ಹೋಳಿ ಹುಣ್ಣಿಮೆ, ರಮ್ಜಾನ್ ಹಬ್ಬದ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪೆರೆಡ್

Rowdy sheeters parade at local police station as a precautionary measure for Holi, Ramzan

ಹೋಳಿ ಹುಣ್ಣಿಮೆ, ರಮ್ಜಾನ್ ಹಬ್ಬದ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪೆರೆಡ್  

ಮಹಾಲಿಂಗಪುರ, 06: ರಾಷ್ಟ್ರೀಯ ಸಾರ್ವತ್ರಿಕ ಹೋಳಿ ಹಬ್ಬ ಮತ್ತು ಮುಸಲ್ಮಾನರ ಪವಿತ್ರ ರಮ್ಜಾನ್ ಹಬ್ಬದ ಸಲುವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆ ಆವರಣದಲ್ಲಿ ಈಗಾಗಲೇ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಪೆರೆಡ್ ನಡೆಯಿತು. ಈ ಸಂದರ್ಭದಲ್ಲಿ ಮಹಾಲಿಂಗಪುರ ಪೋಲಿಸ್ ಠಾಣೆಯ ಉಪನೀರೀಕ್ಷಕರಾದ ಕಿರಣ ಸತ್ತಿಗೇರಿ ಕ್ರಮವಾಗಿ ರೌಡಿ ಶೀಟರ್ ಗಳಿಗೆ ಪಾಠ ಮಾಡುತ್ತ, ಕಾನೂನಿನ ಅನ್ವಯ ಊರಿನಲ್ಲಿ ಸಣ್ಣ ತಪ್ಪುಗಳು ನಡೆದರೂ ಅದಕ್ಕೆ ಮೊದಲು ನಿಮ್ಮಿಂದಲೇ ವಿಚಾರಣೆ ಆರಂಭ. ಸಮಾಜದಲ್ಲಿ ಮತ್ತೊಮ್ಮೆ ತಮ್ಮಿಂದ ಅಪರಾಧ ಪ್ರಕರಣಗಳು ನಡೆಯದಂತೆ ತಾವು ಜಾಗೂರುಕತೆ ವಹಿಸಬೇಕು.  ನಿಮ್ಮನ್ನು ಕೆಲವು ವರ್ಗದ ಕ್ರಿಮಿನಲ್ ಗಳು ಉಪಯೋಗಿಸಿ ತಮ್ಮ ಬೇಳೆ ಬೇಯಿಸಿಕ್ಕೊಳ್ಳುವ ತವಕದಲ್ಲಿರುತ್ತಾರೆ ಇದಕ್ಕೆ ಆಸ್ಪದ ನೀಡಬೇಡಿ.ಅವರಿಂದ ದೂರವಿದ್ದು ಸಮಾಜದಲ್ಲಿ ಸನ್ನಡತೆಯ ವ್ಯಕ್ತಿಗಳಾಗಿ ನಿಮ್ಮ ಪರಿವಾರದ ನೆಮ್ಮದಿಗಾಗಿ ಬದುಕಿ ಎಂದು ರೌಡಿ ಶೀಟರ್ ಗಳಿಗೆ ಕಳಕಳಿಯ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪಿಎಐ  ಕಿರಣ್ ಸತ್ತಿಗೇರಿ ಅಪರಾಧ ವಿಭಾಗ ಪಿಎಸ್‌ಐ ಮಧು ಎಲ್ ಸಹಕಾರ ನೀಡಿದರು. ಸಿಬ್ಬಂದಿ ಜನರಾದ ವಾಯ್ ವಾಯ್‌. ಗಚ್ಚನ್ನವರ, ಬಿ ಜಿ.ದೇಸಾಯಿ ವಿ ಎಸ್ ಅಜ್ಜನಗೌಡರ ಕೃಷ್ಣ ಲಮಾಣಿ ಮತ್ತು ಎ ಎಂ. ಜಮಖಂಡಿ ಇದ್ದರು.