ಬಳ್ಳಾರಿ 25: ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ (ರಿ), ಬಂಡ್ರಾಳ್, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸಿರುಗುಪ್ಪ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾರಾವಿ ಹಾಗೂ ವೈದೇಹಿ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶಿವರುದ್ರತಾತ ನವರು ಮುತ್ತಿನಪೆಂಡೆ ಮಠ, ಹಚ್ಚೊಳ್ಳಿ ಇವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಎಸ್.ಸೋಮಲಿಂಗಪ್ಪ ನವರು ಮಾಜಿ ಶಾಸಕರು, ಸಿರುಗುಪ್ಪ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಬೆಂಗಳೂರಿನಿಂದ ವೈದ್ಯರನ್ನು ಕರೆಯಿಸಿ ಇಂತಹ ಶಿಬಿರವನ್ನು ಏರಿ್ಡಸಿರುವುದು ಒಳ್ಳೆಯ ಕೆಲಸ ಇದರ ಉಪಯೋಗವನ್ನು ಎಲ್ಲಾರು ಪಡೆದುಕೊಳ್ಳಬೇಕು ಎಂದು ತಿಳಿಸದರು.
ಕಾರ್ಯಕ್ರಮದಲ್ಲಿ ವೈದೇಹಿ ಆಸ್ಪತ್ರೆ, ಬೆಂಗಳೂರು ಇದರ ಅಥೋಪಿಡಿಕ್ ಮುಖ್ಯಸ್ಥರಾದ ಶ್ರೀ ಡಾಕ್ಟರ್ ವರಣ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಅವರು ಮಾತನಾಡಿ ಇವತ್ತು 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಒಂದಲ್ಲ ಒಂದು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು, ಮೊಣಕಾಲು ಸಂಬಂಧಿಸಿದ ಖಾಯಿಲೆಗಳು, ಕ್ಯಾನ್ಸ್‌ರ್ ಸಂಬಂಧಿಸಿದ ಖಾಯಿಲೆಗಳು ಹೆಚ್ಚಾಗಿವೆ. ನೀವು ಯಶಸ್ವಿ ಕಾರ್ಡ್ ಹೊಂದಿದ್ದರೆ ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ದೊರೆಯುತ್ತವೆ. ಆದ್ದರಿಂದ ಗ್ರಾಮೀಣ ಭಾಗದ ರೈತರು ಯಶಸ್ವಿ ಕಾರ್ಡ್‌ನ ಸದಸ್ಯರಾಗಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ತಮ್ಮ ಕೆಲಸ ಕಾರ್ಯಗಳ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡ್ರಾಳ್ ಮೃತ್ಯುಂಜಯಸ್ವಾಮಿ ವಹಿಸಿದರು, ಮುಖ್ಯ ಅತಿಥಿಗಳಾಗಿ ಡಾಕ್ಟರ್ ದಮ್ಮೂರು ಬಸವರಾಜ, ಟಿ.ಹೆಚ್.ಓ. ಸಿರುಗುಪ್ಪ, ಶ್ರೀ ಅನಿಲ್‌ಕುಮಾರ್ ಮೋಕಾ, ಬಿ.ಜೆ.ಪಿ.ಜಿಲ್ಲಾಧ್ಯಕ್ಷರು, ಶ್ರೀರಾಮುಲು, ಹಿಂದೂ ಜಾಗರಣ ವೇದಿಕೆ ಮುಂತಾದವರು ಭಾಗವಹಿಸಿದರು.
ಆರೋಗ್ಯ ಶಿಬಿರದಲ್ಲಿ ಬಂಡ್ರಾಳ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿದರು ಶಿಬಿರಾರ್ಥಿಗಳಿಗೆ ಉಚಿತ ಓಷಧಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 4.00ಗಂಟೆಗೆ ಬೃಹತ್ ಸಸ್ಯಹಾರ ಜಾಥಾ ನಡೆಯಿತು. ಇದರ ಚಾಲನೆಯನ್ನು ಶ್ರೀ ಬಸವ ಭೂಷಣಸ್ವಾಮಿಗಳು, ಸಿರುಗುಪ್ಪ ನೇರವೇರಿಸಿದರು, ಪೂಜ್ಯರು ಮಾತನಾಡಿ ಪ್ರತಿಯೊಬ್ಬರು ಸಸ್ಯಹಾರಿಗಳಾಗಬೇಕು, ಸಸ್ಯಹಾರ ಆರೋಗ್ಯಕ್ಕೆ ಒಳ್ಳೆಯದು ಪ್ರತಿಯೊಂದು ಪ್ರಾಣಿಯು ನಮ್ಮಂತೆ ಬದುಕುವ ಹಕ್ಕಿದೆ. ಅವುಗಳಿಗೆ ಹಿಂಸೆ ಮಾಡದೆ ನಮ್ಮಂತೆ ಪ್ರೀತಿಸಬೇಕು ಎಂದರು.
ಜಾಥಾದಲ್ಲಿ ವಿಶೇಷ ಅತಿಥಿಗಳಾಗಿ ಹಂಪಣ್ಣ, ಗೀತಾ, ಮಂಜುನಾಥ ಮತ್ತು ಹನುಂತಯ್ಯಶೆಟ್ಟಿ ಹಿರಿಯ ಧ್ಯಾನಿಗಳು ಹಾಗೂ ಬಳ್ಳಾರಿ-ಸಿರುಗುಪ್ಪ, ಶ್ರೀಧರಗಡ್ಡೆ, ಸಿರಿವಾರ, ಸಂಗನಕಲ್ಲು, ಸೋಮಸಮುದ್ರ, ಡಿ.ಹಿರೇಹಾಳ್ ಗ್ರಾಮಗಳ ನೂರಾರು ಜನ ಧ್ಯಾನಿಗಳು ಭಾಗವಹಿಸಿದರು. ಬಂಡ್ರಾಳ್ ಗ್ರಾಮದ ಗ್ರಾಮದ ತುಂಬೆಲ್ಲ ಡೋಳ್ಳು, ಮೇಳದೊಂದಿಗೆ ಜಾಥಾ ಯಶಸ್ವಿಯಾಗಿ ನಡೆಯಿತು.