾನ ಪ್ರಸ್ತಾಪವಿಲ್ಲದಿರುವುದು ಖಾಸಗಿ ಶಾಲೆಗಳಿಗೆ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.ಆದಾಗ್ಯೂ ನಮ್ಮ ಹಲವಾರು ಬೇಡಿಕೆಗಳು ಇನ್ನು ಹಾಗೆ ಇವೆ.ಅವುಗಳಲ್ಲಿ ಪ್ರಮುಖವು
1. ಸುಪ್ರೀಂ ಕೊರ್ಟ ಆದೇಶದನ್ವಯ ಆರ್.ಟಿ.ಈ ಯನ್ನು 2026-27 ನೇ ಶೈಕ್ಷಣಿಕ ವರ್ಷದಿಂದ ಮರು ಜಾರಿಗೋಳಿಸುವುದು.
2. 1995 ರ ನಂತರದ ಕನ್ನಡ ಮಾದ್ಯಮ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವುದು.
3. ಶಾಲಾ ಮಾನ್ಯತೆ ನವೀಕರಣ ಸರಳೀಕರಣ ಗೋಳಿಸುವುದು.
4. ಕೆಕೆಆರ್‌ಡಿಬಿ ಯಿಂದ ಖಾಸಗಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
5. ಹೊಸ ಶಾಲೆಗಳ ಅನುಮತಿಯ ನಿಯಮಗಳಲ್ಲಿ ಸರಳೀಕರಣಗೋಳಿಸುವುದು.
6. ಕನ್ನಡ ಮಾದ್ಯಮ ಅನುದಾನಿತ ಶಾಲೆಗಳಲ್ಲಿ ನೀಡುವ ಬಿಸಿಯೂಟ ಯೋಜನೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ವಿಸ್ತರಿಸುವುದು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೊಪ್ಪಳ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರಿ) ಕುಸ್ಮಾ ವತಿಯಿಂದ ಖಾಸಗಿ ಶಾಲೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಕುಸ್ಮಾದ ಗೌರವ ಅದ್ಯಕ್ಷರಾದ ರಾಘವೇಂದ್ರ ಪಾನಗಂಟಿ,ಕುಸ್ಮಾ ತಾಲೂಕ ಅದ್ಯಕ್ಷರಾದ ಶಾಯಿದ ಹುಸೇನ ತಹಸಿಲ್ದಾರ,ಅಲೀಮ್ ಉದ್ದೀನ ಹಾಗೂ ಕುಸ್ಮಾ ಪಧಾದಿಕಾರಿಗಳು ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 