ಗದಗ: ದಕ್ಷತೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ನಿರ್ದೇಶನ

ಗದಗ 08:  ಗದಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕುರಿತಂತೆ  ಮತದಾನ ಎಪ್ರಿಲ್ 23 ರಂದು ನಡೆಯಲಿದ್ದು ಪ್ರತಿ ಮತಗಟ್ಟೆಯ ಅಧ್ಯಕ್ಷಾಧಿಕಾರಿ ಹಾಗೂ ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ   ದಕ್ಷತೆ , ಸಂಯಮ ಹಾಗೂ ಶಾಂತ ರೀತಿಯಿಂದ ಮತದಾನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 255 ಮತಗಟ್ಟೆ  ಅಧ್ಯಕ್ಷಾಧಿಕಾರಿ ಹಾಗೂ 308 ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ   ಮತದಾನ ಪ್ರಕ್ರಿಯೆ ಕುರಿತಾದ ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

       ಮತದಾನ ಪ್ರಕ್ರಿಯೆ ಕುರಿತಂತೆ  ಮಸ್ಟರಿಂಗ್  ಕೇಂದ್ರದಿಂದ ಮತಗಟ್ಟೆಗೆ ತೆಗೆದುಕೊಂಡು ಹೋಗುವ ಮತದಾನ ಪರಿಕರಗಳ ಕುರಿತು ಚುನಾವಣಾ ಆಯೋಗದ ನಿದರ್ೇಶನದಂತೆ ಚಾಚೂ ತಪ್ಪದೇ ಜಾಗೃತೆ ವಹಿಸಿ ಪರೀಕ್ಷಿಸಿಕೊಂಡು ನಿಯಮಿತ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ಸೂಚಿತ ಮಾರ್ಗದಲ್ಲಿ ತಲುಪಬೇಕು.  ವೇಳೆಗೆ ಸರಿಯಾಗಿ ಮತದಾನ ಮುಂಚಿನ ಎಲ್ಲ ಪ್ರಕ್ರಿಯೆಗಳು ಮುಗಿಸಿ ಚುನಾವಣಾ ಆಯೋಗದ ನಿದರ್ೇಶನ ರೀತ್ಯ ಮತದಾನ ಪ್ರಕ್ರಿಯೆ ಜರುಗಿಸಬೇಕು.  ಮತಗಟ್ಟೆಯ ಅಧ್ಯಕ್ಷಾಧಿಕಾರಿ ಹಾಗೂ ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ   ನಿಗದಿತ ಅವಧಿಯವರೆಗೂ ಮತದಾನ ಪ್ರಕ್ರಿಯೆ ಜರುಗಿಸಿ ನಿಯಮಗಳನ್ವಯ ಎಲ್ಲ ಪರಿಕರಗಳನ್ನು ಜಾಗೃತೆಯಿಂದ ಸರಿಯಾಗಿ  ಸುರಕ್ಷಿತವಾಗಿ ಡಿಮಸ್ಟರಿಂಗ್ ಕೇಂದ್ರಕ್ಕೆ ತಂದು ಒಪ್ಪಿಸುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು  ಜಿಲ್ಲಾಧಿಕಾರಿಗಳು ತಿಳಿಸಿದರು.

ಮತಗಟ್ಟೆಯ ಅಧ್ಯಕ್ಷಾಧಿಕಾರಿ ಹಾಗೂ ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ   ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು  ಮಾಸ್ಟರ್ ಟ್ರೇನರ್ ಹಾಗೂ ಸೆಕ್ಟರ್ ಅಧಿಕಾರಿಗಳು ತರಬೇತಿ ನೀಡಿದರು.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರಾಮಕೃಷ್ಣ ಪಡಗಣ್ಣವರ , ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರವಿ ಕರಿಲಿಂಗಣ್ಣವರ, ಶಿರಹಟ್ಟಿ ತಹಶೀಲ್ದಾರ ಆಶಪ್ಪ, ಮುಂಡರಗಿ ತಹಶೀಲ್ದಾರ ವೆಂಕಟೇಶ ನಾಯಕ ಉಪಸ್ಥಿತರಿದ್ದರು.