ಗದಗ ಬೆಟಗೇರಿ ಅವಳಿ ನಗರದ ನೀರು ಪೂರೈಕೆ

Gadag Betageri twin city water supply

ಗದಗ ಬೆಟಗೇರಿ ಅವಳಿ ನಗರದ   ನೀರು ಪೂರೈಕೆ  

ಗದಗ 28 : ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ  ಮಾರ್ಚ 1 ರಂದು  ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. 

ಸ್ಥಳಗಳ ವಿವರ  ವಾರ್ಡ್‌ 2 - ವೆಲ್ಫೇರ, ಕುಷ್ಟಗಿ ಚಾಳ ಸ್ಲಾಬ ಮನೆ. ವಾರ್ಡ್‌ 11 - ಹಿರಾಣಿ ಕಾಲೋನಿ,ಕರಿಯಮ್ಮ ಕಲ್ಲು, ಗಣಪತಿ ಕಟ್ಟಿ, ಚರ್ಚ, ಗಾಣಿಗೇರ ಭವನ. ವಾರ್ಡ್‌ 22 - ಗಂಗೆಮಡಿ, ದೊಡ್ಡ ಮಸೂತಿ ಪೂರ್ತಿ ಭಾಗಗಳು. ವಾರ್ಡ್‌ 34 - ಕರಜೋಳ್ಳಿ ಮಠ, ಸೇವಾಲಾಲ ನಗರ, ಗರಗದವರ ಲೈನ, ಮುಂಡರಗಿ ಲೇಓಟ, ಸ್ಕೂಲ ಭಾಗ. ವಾರ್ಡ್‌ 35 - ಬಾಪೂಜಿನಗರ, ಕೆ ಇ ಬಿ ಲೇಓಟ. ವಾರ್ಡ್‌ 8, 9, 10 - ಹೆಲ್ತ ಕ್ಯಾಂಪ, ಕುರಹಟ್ಟಿ ಪೇಟೆ, ಕಬಾಡಿ ರಸ್ತೆ, ತೆಗ್ಗಿನ ಲಾಟ, ಬೋರೆಗಾರ ಓಣಿ ಉಳಿದ ಕೆಲವು ಭಾಗಗಳು. ವಾರ್ಡ್‌ 21, 23 - ಆರೋಗೇರಿ, ಕಗನಳ್ಳಿ, ಹೆಬ್ಸೂರ, ಹೊನ್ನೇತಮ್ಮನ ಗುಡಿ 2 ಭಾಗಗಳು, ಸೋಮನಗೌಡರ ಲೈನ, ಕಮತರ ಲೈನ, ಬನ್ನಿ ಕಾಳಮ್ಮನಗುಡಿ, ಲಕ್ಕುಂಡಿಯವರ ಲೈನ ಮಾನ್ವಿಯವರ ಲೈನ, ಗೆಳೆಯರ  ಬಳಗ ಗಣಪತಿ ಗುಡಿ ಉಳಿದ ಕೆಲವು ಭಾಗಗಳು. ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿರುವ ನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ಹಾಗೂ ತಮಗೆ ನೀರು ಸಾಕಾದಾಗ ತಮ್ಮ ತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆ ತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನ ಕರ ಪಾವತಿಸುವಲ್ಲಿ ತಾವು ವಿಳಂಬ ಮಾಡದೇ ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ತಿಳಿಸಿರುತ್ತಾರೆ. ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿ ತಮಗೆ ದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದು  ಎಂದು  ಗದಗ ಬೆಟಗೇರಿ ನಗರಸಭೆ  ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.