ರಾಜಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ವೈಯಕ್ತಿಕ ಬದುಕನ್ನ ಬಿಟ್ಟು ಸಾಮಾಜಿಕ ಸೇವೆ ಮಾಡುವ ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ

F.S. Siddana Gowda, a lawyer who leaves his personal life behind and does social service while rema

ರಾಜಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ವೈಯಕ್ತಿಕ ಬದುಕನ್ನ ಬಿಟ್ಟು ಸಾಮಾಜಿಕ ಸೇವೆ ಮಾಡುವ ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ 

ಬೆಳಗಾವಿ  6 : ರಾಜಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ವೈಯಕ್ತಿಕ ಬದುಕನ್ನ ಬಿಟ್ಟು ಸಾಮಾಜಿಕ ಸೇವೆ ಮಾಡುವ ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ ನೈಋತ್ಯ ರೈಲ್ವೆ ವಿಭಾಗದ ಡಿ.ಆರ್‌.ಯು.ಸಿ.ಸಿ ಸ್ಥಾನ ದೊರೆತಿರುವದು ಸಂದ ಗೌರವ ಎಂದು ಹಿರಿಯ ನ್ಯಾಯವಾದಿ ಎಮ್‌.ಎಮ್‌. ಸೋಪಿನ ಹೇಳಿದರು.ಪಟ್ಟಣದ ನ್ಯಾಯವಾದಿಗಳ ಕಛೇರಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ ಬೈಲಹೊಂಗಲ ನ್ಯಾಯವಾದಿಗಳ ಸಂಘದ ಸದಸ್ಯರಾಗಿ ರಾಜಕೀಯವಾಗಿ ಮುಂದೆ ಬಂದಿರುವ ಅನೇಕ ನಿದರ್ಶನಗಳಿದ್ದು ಇನ್ನು ಹೆಚ್ಚಿನ ಸ್ಥಾನಕ್ಕೆ ನಮ್ಮ ವಕೀಲರು ಹೋಗಲಿ. ಯುವ ನ್ಯಾಯವಾದಿಗಳಿಗೆ ಸ್ಪೂರ್ತಿಯಾಗಿರುವ ಸಿದ್ದನಗೌಡರ ಸೇವೆ ಸ್ಮರಣಿಯವಾಗಿದೆ ಎಂದರು.ನ್ಯಾಯವಾದಿ ಎಸ್‌.ಎಮ್‌.ಸಿದ್ದಮನಿ ಹಾಗು ಸಂಘದ ಉಪಾಧ್ಯಕ್ಷ ಈಶ್ವರ ಪೂಜಾರಿ ಮಾತನಾಡಿ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದಲ್ಲಿ ಮಾಡುತ್ತಿರುವ ಸೇವೆಯನ್ನ ಗುರುತಿಸಿ ಐದು ರಾಜ್ಯಗಳನ್ನು ಒಳಗೊಂಡ ನೈಋತ್ಯ ರೈಲ್ವೆ ವಿಭಾಗದ ಡಿ.ಆರ್‌.ಯು.ಸಿ.ಸಿ ಸದಸ್ಯರನ್ನಾಗಿ ಮಾಡಿರುವ ರಾಜ್ಯ ಸಭಾ ಸಂಸದರಾದ ಈರಣ್ಣ ಕಡಾಡಿಯವರಿಗೆ ಎಲ್ಲ ವಕೀಲರ ಪರವಾಗಿ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಎಸ್‌.ಡಿ.ಅಲ್ಲಪ್ಪನವರ, ಬಿ.ಎಮ್‌.ಮೂಲಿಮನಿ, ಸಿ.ಎಸ್‌. ಅಷ್ಟಗಿಮಠ ಎನ್‌.ಕೆ.ಕುಲಕರ್ಣಿ ಎಸ್‌.ಎಮ್‌. ಮುಡಗಲಿ ಡಿ.ವಾಯ್‌.ಗರಗದ, ಯು.ಸಿ. ಹೀರೆಮಠ ಎಸ್‌.ವಿ.ಹಿರೇಮಠ, ಪೂಜಾ ಹೊಳಿ ಐ.ಬಿ. ಸಿದ್ದಣ್ಣವರ ಸಿ.ಎಸ್‌.ಪಾಟೀಲ ರಮೆಶ ಕುರಬರ ಎಸ್‌.ಐ ಹೊಸಮನಿ ಎಸ್‌.ಎಫ್‌.ಕಾಡಣ್ಣವರ ಸುರೇಶ ಬೊಳಶೆಟ್ಟಿ ಜಗದೀಶ್ ಚಿಕ್ಕೊಪ್ಪ ರಾಜು ಬೊಳಶೆಟ್ಟಿ ಈರಣ್ಣ ಉಣಕಲ್ ಬಸವರಾಜ ಬೈಲವಾಡ ಸಿದ್ಧಲಿಂಗ ಬೋಳಶೆಟ್ಟಿ ನಾಗರಾಜ ತೋಟಗಿ ಆರ್‌.ಎಸ್‌.ಗೌಡರ ಎಮ್‌.ಎಮ್‌.ಅಲ್ಲಯ್ಯನವರಮಠಎಮ್‌.ಎಸ್‌. ಬಂಕಾಪೂರ ಸಕಲೀನ ನದಾಫ್‌ ಶಿವಾನಂದ ಬೆಳಗಾವಿ ಬಸವರಾಜ ಅಂಬಾಜಿ,ಇತರರು ಇದ್ದರು.ನ್ಯಾಯವಾದಿ ಶಂಕರ ಕರಿಕಟ್ಟಿ ಸ್ವಾಗತಿಸಿದರುಡಿ.ವಾಯ್‌.ಗರಗದ ನಿರೂಪಿಸಿದರು ಉಮೇಶ ಲಾಳ ವಂದಿಸಿದರು.