ವಿಶ್ವಗುರು ಬಸವಣ್ಣನವರು ಹಾಗೂ ಶರಣೆ ಅಕ್ಕಮಹಾದೇವಿ ಕುರಿತು ಕೀಳು ಮಟ್ಟದ ಭಾಷೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಸಾರ್ವಜನಿಕವಾಗಿ ನೇಣುಗಂಬಕ್ಕೆ ಏರಿಸಲು ಆಗ್ರಹ
Demand to publicly hang the person who circulated derogatory language about Vishwaguru Basavanna an
ವಿಜಯಪುರ 12: ವಿಶ್ವಗುರು ಬಸವಣ್ಣನವರು ಹಾಗೂ ಶರಣೆ ಅಕ್ಕಮಹಾದೇವಿ ಕುರಿತು ಕೀಳು ಮಟ್ಟದ ಭಾಷೆಯಿಂದ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ರಮಾಕಾಂತ ಎಂ. ಎಂಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ನೇಣುಗಂಬಕ್ಕೆ ಏರಿಸಲು ಆಗ್ರಹಿಸಿ ಜಿಲ್ಲೆಯ ಬಸವಾಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಹಾಗೂ ಬಸವ ವಂಶಜರಾದ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಓದ್ರಾಮ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಗುರು ಬಸವಣ್ಣನವರ ವಂಶಸ್ಥರಾದ ಅರವಿಂದ ಕುಲಕರ್ಣಿ ಹಾಗೂ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆಯ ಕನಸು ಕಂಡ ಕ್ರಾಂತಿಕಾರಿ ಮನಸ್ಸುಳ್ಳ 12ನೇ ಶತಮಾನದ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ಹಾಗೂ ಶರಣೆ ವೈರಾಗ್ಯ ನಿಧಿ ಅಕ್ಕಮಹಾದೇವಿ ಕುರಿತು ಇತ್ತೀಚೆಗೆ ಫೇಸ್ಬುಕ್ನಲ್ಲಿ ರಮಾಕಾಂತ ಎಂ. ಎಂಬ ವ್ಯಕ್ತಿ ಕೀಳುಮಟ್ಟದ ಅಶ್ಲೀಲ ಭಾಷೆಯಿಂದ ಬರೆದು ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದನ್ನು ಗೀತಾ ಎಂ. ಹಿರೋಳಿ ಎಂಬ ಮಹಿಳೆ ಫೇಸ್ಬುಕ್ ನೋಡಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಬರೆದ ಭಾಷೆ ಅತಿ ಕೀಳು ಮಟ್ಟದಿಂದ ಅಶ್ಲೀಲ ಪದ ಉಪಯೋಗಿಸಿ ಬರೆದಿದ್ದು ಅದನ್ನು ಗಮನಿಸಿದರೆ ಎಂಥವರಿಗಾದರೂ ಕೂಡ ದಿಗ್ಬ್ರಮೆಯಾಗುತ್ತದೆ. ಬಹಳ ಅವಾಚ್ಯ ಶಬ್ದಗಳಿಂದ ಬರೆದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ನಾಡಿನ ಬಸವಾಭಿಮಾನಿಗಳಿಗೆ ತುಂಬಾ ನೋವಾಗಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾನತೆಗಾಗಿ ಹೋರಾಡಿ ಜಾತಿಯನ್ನು ಹೊಡೆದೋಡಿಸಿದವರು. “ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದವರು”. ದೀನ, ದಲಿತರನ್ನು ಶೋಷಿತ ವರ್ಗದವರನ್ನು ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಿದವರು ಬಸವಣ್ಣನವರು. ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ.. ಇ
ವ ನಮ್ಮವ ಇವ ನಮ್ಮವ... ಇವ ನಮ್ಮವ.. ಎಂದಿನಿಸಯ್ಯ.. ಕೂಡಲ ಸಂಗಮ ದೇವ ನಮ್ಮ ಮನೆಯ ಮಗನೆಂದೆನಿಸೆಯ್ಯಾ..! ಎಂದು ಎಲ್ಲರನ್ನು ಅಪ್ಪಿ ಒಪ್ಪಿಕೊಂಡವರು. ಅದರಂತೆ ಅಕ್ಕ ಮಹಾದೇವಿಯವರಿಗೂ ಕೂಡ ಅಸಹ್ಯಕರವಾದ ಪದಗಳನ್ನು ಬಳಸಿ ಶರಣ ಶರಣೆಯರಿಗೆ ಕಳಂಕ ತರುವ, ಮನಸ್ಥಿತಿಯಿಂದ ಇಂತಹ ಸಮಾಜ ಘಾತುಕ ಕೆಲಸಕ್ಕೆ ಕೈ ಹಾಕಿದ್ದಾನೆ. ರಮಾಕಾಂತ ಎಂ. ಎಂಬ ಹೆಸರಿನ ಫೇಸ್ಬುಕ್ ಬಳಕೆದಾರನು ಸೋಸಿಯಲ್ ಮಿಡಿಯಾವನ್ನು ದುರುಪಯೋಗ ಪಡಿಸಿಕೊಂಡು ಒಂದು ವರ್ಗದ ಮತ್ತು ಜನಾಂಗದ ಧರ್ಮವನ್ನು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಅಶ್ಲೀಲ ಪದಗಳನ್ನು ಬಳಸಿದ್ದಾನೆ.
ಆದ್ದರಿಂದ ಇವನನ್ನು ಕೂಡಲೇ ಬಂಧಿಸಿ ಸಾರ್ವಜನಿಕರ ಸುಪರ್ದಿಗೆ ವಹಿಸಬೇಕು ಇಲ್ಲವೇ ಸಾರ್ವಜನಿಕವಾಗಿ ಅವನನ್ನು ನೇಣುಗಂಬಕ್ಕೆ ಏರಿಸಬೇಕು. ಇದೇ ರೀತಿ ಸಮಾಜದ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೂ ಮುಂದೆ ಮಾಡಬಾರದು. ಯಾವುದೇ ಶರಣ ಶರಣೆಯರಿಗೂ ಇಂತಹ ಅವಹೇಳನಕಾರಿ ಅಶ್ಲೀಲಪದಗಳನ್ನು ಬಳಸದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಈ ಕುರಿತು ಬಸವನ ಬಾಗೇವಾಡಿ ಪೊಲಿಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಫ್ಐಆರ್ ಕೂಡ ಮಾಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ತನಿಖೆ ಕೈಗೊಂಡು ಆರೋಪಿಯನ್ನು ತಕ್ಷಣದಿಂದ ಬಂಧಿಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಬಸನಗೌಡ ಹರನಾಳ, ಪ್ರಭುಗೌಡ ಪಾಟೀಲ, ಭೋಗೇಶ ಸೋಲಾಪುರ, ಶಿವಾನಂದ ಬಿರಾದಾರ, ಶಿವಪ್ಪ ಮಾಳಗೊಂಡ, ಅಪ್ಪಾಸಾಹೇಬ ಶೇನಖೇಡ, ಅಡಿವೆಪ್ಪ ಸಾಲಗಲ್ಲ, ಚಂದ್ರಶೇಖರ ಘಂಟೆಪ್ಪಗೋಳ, ಮಹಾದೇವ ಬನಸೋಡೆ, ಕಿರಣ ಮೇಲಿನಕೇರಿ, ಎನ್.ಕೆ.ಕುಂಬಾರ, ಶ್ರೀನಿವಾಸ ರಾಜಗೋಪಾಲ ಶಹಾಪೂರ, ಮಲ್ಲಿಕಾರ್ಜುನ ಬಟಗಿ, ಶಶಿಕಲಾ ಕೊಟಗಿ, ವಿದ್ಯಾರಾಣಿ ತುಂಗಳ, ಸವಿತಾ ವಗ್ಗರ, ಸಂಗೀತಾ ಪೂಜಾರಿ, ರಾಜೇಶ್ವರಿ ಚೋಳಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 