ಎಲ್‌.ಪಿ.ಜಿ ಗ್ಯಾಸ್ ಸಿಲಿಂಡರ ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿರುವ ಏಜೇನ್ಸಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ಎಲ್‌.ಪಿ.ಜಿ ಗ್ಯಾಸ್ ಸಿಲಿಂಡರ ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿರುವ ಏಜೇನ್ಸಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ Appeal demanding action against agencies selling LPG gas cylinders in the black market

ಗದಗ-12,: ಗದಗ-ಬೆಟಗೇರಿ ನಗರದ ಗ್ರಾಹಕರನ್ನು ವಂಚಿಸಿ ಎಲ್‌.ಪಿ.ಜಿ ಗ್ಯಾಸ್ ಸಿಲಿಂಡರ ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿರುವ ಹಾಗೂ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ಏಜೇನ್ಸಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಾಗೂ ಇಂತಹ ಏಜೆನ್ಸಿಗಳ ಪರವಾನಿಗೆ ರದ್ದುಗೊಳಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಮಾತನಾಡಿ ಗೃಹ ಬಳಕೆ ಎಲ್ ಪಿ ಜಿ  ಸಿಲಿಂಡರ್ ಕೊರತೆಯಿಂದ ರಾಜ್ಯಾದಂತ ಗ್ಯಾಸ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಎಲ್‌.ಪಿ.ಜಿ ಸಿಲಿಂಡರಗಳ ಹೆಚ್ಚಿನ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ  ಆದೇಶ ಮಾಡಲಾಗಿದೆ. ಬ್ಲಾಕ್ ಮಾರ್ಕೆಕಟ್‌ನಲ್ಲಿ 14.5 ಕೆ.ಜಿ ಗೃಹ ಬಳಕೆಯ ಎಲ್‌.ಪಿ.ಜಿ ಸಿಲಿಂಡರ್ ಒಂದೂವರೆ ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಸಾಕಷ್ಟು ಸುದ್ದಿಗಳನ್ನು ಇತ್ತಿಚ್ಚಿಗೆ ನಾವು ನೋಡುತ್ತಿದೇವೆ.  ಮುಂಬರುವ ದಿನಗಳಲ್ಲಿ ಅನೇಕ ಹಬ್ಬಗಳು ಇರುವುದ್ದರಿಂದ ಎಲ್‌.ಪಿ.ಜಿ ಸಿಲಿಂಡರ್‌ಗೆ ಭಾರಿ ಬೇಡಿಕೆ ಇದೆ.

ಗಲ್ಫ್‌ ರಾಷ್ಟ್ರಗಳಿಂದ ಭಾರತಕ್ಕೆ ಎಲ್‌.ಪಿ.ಜಿ. ಸಿಲಿಂಡರ್ ಪೊರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಪ್ಯಾನಿಕ ಆಗಿ ಎಲ್‌.ಪಿ.ಜಿ ಸಿಲಿಂಡರ್ ಖರೀದಿಗೆ ಜನರು ಮುಗಿಬಿದ್ದಿರುವ ದೇಶದ ಎಲ್ಲಾ ಕಡೆಗಳಲ್ಲಿ ನೋಡುತ್ತಿದ್ದೇವೆ. ಅನೇಕ ಕಡೆಗಳಲ್ಲಿ ಗ್ಯಾಸ್ ಏಜೆನ್ಸಿಗಳ ಹೊರಗೆ ಖಾಲಿ ಸಿಲಿಂಡರ್ ಇಟ್ಟುಕೊಂಡು ಜನರು ಹೊಸ ಸಿಲಿಂಡರ್ ಗಾಗಿ ಕಾಯುತ್ತಿದ್ದಾರೆ. ಕಂಪನಿಗಳು ಎಲ್‌.ಪಿ.ಜಿ ಸಿಲಿಂಡರಗಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ ಎಲ್‌.ಪಿ.ಜಿ ಯನ್ನು ದೇಶೀಯ ಬಳಕೆಗೆ ನೀಡಲು ಇನ್ನೂ ಎಲ್‌.ಪಿ.ಜಿ ಸಿಲಿಂಡರ್ ಇಂಟರ್ ಬುಕ್ಕಿಂಗ್ ಅನ್ನು 21 ದಿನದಿಂದ 25 ದಿನಕ್ಕೆ ಏರಿಸಲಾಗಿದೆ.

ಈ ಮೂಲಕ ದಾಸ್ತಾನು ಕಾಳು ಸಂತೆ ಮಾರಾಟ ತಡೆಯಲು ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ. ಇಂತಹ ಸಂದರ್ಭದಲ್ಲಿ  ಗದಗ-ಬೆಟಗೇರಿ ಭಾಗದ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿ ಮತ್ತು ಹಲವು ಏಜೆನ್ಸಿಗಳು ಗ್ರಾಹಕರಿಗೆ ನೀಡಬೇಕಾದ ಎಲ್‌.ಪಿ.ಜಿ ಸಿಲಿಂಡರ್‌ಗಳನ್ನು ಕಾಳು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ತಮ್ಮ ಗೃಹ ಬಳಕೆ ಸಿಲಿಂಡರ್ ಗಳನ್ನು ಮೋಬೈಲ್ ಮೂಲಕ ಹಾಗೂ ಆನಲೈನ್ ಮೂಲಕ ಬುಕ್ಕ್‌ ಮಾಡುತ್ತಾರೆ. ಆದರೆ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿ ಗ್ರಾಹಕರ ಹೆಸರಿಗೆ ಬಂದಿರುವ ಸಿಲಿಂಡರ್‌ಗಳನ್ನು ಕಾಳು ಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವುದನ್ನು ಅನೇಕ ಬಾರಿ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರು ಸಹ ಅಧಿಕಾರಿಗಳು  ಕಣ್ಣಿದ್ದರು ಕುರಡರಂತೆ ವರತಿಸುತ್ತಿರುವುದು ಖಂಡನೀಯವಾಗಿದೆ.

ಇಡೀ ಭಾರತ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇದ್ದರು ಸಹ ಬೆಟಗೇರಿಯ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿಯಿಂದ ರಾಜಾರೋಷವಾಗಿ ಸಾರ್ವಜನಿಕವಾಗಿ ಗ್ರಾಹಕರನ್ನು ವಂಚಿಸಿ ಸಿಲಿಂಡರ್‌ಗಳನ್ನು ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಸಿಲಿಂಡರ್‌ಗೆ 400 ರಿಂದ 500 ವರೆಗೊ ಹೆಚ್ಚಯವರಿ ಹಣವನ್ನು ಪಡೆದುಕೊಂಡು ಸಿಲಿಂಡರಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬೆಟಗೇರಿಯ ಹಲವು ಭಾಗಗಳಲ್ಲಿ ಅನಧಿಕೈತವಾಗಿ ಸಿಲಿಂಡರ್‌ಗಳನ್ನು ಹೆಚ್ಚಿನ ಹಣವನ್ನು ಪಡೆದು ಕಾನೂನು ಬಾಹೀರವಾಗಿ ಗ್ಯಾಸ್ ತುಂಬಿಸುತ್ತಿರುವ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಮನೆ-ಮನೆಗೆ ಏಜೆನ್ಸಿಗಳ ಮೂಲಕ ಸಿಲಿಂಡರ್‌ಗಳನ್ನು ಪೊರೈಸುವ ಸಿಬ್ಬಂದಿಗಳು ಬುಕ್ಕ ಆಗಿರುವ ಗ್ರಾಹಕರಿಗೆ ವಂಚಿಸಿ ಯಾವುದೇ ಭಯ ಇಲ್ಲದೇ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕನಲ್ಲಿ ಮಾರಾಟ ಮಾಟುತ್ತಿರುವ ವಿರುಧ್ದ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಮಾತನಾಡಿ ನಗರದಲ್ಲಿ ಏಜೆನ್ಸಿಗಳಿಂದ ನಿರಂತರವಾಗಿ ಗ್ಯಾಸ್ ಮಾಫಿಯಾ ನಡೆಯುತ್ತಿದ್ದು ಇದರ ಹಿಂದೆ ಒಂದು ದೊಡ್ಡ ಜಾಲವೇ ಇದೆ ಎಂದು ನಮ್ಮಗೆ ಅನುಮಾನ ಬರುತ್ತಿದೆ.  ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ.

ತಮ್ಮ ಗ್ಯಾಸ್ ಏಕೆ ತಡವಾಗಿದೆ ಎಂದು ಗ್ರಾಹಕರು ವಿಚಾರಿಸಿದರೆ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದನೆ ನೀಡದೆ ಅವರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಗ್ರಾಹಕರು ತಮ್ಮ ಗ್ಯಾಸ್ ಬುಕ್ಕ ಮಾಡಿರುವ ಬಗ್ಗೆ ಹಾಗೂ ಗ್ಯಾಸ್ ವಿತರಿಸಲು ತಡವಾಗಿರುವ ಬಗ್ಗೆ ಇನ್ನು ಹಲವು ಸಮಸ್ಯೆಗಳ ಬಗ್ಗೆ ಕಚೇರಿಯಲ್ಲಿರುವ ಲ್ಯಾಂಡ್ ಲೈನ್ ಫೋನಿಗೆ ಕರೆ ಮಾಡಿದರೆ ಕಚೇರಿಯ ಸಿಬಂದಿಗಳು ಕರೆಯನ್ನು ಸ್ವಿಕರಿಸದೆ ಗ್ರಾಹಕರಿಗೆ ಸಾಕಷ್ಟು ತೊಂದರೆಗಳನ್ನು ನೀಡುತ್ತಿದ್ದಾರೆ. ನಗರದಲ್ಲಿ ಹಗಲು ದರೋಡೆಗೆ ನಿಂತಿರುವ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು ಕಂಪನಿಯ ನಿಗದಿತ ಬೆಲೆಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ

ಇಂತಹ ಏಜೆನ್ಸಿಗಳ ಮೇಲೆ ಕ್ರಮ ಕೈಗೊಂಡು ಏಜೆನ್ಸಿಯ ಪರವಾನಿಗೆ ರದ್ದು ಮಾಡಬೇಕೆಂದು ಆಗ್ರಹಿಸಿದರು. ಮಹಿಳಾ ಸಮಿತಿ ಅಧ್ಯಕ್ಷರಾದ ಪರವೀನಬಾನು ಹವಾಲ್ದಾರ ಮಾತನಾಡಿ ಅಡುಗೆ ಅನಿಲ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸುವುದರಿಂದ ನಿರಂತರ ಬೆಲೆ ಏರಿಕೆ ಮತ್ತು ಕುಗ್ಗುತ್ತಿರುವ ನೈಜ್ ಆದಾಯದಿಂದ ತತ್ತರಿಸುತ್ತಿರುವ ಮಧ್ಯಮ ವರ್ಗ ಮತ್ತು ದುಡಿಯುವ ಜನರ ಮೇಲೆ ಇನ್ನಷ್ಟು ಹೊರೆಗಳನ್ನು ಹೇರಿದಂತಾಗಿದೆ. ಗೃಹಬಳಕೆದಾರರಿಗೆ ರೂಪಾಯಿ 60 ರಷ್ಟು ಏರಿಕೆ ಮಾಡಲಾಗಿದೆ.. ಪಶ್ಚಿಮ ಏಷ್ಯಾದ ಸಂರ್ಘಷದಿಂದ ಅನಿಲ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. 

ಇಂಧನದ ಈ ಬೆಲೆ ಏರಿಕೆ ಅಡುಗೆ ಖರ್ಚನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿ ಈಗಾಗಲೇ ಕಡಿಮೆಯಾಗುತ್ತಿರುವ ಆದಾಯದ ಮಧ್ಯಮ ವರ್ಗ ಮತ್ತು ದುಡಿಯುವ ವರ್ಗದ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಕೊಡಲೇ ಜಿಲ್ಲಾಧಿಕಾರಿಗಳು ವಸ್ತ್ರದ ಭಾತರ ಗ್ಯಾಸ್ ಏಜೆನ್ಸಿ ಹಾಗೂ ಗ್ರಾಹಕರನ್ನು ವಂಚಿಸುತ್ತಿರುವ ಏಜೆನ್ಸಿಗಳ ಮೇಲೆ ಕ್ರಮ ಜರುಗಿಸಿ ಏಜೆನ್ಸಿಗಳ ಪರವಾನಿಗೆ ರದ್ದುಗೊಳಿಸಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ವಂಚಿಸುತ್ತಿರುವ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿಯ ಮಾಲಿಕನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು.

ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿ ಗ್ಯಾಸ್ ಏಜೆನ್ಸಿ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ  ಗ್ಯಾಸ್ ಏಜೆನ್ಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕ್ಕೆ ನೀಡಿದರು. ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವಿಕರಿಸಿ ಮಾತನಾಡಿ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಜನರನ್ನು ವಂಚಿಸುತ್ತಿರುವ ಗ್ಯಾಸ್ ಏಜೆನ್ಸಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಪರವೀನಬಾನು ಹವಾಲ್ದಾರ, ಪುಷ್ಪಾ ಬಿಜಾಪೂರ, ವಿಶಾಲಕ್ಷಿ ಹಿರೇಗೌಡ್ರ, ಮಕ್ತುಮಸಾಬ ಮುಲ್ಲಾನವರ, ಶಂಕ್ರ​‍್ಪ ರೋಣದ, ಆನಂದಪ್ಪ ಮೂಲಿಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.