ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ
ಮಹಾಲಿಂಗಪುರ 28: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಬುಧವಾರ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ 140 ವಿದ್ಯಾರ್ಥಿಗಳು 70 ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ರಚಿಸಿ ಪ್ರದರ್ಶಿಸಿ ಗಮನ ಸೆಳೆದರು.
ಚಂದ್ರಯಾನ 3, ರಾಕೆಟ್, ಮಾನವನ ಉಸಿರಾಟ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಶ್ವಾಸಕೋಶ, ಮಾನವ ವಿಸರ್ಜನೆ, ಜಲಚಕ್ರ, ಮಂಕಿ ಬಾಂಬ್, ಸಾಂದ್ರತೆ, ಸೂರ್ಯ ಗ್ರಹಣ, ಹೈಡ್ರಾಲಿಕ್ ಪ್ರೆಸ್ ಯಂತ್ರ, ರಾಸಾಯನಿಕ ಪತ್ತೆ ಪ್ರಕ್ರಿಯೆ, ಹನೀನೀರಾವರಿ, ಸೌರವ್ಯೂಹ, ದ್ಯುತಿಸಂಶ್ಲೇಷಣೆ, ನೀರಿನ ಬೆಂಕಿ, ರೋಬೋಟ್, ಎಟಿಎಂ, ಪೆರಿಸ್ಕೋಪ್, ಹಗಲು-ರಾತ್ರಿ ಮುಂತಾದ ಮಾದರಿಗಳನ್ನು ರಚಿಸಿದ್ದರು.
ಶಿಕ್ಷಕಿಯರಾದ ಶಮಾ ಗಲಗಲಿ, ಸುಧಾ ಕೊಂಗವಾಡ, ಪ್ರೇಮಾ ಕರಜಗಿ, ವೀಣಾ ಹಡಪದ, ಮುತ್ತು ಅಂಗಡಿ, ರೂಪಾ ಜಾಡಗೌಡ, ಬನಶಂಕರಿ ಕೆ.ಎಂ.,ದೀಪಾ ಬಡಿಗೇರ ಮಾರ್ಗದರ್ಶನ ಮಾಡಿದ್ದರು.
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಪತ್ರಕರ್ತ ಜಯರಾಮ ಶೆಟ್ಟಿ ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಕೊಂಡಾಡಿದರು.
ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ, ನಿರ್ದೇಶಕರಾದ ಈಶ್ವರ ಮುರಗೋಡ, ರಾಜು ಘಟ್ಟೆಪ್ಪನವರ, ಮುಖ್ಯೋಪಾಧ್ಯಾಯರಾದ ಎಸ್.ಜಿ.ಕೌಜಲಗಿ, ನಾರನಗೌಡ ಉತ್ತಂಗಿ ಇದ್ದರು.