ವಿ.ಕ ದಂತ ಮಹಾವಿದ್ಯಾಲಯದಿಂದ ಬಾಯಿ ಆರೋಗ್ಯ ದಿನಾಚರಣೆ

ವಿಶ್ವ ಬಾಯಿ ಆರೋಗ್ಯ ದಿನದ ಸಮಾರಂಭವನ್ನು ಪ್ರಾಂಶುಪಾಲ ಡಾ.ಅಲ್ಕಾ ಕಾಳೆ, ಹಾಗು ಕೆ.ಎಲ್.ಇ ಸಂಸ್ಥೆಯ ಆಜೀವ ಸದಸ್ಯರಾದ ಡಾ.



ಬೆಳಗಾವಿ 09: ಬಾಯಿ ಆರೊಗ್ಯ ದೇಹದ ಆರೋಗ್ಯದ ಕೇಂದ್ರ ಬಿಂದು.  ಸರಿಯಾದ  ಕ್ರಮದಲ್ಲಿ ಆಹಾರವನ್ನು ಸೇವಿಸಿದಲ್ಲಿ ದೇಹದ ಆರೋಗ್ಯ ಯಾವತ್ತೂ ಚೆನ್ನಾಗಿರುತ್ತದೆ. ಆರೋಗ್ಯವೆ ಭಾಗ್ಯ. ಆದ್ದರಿಂದ ಬಾಯಿ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಳ್ಳಿ ಎಂದು ಪ್ರಾಂಶುಪಾಲ ಡಾ.ಅಲ್ಕಾ ಕಾಳೆ ಹೇಳಿದರು. 

ಕೆ ಎಲ್ ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವಸಡುರೋಗಶಾಸ್ತ್ರ ವಿಭಾಗದಿಂದ  ಭಾರತೀಯ ವಸಡುರೋಗ ಶಾಸ್ತ್ರ ಸಂಸ್ಥಾಪಕ ಡಾ.ಶಂಕವಾಲ್ಕರ್  ಹಾಗೂ ಕೆ ಎಲ್ ಇ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಕೆ ಎಲ್ ಇ ಸಂಸ್ಥೆಯ ಕಾಯರ್ಾಧ್ಯಕ್ಷ ಡಾ.ಪ್ರಭಾಕರ ಕೋರೆ ಇವರುಗಳ ಜನ್ಮ ದಿನದ ನಿಮಿತ್ತ ವಿದ್ಯಾಲಯದ ವಸಡು ರೋಗ ವಿಭಾಗದಲ್ಲಿ ದಿ. 8ರಂದು ಆಚರಿಸಲಾದ ವಿಶ್ವ ಬಾಯಿ ಆರೋಗ್ಯ ದಿನದ ಸಮಾರಂಭಕ್ಕೆ  ವಿಶೇಷ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಅವರು ಇಂದು ಬಹಳಷ್ಟು ಜನತೆ ಮಾರಕ ದುಶ್ಚಟಗಳಿಗೆ ಮಾರುಹೋಗಿ ಮಾರಣಾಂತಿಕ ರೋಗಗಳಿಗೆ ಆಹ್ವಾನ ನೀಡಿ ಜೀವಕಳೆದುಕೊಳ್ಳುತ್ತಿದಾರೆ ಎಂದು ಕಾಳೆ ಕಳವಳ ವ್ಯಕ್ತಪಡಿಸಿದರು. 

ಕೆ.ಎಲ್.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಲ್ಕಾ ಕಾಳೆ, ಹಾಗೂ ಕೆ.ಎಲ್.ಇ ಸಂಸ್ಥೆಯ ಆಜೀವ ಸದಸ್ಯ ಡಾ.ಪ್ರೀತಿ ಕೋರೆ ದೊಡವಾಡ ಇವರುಗಳು ಬಾಯಿ ಆರೋಗ್ಯ ತಪಾಸಣೆಗಾಗಿ ಬಂದಿದ್ದ ಜನರ ಜೊತೆಗೊಡಿ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮುಖಾಂತರ ಉಧ್ಘಾಟಿಸಿದರು. 

  ಪ್ರಾಂರಂಭದಲ್ಲಿ ವಿಭಾಗದ ಮುಖ್ಯಸ್ಥ ಡಾ.ವಿನಯ ಕುಂಭೋಜ್ಕರ್ ಸ್ವಾಗತಿಸಿದರು. 


ಡಾ.ಮೇಘ ಮೇಹ್ತಾ  ಭಾರತೀಯ ವಸಡುರೋಗ ಶಾಸ್ತ್ರ ಸಂಸ್ಥಾಪಕ ಡಾ.ಶಂಕವಾಲ್ಕರ್  ಕುರಿತು ಪರಿಚಯಿಸಿದರು. ಡಾ.ಶೃತಿ ಕವರ್ೆಕರ್ ವಂದಿಸಿದರು.

ಉಪ ಪ್ರಾಂಶುಪಾಲ ಡಾ.ಅಟಂಜನ ಬಾಗೇವಾಡಿ, ಡೀನ್ ಅಫ್ ಫೆಕಲ್ಟಿ ಡಾ.ಕೆ.ಎಂ.ಕಡಲೊಸ್ಕರ್, ವಸಡುರೋಗ ವಿಭಾಗದ ಮುಖ್ಯಸ್ಥ ಡಾ.ವಿನಯ್ ಕುಂಭೋಜ್ಕರ್, ಡಾ.ರೇಣಿಕ ಮೆಟಗುಡ್, ಡಾ.ಶೈಲಾ ಕೊಠಿವಾಲೆ, ಡಾ.ಅಭಿಷೇಕ್ ಡಾ.ಮಿನಾಕ, ಡಾ.ನೀಲಮ್ಮ, ಡಾ.ಸ್ವಾತಿ, ಮಹಾಂತೇಶ ಇಂಚಲ ಉಪಸ್ಥಿತರಿದ್ದರು.                                             


ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಮತ್ತು ಜನ್ಮ ದಿನದ ನಿಮಿತ್ತ ಕೆ ಎಲ್ ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವಸಡುರೋಗಶಾಸ್ತ್ರ ವಿಭಾಗದಲ್ಲಿ ಬಾಯಿ ಆರೋಗ್ಯದ ಜಾಗೃತಿ ಮೂಡಿಸುವ ಸಲುವಾಗಿ ಅಗಸ್ಟ್ ತಿಂಗಳು ಪೂರ್ಣ ಸಾರ್ವಜನಿಕರಿಗೆ ಉಚಿತವಾಗಿ ಬಾಯಿಸ್ವಚ್ಛತೆ ಚಿಕಿತ್ಸೆಯನ್ನು ನೀಡಲಾಗುವುದಾಗಿ ಪ್ರಾಂಶುಪಾಲ ಡಾ.ಅಲ್ಕಾ ಕಾಳೆ ಹಾಗೂ ವಿಭಾಗದ ಮುಖ್ಯಸ್ಥ ಡಾ.ವಿನಯ್ ಕುಂಭೋಜ್ಕರ್ ತಿಳಿಸಿದ್ದಾರೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಲು ಕೋರಿದ್ದಾರೆ.