ಧಾರವಾಡ 30: ಧಾರವಾಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅವರ ಅಧ್ಯಕ್ಷತೆಯಲ್ಲಿ ಮಹಾತ್ಮಗಾಂಧೀಯವರ ಹುತಾತ್ಮ ದಿನದ ಅಂಗವಾಗಿ ರಾಷ್ಟ್ರಪಿತನಿಗೆ ವಿಶೇಷ ಗೌರವ ನಮನ ಸಲ್ಲಿಸಲಾಯಿತು.
ಮಹಾತ್ಮಾಗಾಂಧೀಜಿಯವರು ರಾಷ್ಟ್ರದ ಸ್ವಾತಂತ್ರ್ಯ, ಕೋಮು ಸಾಮರಸ್ಯ, ಶಾಂತಿ, ಅಭಿವೃದ್ಧಿ, ಸ್ಥಿರತೆಗೆ ನೀಡಿದ ಕೊಡುಗೆ ಮತ್ತು ಅವರ ತ್ಯಾಗ ಬಲಿದಾನವನ್ನು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅವರು ಸ್ಮರಿಸಿದರು.
ಹುತಾತ್ಮ ದಿನದ ಅಂಗವಾಗಿ ಗಾಂಧೀಜಿವರ ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚಣೆ ನೆರವೇರಿಸಲಾಯಿತು, ಮೌನಾಚರಣೆ ನಂತರ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಸರ್ವಧರ್ಮ ಪ್ರಾರ್ಥನೆ, ಭಕ್ತಿಗೀತೆ, ಭಜನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರುಗಳಾದ ಗಂಗಾಧರ ಸಿ.ಎಂ., ಎಚ್.ಸಿ. ಶ್ಯಾಮಪ್ರಸಾದ, ಹೊಸಮನಿ ಸಿದ್ದಪ್ಪ ಎಚ್, ಸಾವಿತ್ರಿ ಎಸ್. ಕುಜ್ಜಿ, ಶ್ರೀಕಾಂತ ಎಸ್.ವ್ಹಿ., ಸಂಜಯ ಪಿ. ಗುಡಗುಡಿ, ಮಮತಾ ಡಿ., ಸುಜಾತಾ, ವಿಜಯಲಕ್ಷ್ಮಿ ಗಾನಾಪುರ, ಕುರಣಿಕಾಂತ ಧಾಕು, ಪರಿಮಳ ತುಬಾಕಿ ಹಾಗೂ ತರಬೇತಿ ನ್ಯಾಯಾಧೀಶರಾದ ಆಕರ್ಷ ಎಮ್., ಲತಾಶ್ರೀ ಬಿ.ವ್ಹಿ., ಶೃತಿಶ್ರೀ ಎಸ್., ಜಿಲ್ಲಾ ನ್ಯಾಯಾಲಯದ ಪ್ರಭಾರಿ ಮುಖ್ಯ ಆಡಳಿತಾಧಿಕಾರಿ ಎಸ್.ಜೆ. ಜಾಧವ, ಶಿರಸ್ತೇದಾರ ಎಂ.ಸಿ. ಹಿರೇಗೌಡರ, ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಸಿ.ಎಸ್. ಪಾಟೀಲ, ಹಿರಿಯ ಮಹಿಳಾ ನ್ಯಾಯವಾದಿ ಪ್ರಫುಲ್ಲಾ ನಾಯಕ, ನ್ಯಾಯವಾದಿ ಬಸನಗೌಡ ಎಸ್. ಪಾಟೀಲ, ಎಸ್.ಎಚ್. ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ನ್ಯಾಯವಾದಿಗಳು, ಸಿಬ್ಬಂದಿ ವರ್ಗ ಕಕ್ಷಿದಾರರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಹಿರಿಯ ನ್ಯಾಯಾಧೀಶ ಶ್ರೀಕಾಂತ ಎಸ್.ವ್ಹಿ. ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಧೀಶ ಸಂಜಯ ಗುಡಗುಡಿ ವಂದಿಸಿದರು.